Home Mangalorean News Kannada News ಮಂಗಳೂರು : ಬಾಲಕಾರ್ಮಿಕ ಕಾನೂನು ಅರಿವು ಕಾರ್ಯಾಗಾರ 

ಮಂಗಳೂರು : ಬಾಲಕಾರ್ಮಿಕ ಕಾನೂನು ಅರಿವು ಕಾರ್ಯಾಗಾರ 

Spread the love

ಮಂಗಳೂರು : ಬಾಲಕಾರ್ಮಿಕ ಕಾನೂನು ಅರಿವು ಕಾರ್ಯಾಗಾರ 

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯು ವಿದ್ಯಾವಂತರ ಜಿಲ್ಲೆಯಾಗಿದ್ದು ಇತರೆ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ನಮ್ಮ ಜಿಲ್ಲೆಯಲ್ಲಿ ಬಾಲ ಕಾರ್ಮಿಕ ಸಮಸ್ಯೆಯು ತುಂಬಾ ಕಡಿಮೆ ಎಂದು ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶ ರವಿ ಎಮ್ ನಾಯಕ್ ಹೇಳಿದರು.

ಶುಕ್ರವಾರ ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಂಘ, ದಕ್ಷಿಣ ಕನ್ನಡ ಜಿಲ್ಲೆ ಇದರ ಸಂಯುಕ್ತ ಆಶ್ರಯದಲ್ಲಿ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ (ನಿಷೇದ ಮತ್ತು ನಿಯಂತ್ರಣ) ಕಾಯ್ದೆ- 1986 ರಡಿ ಕಾನೂನು ಅರಿವು ಕಾರ್ಯಾಗಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಂವಿಧಾನದಲ್ಲಿ 21 ನೇ ಪರಿಚ್ಚೇದದಲ್ಲಿ ಮಹಿಳೆ ಮತ್ತು ಮಕ್ಕಳ ಬಗ್ಗೆ ಸಂಬಂಧಿಸಿದ ಪ್ರಮುಖ ಕಾಯ್ದೆ ಇದೆ. ಕಿಶೋರಾವಸ್ಥೆಯ ಅಡಿಯಲ್ಲಿ ಬರುವ ಮಕ್ಕಳನ್ನು ನಿಗದಿತ ಸಮಯದವರೆಗೆ ಮಾತ್ರ ದುಡಿಸಿಕೊಳ್ಳಬಹುದು, ಅವರಿಗೆ ವಾರಕ್ಕೆ ಒಂದು ದಿನ ಸಂಪೂರ್ಣ ರಜೆ ನೀಡಬೇಕು. ಈ ದಿನಗಳಲ್ಲಿ ಬಾಲ ಕಾರ್ಮಿಕರನ್ನು ಹಲವು ಕಾರ್ಖಾನೆಯಲ್ಲಿ ಆಕ್ರಮವಾಗಿ ದುಡಿಸಿಕೊಳ್ಳುತ್ತಿದ್ದು, ಅವರಿಗೆ ಯಾವುದೇ ಮೂಲ ಸೌಲಭ್ಯ ನೀಡದಿರುವುದನ್ನು ನಾವು ಕಾಣಬಹುದಾಗಿದೆ. ಇಂತಹ ಕಾರ್ಖಾನೆ ವಿರುದ್ಧ ಪೋಲಿಸ್ ಕೇಸ್ ದಾಖಲು ಮಾಡಿಕೊಳ್ಳುವ ಸಂದರ್ಭದಲ್ಲಿ ಸಂಬಂಧಪಟ್ಟ ಸಂಪೂರ್ಣ ಮಾಹಿತಿ ನೀಡಬೇಕು ಮತ್ತು ಯಾವುದೇ ದ್ವೇಷದ ಆಧಾರದ ಮೇಲೆ ಕೇಸ್ ದಾಖಲಿಸಬಾರದು ಎಂದು ಸೂಚನೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತಾನಾಡಿದ ದ.ಕ ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ಬಾಲ ಕಾರ್ಮಿಕ ನಿರ್ಮೂಲನೆಗೆ ನಾವು ಒಂದಾಗಿ ಕೈ ಜೋಡಿಸಬೇಕು. ಮಕ್ಕಳು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಸಮಾಜಕ್ಕೆ ಹೆಸರು ತರುವಂತಹಾ ಕೆಲಸ ಮಾಡಬೇಕು ಆದುದರಿಂದ ಎಲ್ಲ ಮಕ್ಕಳನ್ನು ನಮ್ಮೆಲ್ಲರ ಕಣ್ಣಿನಂತೆ ಕಾಪಾಡಬೇಕು ಎಲ್ಲ ಇಲಾಖೆಯ ಅಧಿಕಾರಿಗಳು ಯಾವುದೇ ತಾರತಾಮ್ಯ ಮಾಡದೇ ಮಕ್ಕಳ ಮೇಲೆ ನಡೆಯುವಂತಹಾ ದೌರ್ಜನ್ಯಕ್ಕೆ ಬರೆ ಎಳೆಯಬೇಕು ಎಂದರು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ ವಕೀಲ ನಿಕೇಶ್ ಶೆಟ್ಟಿ, ಹಿರಿಯ ಸಿವಿಲ್ ನ್ಯಾಯಾಧೀಶ ಗಂಗಾಧರ, ಎ.ಜೆ., ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಬಿ.ಎಂ. ಲಕ್ಷ್ಮೀ ಪ್ರಸಾದ್, ಸಹಾಯಕ ಕಾರ್ಮಿಕ ಆಯುಕ್ತರು, ಕೆ.ಬಿ ನಾಗರಾಜ್, ಸಾರ್ವಜನಿಕ ಶಿಕ್ಷಣ ಉಪ ನಿರ್ದೇಶಕ ವಾಲ್ಟರ್ ಡಿ ಮೆಲ್ಲೋ, , ದಲಿತ್ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಡಿ.ಕೆ ಶೇಷಪ್ಪ, ಬೆದ್ದಕಾಡು, ಪ್ರಜ್ಞಾ ಕೌನ್ಸಿಲಿಂಗ್ ನಿರ್ದೇಶಕಿ, ಹೀಲ್ಡಾರಾಯಪ್ಪನ್, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ, ಯೋಜನಾ ನಿರ್ದೇಶಕ ಶ್ರೀನಿವಾಸ, ಇನ್ನಿತರರು ಉಪಸ್ಥಿತರಿದ್ದರು.


Spread the love

Exit mobile version