Home Mangalorean News Kannada News ಮಂಗಳೂರು: ಬೆಸೆಂಟ್ ಮಹಿಳಾ ಕಾಲೇಜಿನಲ್ಲಿ ಕಾನೂನು ಜಾಗೃತಿ ಕಾರ್ಯಕ್ರಮ

ಮಂಗಳೂರು: ಬೆಸೆಂಟ್ ಮಹಿಳಾ ಕಾಲೇಜಿನಲ್ಲಿ ಕಾನೂನು ಜಾಗೃತಿ ಕಾರ್ಯಕ್ರಮ

Spread the love

ಮಂಗಳೂರು: ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಂಗಳೂರು ನಗರ ಪೋಲಿಸ್ ಕಮೀಷನರೇಟ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಬೆಸೆಂಟ್ ಮಹಿಳಾ ಕಾಲೇಜಿನ ಜಂಟಿ ಆಶ್ರಯದಲ್ಲಿ “ಕಾನೂನು ಜಾಗೃತಿ” ಕಾರ್ಯಕ್ರಮದ ಪ್ರಯುಕ್ತ ಲೈಂಗಿಕ ದೌರ್ಜನ್ಯದ ಬಗೆಗಿರುವ ಕಾನೂನುಗಳು ಹಾಗೂ ಸ್ವರಕ್ಷಣ ತಂತ್ರಗಳ ಬಗ್ಗೆ ಕಾರ್ಯಗಾರವು ದಿನಾಂಕ 23-01-2016 ರಂದು ಬೆಸೆಂಟ್ ಮಹಿಳಾ ಕಾಲೇಜಿನ ಸಭಾಂಗಣದಲ್ಲಿ ಮಾನ್ಯ ಗೌರವಾನ್ವಿತ ನಾಲ್ಕನೇಯ ಅಧೀನ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀಮತಿ ನೇರಳೆ ವೀರಭದ್ರಯ್ಯ ಭವಾನಿಯವರಿಂದ ಉದ್ಘಾಟನೆಗೊಂಡಿತು.

ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿ, ಜಿಲಾ ಕಾನೂನು ಸೇವಾ ಪ್ರಾಧಿಕಾರ ದಕ್ಷಿಣ ಕನ್ನಡ ಜಿಲ್ಲೆಯ ಶ್ರೀ ಗಣೇಶ್ ಬಿ., ಹಾಗೂ ಮಂಗಳೂರು ಬಾರ್ ಅಸೋಸಿಯೇಶನ್‍ನ ಅಧ್ಯಕ್ಷರಾದ ಶ್ರೀ ಎಸ್.ಪಿ. ಚೆಂಗಪ್ಪ ಇವರುಗಳು ಮುಖ್ಯ ಅತಿಥಿಗಳಾಗಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಸುಲೋಚನ ನಾರಾಯಣ್ ಇವರು ವಹಿಸಿದ್ದರು. ಕಾಲೇಜಿನ ಸಂಚಾಲಕರಾದ ಶ್ರೀಯುತ ಕೆ. ದೇವಾನಂದ ಪೈಯವರು ಉಪಸ್ಥಿತರಿದ್ದರು. ಮಹಿಳೆಯರ ಸ್ವರಕ್ಷಣಾ ತಂತ್ರಗಳ ಬಗ್ಗೆ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆಯನ್ನು ಕು. ಗಾಯತ್ರಿ ಸಿ. ವಕೀಲರು, ಮಂಗಳೂರು ಬಾರ್ ಅಸೋಸಿಯೇಶನ್, ಮಂಗಳೂರು ಇವರು ನೀಡಿದರು. ಸಂಪನ್ಮೂಲ ವ್ಯಕ್ತಿಯಾಗಿ ಶ್ರೀಮತಿ ರಾಧ ಕೆ., ಮೇಲ್ವಿಚಾರಕರು, ಸಿ.ಡಿ.ಪಿ.ಒ. ಮಂಗಳೂರು, ಇವರು ಆಗಮಿಸಿದ್ದರು.

ಶ್ರೀಮತಿ ಕಲಾವತಿ, ಮಹಿಳಾ ಪೋಲಿಸ್ ಠಾಣೆ, ಮಂಗಳೂರು ನಗರ ಇವರು ಉಪಸ್ಥಿತರಿದ್ದರು.  ಶ್ರೀಮತಿ ರವಿಪ್ರಭರವರು ಅತಿಥಿಗಳನ್ನು ಸ್ವಾಗತಿಸಿದರು ಹಾಗೂ ಶ್ರೀಮತಿ ಗಾಯತ್ರಿ ಇವರು ವಂದನಾರ್ಪಣೆಗೈದರು. ಕುಮಾರಿ ಸ್ವಾತಿ, ತೃತೀಯ ಬಿ.ಕಾಂ. ಇವರು ಕಾರ್ಯಕ್ರಮವನ್ನು ನಿರೂಪಿಸಿದರು.


Spread the love

Exit mobile version