Home Mangalorean News Kannada News ಮಂಗಳೂರು: ಪ್ರಕೃತಿ ಚಿಕಿತ್ಸೆ ದಿನದ ಅಂಗವಾಗಿ ಯೆನೆಪೋಯ ದಿಂದ ಬೀದಿನಾಟಕ

ಮಂಗಳೂರು: ಪ್ರಕೃತಿ ಚಿಕಿತ್ಸೆ ದಿನದ ಅಂಗವಾಗಿ ಯೆನೆಪೋಯ ದಿಂದ ಬೀದಿನಾಟಕ

Spread the love

ಮಂಗಳೂರು: ಪ್ರಕೃತಿ ಚಿಕಿತ್ಸೆ ದಿನದ ಅಂಗವಾಗಿ ಯೆನೆಪೋಯ ದಿಂದ ಬೀದಿನಾಟಕ

ಮಂಗಳೂರು: ಯೆನೆಪೋಯ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜು ವಿದ್ಯಾರ್ಥಿಗಳಿಂದ 6 ನೇ ರಾಷ್ಟೀಯ ಪ್ರಕೃತಿ ಚಿಕಿತ್ಸೆ ದಿನಾಚರಣೆ ಅಂಗವಾಗಿ ನಾಟೆಕಲ್ ಬಸ್ಟ್ಯಾಂಡ್ ಬಳಿ ಬೀದಿನಾಟಕ ಆಯೋಜಿಸಲಾಯಿತು.

ಜನರಿಗೆ ಪ್ರಕೃತಿ ಚಿಕಿತ್ಸೆಯ ಮಹತ್ವವನ್ನು ನಾಟಕದ ಮೂಲಕ ಅರಿವು ಮೂಡಿಸಲಾಯಿತು. ಪ್ರಕೃತಿಯಲ್ಲಿ ಸಿಗುವಂತಹ ಆಹಾರದ ಪ್ರಾಮುಖ್ಯತೆ ತಿಳಿಸಲಾಯಿತು. ದಿನನಿತ್ಯ ಯೋಗಾಭ್ಯಾಸ ಮಾಡುವುದರ ಮೂಲಕ ಮಾನಸಿಕ ಅರೋಗ್ಯ ವ್ರಿದ್ಧಿಗೊಳಿಸಲು ಸಹಾಯವಾಗುತ್ತದೆ ಎಂಬ ಸಾರಾಂಶದ ಮೂಲಕ ಜನರಿಗೆ ಈ ಬೀದಿನಾಟಕ ಪ್ರದರ್ಶಿಸಿಸಲಾಯಿತು.

ಈ ಸಂದರ್ಭದಲ್ಲಿ ಯೆನೆಪೋಯದ ಶಿಬಿರಾಧಿಕಾರಿ ರಜಾಕ್ ರವರು, ಮಂಜನಾಡಿ ಪಂಚಾಯತ್ ಅಧ್ಯಕ್ಷರಾದ ಸರೋಜಿನಿ ಹಾಗೂ ಯೆನೆಪೋಯ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜು ವೈದ್ಯಾಧಿಕಾರಿಗಳಾದ ಡಾ. ಶಗುಪ್ತ, ಡಾ. ಅರ್ಪಿತ್ ಕುಮಾರ್ ಮತ್ತು ಅಜಿತ್ ರವರು ಉಪಸ್ಥಿತರಿದ್ದರು.


Spread the love

Exit mobile version