ಮಂಗಳೂರು: ಬಸ್ ನಿರ್ವಹಕನ ಶವ ಪತ್ತೆ – ಕೊಲೆ ಶಂಕೆ

Spread the love

ಮಂಗಳೂರು: ಬಸ್ ನಿರ್ವಹಕನ ಶವ ಪತ್ತೆ – ಕೊಲೆ ಶಂಕೆ

ಮಂಗಳೂರು: ಬಸ್ ನಿರ್ವಾಹಕನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯ ಶವ ನೆಹರೂ ಮೈದಾನದ ಇಂದಿರಾ ಕ್ಯಾಂಟಿನ್ ಪರಿಸರದಲ್ಲಿ ಪತೆಯಾಗಿದೆ.

ಮೃತ ವ್ಯಕ್ತಿಯನ್ನು ಮಂಗಳೂರು-ವಿಟ್ಲ ಮಧ್ಯೆ ಸಂಚರಿಸುತ್ತಿದ್ದ ಫಲ್ಗುಣಿ, ಸೆಲಿನಾ ಬಸ್ಸುಗಳಲ್ಲಿ ನಿರ್ವಾಹಕನಾಗಿ ದುಡಿಯುತ್ತಿದ್ದ ರಾಜೇಶ್(30) ಎಂದು ಗುರುತಿಸಲಾಗಿದೆ.

ಸೋಮವಾರ ಬೆಳಗ್ಗೆ ಇಂದಿರಾ ಕ್ಯಾಂಟೀನ್ ಪರಿಸರದಲ್ಲಿ ಅನಾಥ ಸ್ಥಿತಿಯಲ್ಲಿ ಕಂಡಕ್ಟರ್ ರಾಜೇಶನ ಜರ್ಜರಿತವಾದ ಮೃತದೇಹ ಪತ್ತೆಯಾಗಿತ್ತು. ಸ್ಥಳಕ್ಕಾಗಮಿಸಿದ ಪಾಂಡೇಶ್ವರ ಠಾಣಾ ಪೊಲೀಸರು ಮೃತದೇಹವನ್ನು ವಾರೀಸುದಾರರು ಯಾರೂ ಬಂದಿಲ್ಲದ ಕಾರಣ ವೆನ್ ಲಾಕ್ ಶವಾಗಾರದಲ್ಲಿ ಇರಿಸಿದ್ದಾರೆ. ಮನೆಯವರು, ಸಂಬಂಧಿಕರು ಯಾರು, ಎಲ್ಲಿಯವರೆಂಬ ಬಗ್ಗೆ ಈವರೆಗೂ ಮಾಹಿತಿ ಲಭ್ಯವಾಗಿಲ್ಲ.
ಪ್ರ

ತಿ ವರ್ಷವೂ ಶಬರಿಮಲೆ ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಮಾಲೆ ಧರಿಸಿ ಹೋಗುತ್ತಿದ್ದ ರಾಜೇಶ್ ಸರಳ ಸ್ವಭಾವದವನಾಗಿದ್ದು ಎಲ್ಲರೊಂದಿಗೂ ಆತ್ಮೀಯವಾಗಿ ಬೆರೆಯುತ್ತಿದ್ದನೆಂದು ಸಹೋದ್ಯೋಗಿ ಮಿತ್ರರು ತಿಳಿಸಿದ್ದಾರೆ. ಆದರೆ ಈವರೆಗೂ ರಾಜೇಶ್ ಎಲ್ಲಿಯವನೆಂಬ ಬಗ್ಗೆಯಾಗಲೀ, ಆತನ ಪೋಷಕರು, ಸಂಬಂಧಿಕರು’ ಯಾರೆಂಬ ಬಗ್ಗೆ ಸಹೋದ್ಯೋಗಿಗಳಿಗೆ, ಮಿತ್ರರಿಗೆ ತಿಳಿದಿಲ್ಲವಾಗಿದೆ.

ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ


Spread the love