ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮದ ವಿದ್ಯಾಥರ್ಿನಿ, ಎಬಿವಿಪಿಯ ಕು. ಚೈತ್ರಾ ವಿರುದ್ದ ಫೇಸ್ಬುಕ್ನಲ್ಲಿ ಅವಹೇಳನಕಾರಿಯಾಗಿ ಬರೆದ ಮಂಗಳೂರು ಮುಸ್ಲಿಂ ಕುಡ್ಲದ ವಿರುದ್ದ ಕೇಸು ದಾಖಲಾಗಿದೆ. ಮಂಗಳೂರು ಮುಸ್ಲಿಂ ಕುಡ್ಲ ಎನ್ನುವ ಫೇಸ್ಬುಕ್ನಲ್ಲಿ ‘ ಅನಾಮದೇಯ ಮೊಬೈಲ್ ಸಂಖ್ಯೆಯಿಂದ ಬಂದ ಮೆಸೇಜ್ನ್ನು ನೋಡಿ ಅದರಿಂದ ಬೇಸತ್ತು ಕು. ಚೈತ್ರಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ’ ಎಂದು ಬರೆಯಲಾಗಿತ್ತು. ಈ ರೀತಿಯಾಗಿ ವಿದ್ಯಾಥರ್ಿನಿಯ ಬಗ್ಗೆ ಅವಹೇಳನಕಾರಿರಾಗಿ ಮತ್ತು ಅಸಭ್ಯವಾಗಿ ಬರೆದಿರುವ ವಿರುದ್ದವಾಗಿ ಅದರ ವಿರುದ್ದ ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಲಾಗಿದೆ.
ಇತ್ತೀಚೆಗೆ ಮಹಿಳೆಯರ ವಿರುದ್ದ ದೌರ್ಜನ್ಯಗಳು ಹೆಚ್ಚುತ್ತಿದ್ದು ಅದರಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ವಿದ್ಯಾಥರ್ಿನಿಯರ ವಿರುದ್ದ ಅಪಮಾನಕಾರಿಯಾಗಿ ಬರೆದು ವಿದ್ಯಾಥರ್ಿನಿಯರ ಆತ್ಮಸ್ಥೈರ್ಯ ಕುಸಿಯುವಂತೆ ಮಾಡುತ್ತಿದೆ. ಈ ರೀತಿಯ ಪ್ರಕರಣಗಳಿಂದ ಅನೇಕ ವಿದ್ಯಾಥರ್ಿನಿಯರ ಪ್ರಾಣ ಹಾನಿಯಾದ ಘಟನೆಗಳೂ ನಮ್ಮ ಮುಂದಿದೆ. ಕೆಲವು ತಿಂಗಳುಗಳ ಹಿಂದೆ ಮಂಗಳೂರಿನ ಪ್ರತಿಷ್ಠಿತ ಕಾಲೇಜು ವಿದ್ಯಾಥರ್ಿನಿಯರ ನಕಲಿ ಫೇಸ್ ಬುಕ್ ಅಕೌಂಟ್ನನ್ನು ರಚಿಸಿ ಅದರಲ್ಲಿ ವಿದ್ಯಾಥರ್ಿನಿಯರ ಬಗ್ಗೆ ಅವಹೇಳನಕಾರಿಯಾಗಿ ಬರೆಯಲಾಗಿತ್ತು, ಎಬಿವಿಪಿ ಆ ಸಂದರ್ಭದಲ್ಲಿ ಬೃಹತ್ ಹೋರಾಟ ಮಾಡಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿತ್ತು, ಆದರೆ ಅವರ ವಿರುದ್ದ ಕ್ರಮಕೈಗೊಳ್ಳದೆ ಇರುವುದರ ಪರಿಣಾಮ ಈ ರೀತಿಯ ಘಟನೆಗಳು ಮರುಕಳಿಸಿದೆ. ಹಾಗಾಗಿ ಪೊಲೀಸರು ಈ ಪ್ರಕರಣದ ಹಿಂದಿರುವ ವ್ಯಕ್ತಿಯನ್ನು ಬಂಧಿಸಿ ಶಿಕ್ಷಗೆ ಒಳಪಡಿಸಬೇಕೆಂದು ಎಬಿವಿಪಿ ಆಗ್ರಹಿಸುತ್ತದೆ.
ಮಂಗಳೂರು: ಫೇಸ್ಬುಕ್ನಲ್ಲಿ ಅವಹೇಳನಕಾರಿ ಬರಹ ಮುಸ್ಲಿಂ ಕುಡ್ಲದ ವಿರುದ್ದ ಕೇಸು ದಾಖಲು
Spread the love
Spread the love