ಮಂಗಳೂರು: ಬಿಹಾರ ಮೂಲದ ಯುವಕ ನಾಪತ್ತೆ- ಗುರುತು ಪತ್ತೆಗೆ ಮನವಿ

Spread the love

ಮಂಗಳೂರು: ಬಿಹಾರ ಮೂಲದ ಯುವಕ ನಾಪತ್ತೆ-  ಗುರುತು ಪತ್ತೆಗೆ ಮನವಿ

ಮಂಗಳೂರು: ನಗರದ ತಣ್ಣೀರುಬಾವಿ ಮಸೀದಿ ಬಳಿ ವಾಸವಾಗಿದ್ದ ಬಿಹಾರ ಮೂಲದ ಪ್ರೇಮ್ ಜಿತ್ ಯಾನೆ ಪಂಕಜ್ ಕುಮಾರ್ (14) ಎಂಬ ಯುವಕ ಜನವರಿ 6 ರಂದು ಮನೆಯಿಂದ ಹೋದವರು ವಾಪಾಸ್ಸು ಬಾರದೆ ಕಾಣೆಯಾಗಿರುತ್ತಾರೆ.

ಹರೆ ಗುರುತು:- ಸುಮಾರು 5 ಅಡಿ 2 ಇಂಚು ಎತ್ತರ, ಗೋಧಿ ಮೈಬಣ್ಣ, ಕುತ್ತಿಗೆಯಲ್ಲಿ ಕೆಂಪು ಬಣ್ಣದ ದಾರ ಮತ್ತು ತಾಯತ ಇದೆ. ಎಡಕೈ ಯಲ್ಲಿ ಲೋಹದ ಖಡಗ ಧರಿಸಿರುತ್ತಾನೆ. ಬಲ ತೊಡೆಯಲ್ಲಿ ಹಳೆಯ ಶಸ್ತ್ರ ಚಿಕಿತ್ಸೆಯ ಗುರುತು ಇದೆ. ಕಾನಾಎಯಾದ ದಿನ ಕಪ್ಪು ಚೌಕುಳಿಗಳಿರುವ ಹಳದಿ ಬಣ್ಣದ ಶರ್ಟ್, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿರುತ್ತಾನೆ. ಹಿಂದಿ ಮತ್ತು ಭೋಜ್ ಪುರಿ ಭಾಷೆ ಮಾತಾಡುತ್ತಾನೆ.

ಬಾಲಕನ ಬಗ್ಗೆ ಮಾಹಿತಿ ದೊರೆತಲ್ಲಿ ಪಣಂಬೂರು ಪೊಲೀಸ್ ಠಾಣೆ ದೂ.ಸಂಖ್ಯೆ:0824-2220530, 9480805355, 9480805331 ಮಂಗಳೂರು ನಗರ ಕಂಟ್ರೋಲ್ ರೂಮ್ ಸಂಖ್ಯೆ: 0824-2220800 ಸಂಪರ್ಕಿಸುವಂತೆ ಠಾಣಾಧಿಕಾರಿ ಪ್ರಕಟಣೆ ತಿಳಿಸಿದೆ.


Spread the love
Subscribe
Notify of

0 Comments
Inline Feedbacks
View all comments