ಮಂಗಳೂರು: ಬೃಹತ್ ನಕಲಿ ಅಂಕಪಟ್ಟಿ ಅಂತರಾಜ್ಯಜಾಲ ಪತ್ತೆ ಇಬ್ಬರ ಬಂಧನ

Spread the love

ಮಂಗಳೂರು: ನಗರದ ಕಂಕನಾಡಿ – ಪಂಪವೆಲ್ ರಸ್ತೆಯಲ್ಲಿರುವ Mangalore Institute of Management and Engineering  ಎಂಬ ಕಾಲೇಜಿನ ಕಛೇರಿಯಲ್ಲಿ ನಕಲಿ ಅಂಕಪಟ್ಟಿಯನ್ನು ತಯಾರಿಸಿ ಹಣಕ್ಕಾಗಿ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿ ನಕಲಿ ಅಂಕಪಟ್ಟಿಗಳನ್ನು ವಶಪಡಿಸಿಕೊಂಡು ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದ ಬೃಹತ್ ಜಾಲವನ್ನು ಪತ್ತೆಹಚ್ಚಲು ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿರುತ್ತಾರೆ.

askan-gautam-20160209

ಬಂಧಿತರನ್ನು ಪೆರ್ಮನ್ನೂರು ಚೆಂಬುಗುಡ್ಡೆ ನಿವಾಸಿ ಅಸ್ಕಾನ್ ಶೇಖ್, (22), ಮತ್ತು ಕುಳೂರು ನಿವಾಸಿ ಗೌತಮ್ ಆರ್,  (32) ಎಂದು ಗುರುತಿಸಲಾಗಿದೆ.

ಮಂಗಳೂರು ನಗರದ ಕಂಕನಾಡಿ ಪಂಪ್ ವೆಲ್ ರಸ್ತೆಯಲ್ಲಿರುವ ತೃಪ್ತಿ ಕಾಂಪ್ಲೆಕ್ಸ್ ನ Mangalore Institute of Management and Engineering  ಎಂಬ ಸಂಸ್ಥೆಯಲ್ಲಿ ವಿವಿಧ ವಿಶ್ವವಿದ್ಯಾನಿಲಯಗಳ ಹಾಗೂ ಶಿಕ್ಷಣ ಸಂಸ್ಥೆಗಳ ನಕಲಿ ಸರ್ಟಫೀಕೇಟ್ ಗಳನ್ನು ತಯಾರಿಸಿ ಹಣಕ್ಕಾಗಿ ಮಾರಾಟ ಮಾಡಿ ವಂಚಿಸುತ್ತಿದ್ದ ಬಗ್ಗೆ ಸಿಸಿಬಿ ಪೊಲೀಸ್ ನಿರೀಕ್ಷಕರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ Eduexcel Consultancy  ಎಂಬಲ್ಲಿಗೆ ದಾಳಿ ಮಾಡಿ ಈ ಕೃತ್ಯವನ್ನು ನಡೆಸುತ್ತಿದ್ದ ಆರೋಪಿಗಳನ್ನು  ದಸ್ತಗಿರಿ ವಶಕ್ಕೆ ಪಡೆದುಕೊಂಡಿರುತ್ತಾರೆ.

ಆರೋಪಿಗಳು ನಕಲಿ ಪ್ರಮಾಣ ಪತ್ರವನ್ನು ತಯಾರಿಸುತ್ತಿದ್ದ ವಿಶ್ವವಿದ್ಯಾನಿಲಯ/ ವಿದ್ಯಾಸಂಸ್ಥೆಗಳ ಹೆಸರು 

1)      Dr Bhimrao Ambedkar University, Agra

2)      Alpha Institute of Management and Technology Science

3)      VTU, Belgaum

4)      Shridhar University, Pilani, Rajasthan

5)      Techno Globe University, Shillong, Meghalaya

6)      Karnataka State Open University

7)      Indira Gandhi Institute of Technology and Management

8)    Kumar Bhaskar Varma Sanskrit and Ancient studies University, Nalbavi,Assam

9)      All India Higher Education Board

10)   Mangalore Institute of management and Engineering.

11)   Alpha institute of management and Technology science, Bangalore

ಆರೋಪಿಗಳ ಈ ಸಂಸ್ಥೆಯಿಂದ ಸುಮಾರು 150 ಕ್ಕೂ ಹೆಚ್ಚು ಮಂದಿ SSLC/PUC/DEGREE/DIPLOMA/B Tech  ಪದವಿಗಳ ನಕಲಿ ಅಂಕಪಟ್ಟಿಗಳನ್ನು ಪಡೆದುಕೊಂಡಿರುವ ಬಗ್ಗೆ ಮಾಹಿತಿಯಿರುತ್ತದೆ. ಆರೋಪಿಗಳ ಪೈಕಿ ಅಸ್ಕಾನ್ ಶೇಖ್ ಎಂಬಾತನು Mangalore Institute of Management and Engineering ಎಂಬ ಸಂಸ್ಥೆಯನ್ನು 2015 ನೇ ಜೂನ್ ತಿಂಗಳಲ್ಲಿ ಪ್ರಾರಂಬಿಸಿದ್ದು, ಇದೇ ಸಂಸ್ಥೆಯಲ್ಲಿ 2010 ನೇ ಇಸವಿಯಲ್ಲಿ ವ್ಯಾಸಂಗ ಮಾಡಿರುತ್ತಾರೆ ಎಂಬುದಾಗಿ ನಕಲಿ ಸರ್ಟಿಫೀಕೇಟ್ ಗಳನ್ನು ತಯಾರಿಸಿ  ಹಣವನ್ನು ಪಡೆದು ಹಲವಾರು ಅಭ್ಯರ್ಥಿಗಳಿಗೆ ನೀಡಿರುತ್ತಾರೆ.ಆರೋಪಿಗಳ ಸಂಸ್ಥೆಗೆ  ನಕಲಿ ಅಂಕಪಟ್ಟಿಗಾಗಿ ಬರುತ್ತಿದ್ದ ವಿದ್ಯಾರ್ಥಿಗಳಿಗೆ ಹಾಗೂ ನಿರುದ್ಯೋಗಿಗಳಿಗೆ ಅವರ ಮಾಹಿತಿಯನ್ನು ಪಡೆದು ಒಂದು ವಾರದ ಒಳಗಡೆ ಅವರಿಗೆ ಬೇಕಾದ ಡಿಗ್ರಿಗಳ ಅಂಕಪಟ್ಟಿಗಳನ್ನು ತಯಾರಿಸಿ ನೀಡುತ್ತಿದ್ದನು. ಈ ಸಂಸ್ಥೆಯಲ್ಲಿ ಎಸ್ಎಸ್ಎಲ್ ಸಿ ಮತ್ತು ಪಿಯುಸಿ ನಕಲಿ ಸರ್ಟಿಫಿಕೇಟ್ ಗೆ ರೂ. 10,000/- ಮತ್ತು ಡಿಗ್ರಿ ಹಾಗೂ ಡಿಪ್ಲೋಮಾ ಸರ್ಟಿಫಿಕೇಟ್ ಗೆ ರೂ. 35,000/- ಮತ್ತು ಎಂಬಿಎ ಸರ್ಟಿಫಿಕೇಟ್ ಗೆ ರೂ. 45,000/- ದರವನ್ನು ನಿಗದಿಪಡಿಸಿ ಹಣವನ್ನು ಪಡೆದುಕೊಳ್ಳುತ್ತಿದ್ದನು. ಆರೋಪಿಗಳು Mangalore Public School ಎಂಬ ಶಿಕ್ಷಣ ಸಂಸ್ಥೆ ಎಂಬ ನಕಲಿ ಶಿಕ್ಷಣ ಸಂಸ್ಥೆಯ ಹೆಸರಿನಲ್ಲಿ 10 ನೇ ತರಗತಿಯ ವ್ಯಾಸಂಗವನ್ನು  Mangalore Public School ನಲ್ಲಿ ವ್ಯಾಸಂಗ ಮಾಡಿರುತ್ತಾರೆ ಎಂಬುದಾಗಿ ನಕಲಿ ದಾಖಲೆ ಪತ್ರಗಳನ್ನು ಸೃಷ್ಠಿಸಿ ಈ ಮೂಲಕ 10 ತರಗತಿ ಪರೀಕ್ಷೆಯ ಅಂಕ ಪಟ್ಟಿಗಳನ್ನು ತಯಾರಿಸಿ ನೀಡುತ್ತಿದ್ದರು.

ಆರೋಪಿಗಳ ವಶದಿಂದ ವಿವಿಧ ವಿಶ್ವವಿದ್ಯಾನಿಲಯ ಹಾಗೂ ಶಿಕ್ಷಣ ಸಂಸ್ಥೆಯಿಂದ ನೀಡಿದೆನ್ನಲಾದ 3 ಲ್ಯಾಪ್ ಟಾಪ್, 18 ನಕಲಿ ಸೀಲುಗಳು, ನಕಲಿ ಅಂಕಪಟ್ಟಿಗಳನ್ನು ತಯಾರಿಸುವ ಪ್ರಿಂಟರ್, ನಕಲಿ ಅಂಕಪಟ್ಟಿಗಳನ್ನು ತಯಾರಿಸುವ ಪೇಪರ್, ಅಂಕಪಟ್ಟಿಗಳಿಗೆ ಹಾಕುವ ಹೋಲೋಗ್ರಾಂ ಸ್ಟಿಕ್ಕರ್ ಗಳು,ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ಹಾಗೂ ವಶಪಡಿಸಿಕೊಂಡ ಸೊತ್ತುಗಳನ್ನು ಮುಂದಿನ ಕ್ರಮಕ್ಕಾಗಿ ಮಂಗಳೂರು ಪೂರ್ವ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.

ಸಿ.ಸಿ.ಬಿ ಘಟಕದ ಇನ್ಸಪೆಕ್ಟರ್ ವೆಲೆಂಟೈನ್ ಡಿಸೋಜ, ಪಿ.ಎಸ್.ಐ  ಶ್ಯಾಮ್ ಸುಂದರ್ ಹಾಗೂ ಸಿಬ್ಬಂದಿಗಳು  ಪತ್ತೆಕಾರ್ಯದಲ್ಲಿ ಭಾಗವಹಿಸಿದ್ದರು.


Spread the love