ಮಂಗಳೂರು | ಫೋಕ್ಸೋ ಪ್ರಕರಣದ ಆರೋಪಿ ಜೈಲಿನಲ್ಲೇ ಆತ್ಮಹತ್ಯೆ

Spread the love

ಮಂಗಳೂರು | ಫೋಕ್ಸೋ ಪ್ರಕರಣದ ಆರೋಪಿ ಜೈಲಿನಲ್ಲೇ ಆತ್ಮಹತ್ಯೆ
ಮಂಗಳೂರು: ಪೋಕ್ಸೊ ಕೇಸಿನಲ್ಲಿ ಬಂಧಿಸಲ್ಪಟ್ಟ ವಿಚಾರಣಾಧೀನ ಕೈದಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ಬೆಳಿಗ್ಗೆ ಮಂಗಳೂರಿನ ಸಬ್ ಜೈಲಿನಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಕೈದಿಯನ್ನು ಮೂಡುಬಿದ್ರಿಯ ಮಹಾವೀರ್ ಕಾಲೇಜು ಮಾರಿಗುಡಿ ದೇವಸ್ಥಾನದ ಬಳಿಯ ಹುಡ್ಕೊ ಕಾಲೋನಿಯ ನಿವಾಸಿ ಗೋಪಾಲ್ ಮೂಲ್ಯ ಅವರ ಪುತ್ರ ಪ್ರಕಾಶ್ ಗೋಪಾಲ್ ಮೂಲ್ಯ (43) ಎಂದು ಗುರುತಿಸಲಾಗಿದೆ.
ಮೃತ ವ್ಯಕ್ತಿ, ಮೂಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಪ್ರಕರಣದಡಿಯಲ್ಲಿ ಬಂಧಿಸಲಾಗಿತ್ತು.
ಪ್ರಾಥಮಿಕ ಮಾಹಿತಿಯ ಪ್ರಕಾರ, ಜೈಲಿನ ಸೆಲ್ ಸಂಖ್ಯೆ 2 ರ ಬ್ಯಾರಕ್ ‘ಬಿ’ ನ ಶೌಚಾಲಯದಲ್ಲಿ ಕಿಟಕಿಯ ಗ್ರಿಲ್ ಗೆ ಕಟ್ಟಿದ ಟವಲ್ ಬಳಸಿ ಕೈದಿ ನೇಣು ಬಿಗಿದುಕೊಂಡಿದ್ದಾನೆ. ಈ ಘಟನೆಯನ್ನು ಕರ್ತವ್ಯದಲ್ಲಿದ್ದ ಸಿಬ್ಬಂದಿ ತಕ್ಷಣ ಗಮನಿಸಿದ್ದು, ಅವರನ್ನು ಜೈಲಿನ ಅಧಿಕೃತ ವಾಹನದಲ್ಲಿ ಮಂಗಳೂರಿನ ಸರ್ಕಾರಿ ವೆನ್ಲಾಕ್ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಪರೀಕ್ಷೆಯ ನಂತರ ಅವರನ್ನು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ
ಘಟನೆಗೆ ಸಂಬಂಧಿಸಿ ಬರ್ಕೆ ಪೊಲೀಸ್ ಠಾಣೆಯಲ್ಲಿ UDR ಸಂಖ್ಯೆ 06/2025 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. .


Spread the love
Subscribe
Notify of

0 Comments
Inline Feedbacks
View all comments