ಮಂಗಳೂರು| ಫ್ಲ್ಯಾಟ್‌ಗೆ ಅಕ್ರಮ ಪ್ರವೇಶಗೈದು ತಂಡದಿಂದ ದಾಂಧಲೆ: ಪ್ರಕರಣ ದಾಖಲು
ಮಂಗಳೂರು: ನಗರದ ಕದ್ರಿ ಶಿವಭಾಗ್ ರಸ್ತೆಯಲ್ಲಿರುವ ಫ್ಲ್ಯಾಟ್‌ಗೆ ಸುಮಾರು 15 ಮಂದಿಯ ತಂಡವೊಂದು ಅಕ್ರಮವಾಗಿ ಪ್ರವೇಶ ಮಾಡಿ ದಾಂಧಲೆ ನಡೆಸಿದ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕದ್ರಿ ನಿವಾಸಿಗಳಾದ ಹಮೀದ್, ವಿಲಿಯಂ ಜಿ.ಸಿ., ಪರಶುರಾಮ ಸಹಿತ 15 ಮಂದಿ ಹಲ್ಲೆ ನಡೆಸಿದ ಆರೋಪಿಗಳು ಎಂದು ದೂರಿನಲ್ಲಿ ತಿಳಿಸಲಾಗಿದೆ.
ನಗರದ ಶಿವಭಾಗ್ ರಸ್ತೆಯಲ್ಲಿನ ಕದ್ರಿ ಬಿ ಗ್ರಾಮದಲ್ಲಿರುವ ಅಶೋಕ್ ಮ್ಯಾನರ್ ಅಪಾರ್ಟ್ಮೆಂಟ್‌ನಲ್ಲಿ ಅಶೋಕ್ ರೈ ಫ್ಲ್ಯಾಟ್ ಹೊಂದಿದ್ದರು. ಅವರು ಬೆಂಗಳೂರಿನಲ್ಲಿರುವುದನ್ನು ತಿಳಿದ ಅದೇ ಫ್ಲ್ಯಾಟ್‌ನ ಮೂವರ ಸಹಿತ 15 ಮಂದಿ ತಂಡ ಮಾ.28ರಂದು ದಾಂಧಲೆ ನಡೆಸಿದ್ದಾರೆ. ಇದರಿಂದ ಸುಮಾರು 1 ಕೋ.ರೂ.ಗೂ ಅಧಿಕ ನಷ್ಟವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.