ಮಂಗಳೂರು: ಕಾಡಿಗೆ ಮೀನು ಹಿಡಿಯಲು ತೆರಳಿದ ವೇಳೆ ಬೇಟೆಗಾರರ ಗುಂಡು ತಗಲಿ ವ್ಯಕ್ತಿಯೋರ್ವರ ಸಾವಿಗೆ ಕಾರಣರಾದ ಆರೋಪಿಗಳನ್ನು ಸುಳ್ಯ ಪೋಲಿಸರು ಬಂಧಿಸಿದ್ದಾರೆ.
ಬಂದಿತರನ್ನು ರಾಮಚಂದ್ರ ನಾಯ್ಕ (41), ಕುದ್ರೆ ಪಾಯ ಚಳ್ಳಂಗಾಯ ಮನೆ, ಕೊಡಗು ಮತ್ತು ವಿಶ್ವನಾಥ ನಾಯ್ಕ(38) ಕುದ್ರೆ ಪಾಯ ಚಳ್ಳಂಗಾಯ ಮನೆ, ಕೊಡಗು ಎಂದು ಗುರುತಿಸಲಾಗಿದೆ
ಘಟನೆಯ ವಿವರ ಫೆಬ್ರವರಿ 9 ರಂದು ರಾತ್ರಿ ಸುಳ್ಯ ತಾಲೂಕು ತೊಡಿಕಾನ ಗ್ರಾಮದ ಚೈಪೆ ಎಂಬಲ್ಲಿ ಕಾಡಿಗೆ ಮೀನು ಹಿಡಿಯಲು ಹೋದ ಜಯರಾಮ ನಾಯ್ಕ, ಹರೀಶ್ ನಾಯ, ಹರೀಶ್ ಪಟ್ರಕೋಡಿ, ದೀಕ್ಷಿತ್ ಹಾಗೂ ವೇಣುಗೋಪಾಲ ಎಂಬವರ ಪೈಕಿ ಜಯರಾಮ ನಾಯ್ಕ ಎಂಬವನು ಕಾಡು ಪ್ರಾಣಿ ಬೇಟೆಗಾರರ ಗುಂಡು ತಗುಲಿ ಮೃತಪಟ್ಟಿದ್ದರು. ಘಟನೆ ಕುರಿತು ಸುಳ್ಯ ಪೋಲಿಸ್ ಠಾನೆಯಲ್ಲಿ ಸೋಮಣ್ಣ ನಾಯ್ಕ ದೂರು ದಾಖಲಿಸಿದ್ದರು.
ಪ್ರಕರಣವು ದಿನಕ್ಕೊಂದು ತಿರುವು ಪಡೆಯುತ್ತಾ ಕುತೂಹಲ ಪಡೆದುಕೊಂಡಿತ್ತು. ಸದ್ರಿ ದಿನ ಪ್ರಾಣಿ ಬೇಟೆಗೆ ತೆರಳಿದವರ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದ ಸಮಯ ಸಿ.ಕೆ ರಾಮಚಂದ್ರ ನಾಯ್ಕ ಮತ್ತು ವಿಶ್ವನಾಥ ನಾಯ್ಕ ಎಂಬವರು ಕಾಡು ಪ್ರಾಣಿ ಬೇಟೆಗೆ ತೆರಳಿರುವ ಬಗ್ಗೆ ಬಾತ್ಮಿದಾರರಿಂದ ಮಾಹಿತಿ ಪಡೆದು ಆರೋಪಿಗಳ ದಸ್ತಗಿರಿ ಬಗ್ಗೆ ಬಲೆ ಬೀಸಲಾಗಿತ್ತು. ತನಿಖೆ ಚುರುಕುಗೊಳಿಸಿ ಆರೋಪಿಗಳಾದ ರಾಮಚಂದ್ರ ನಾಯ್ಕ ಮತ್ತು ವಿಶ್ವನಾಥ ನಾಯ್ಕ ರವರು ಮಡಿಕೇರಿ ಕಡೆಗೆ ತಲೆಮರೆಸಿಕೊಳ್ಳಲು ತೆರಳುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದು ಮಡಿಕೇರಿ ತಾಲೂಕು ಸಂಪಾಜೆ ಗ್ರಾಮದ ಕೊಯನಾಡು ಎಂಬಲ್ಲಿಂದ ವಶಕ್ಕೆ ತೆಗದುಕೊಳ್ಳಲಾಗಿದೆ. ಆರೋಪಿಗಳು ವಿಚಾರಣೆ ಸಮಯ ನೀಡಿದ ಸುಳಿವಿನಂತೆ ಕೃತ್ಯಕ್ಕೆ ಉಪಯೋಗಿಸಿದ ಕೋವಿ, ಮದ್ದುಗುಂಡು ಟಾರ್ಚ್‌ಲೈಟ್ ಹಾಗೂ ಬಟ್ಟೆಗಳನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ.
ಪ್ರಕರಣವನ್ನು ಭೇದಿಸುವಲ್ಲಿ ದ.ಕ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿನ್ಸೆಂಟ್ ಶಾಂತಕುಮಾರ್, ಪುತ್ತೂರು ಉಪಭಾಗದ ಸಹಾಯಕ ಪೊಲೀಸ್ ಅಧೀಕ್ಷರಾದ ಸಿ.ಬಿ ರಿಷ್ಯಂತ್, ಐಪಿಎಸ್ ಪ್ರೊಬೇಷನರಿ ಸಹಾಯಕ ಪೊಲೀಸ್ ಅಧೀಕ್ಷಕರಾದ ಲಕ್ಷ್ಮಣ ನಿಂಬರ್ಗಿ ಐ.ಪಿ.ಎಸ್, ಸುಳ್ಯ ಪೊಲೀಸ್ ವೃತ್ತ ನಿರೀಕ್ಷರಾದ ಸತೀಶ್ ಬಿ.ಎಸ್, ಸುಳ್ಯ ಠಾಣಾ ಪೊಲೀಸು ಪೊಲೀಸ್ ಉಪನಿರೀಕ್ಷಕರುಗಳಾದ ಚಂದ್ರಶೇಖರ ಹೆಚ್ ವಿ, ಸಂಜಯ ಕಲ್ಲೂರ ಸಿಬ್ಬಂದಿಳಾದ ಕೃಷ್ಣಯ್ಯ, ಮಾಧವ, ರಾಧಕೃಷ್ಣ, ದೇವರಾಜ್, ಬಾಲಕೃಷ್ಣ, ವಿಜಯಕುಮಾರ್, ಪುನಿತ್‌ಕುಮಾರ್, ಯೋಗಿತಾ, ಯಜ್ಞನಾರಾಯಣ, ಹನುಮಂತ ಗೃಹರಕ್ಷಕ ದಳದ ಸಿಬ್ಬಂದಿಗಳಾದ ಸಚಿನ್ ಮತ್ತು ಗಿರಿಧರ್ ರವರು ಸಹಕರಿಸಿರುತ್ತಾರೆ. ಸದರಿ ಪ್ರಕರಣದಲ್ಲಿ ಶೃದ್ದೆ ಹಾಗೂ ಪ್ರಮಾಣಿಕವಾಗಿ ಕರ್ತವ್ಯ ನಿರ್ವಹಿಸಿ, ಪ್ರಕರಣವನ್ನು ಭೇದಿಸಲು ಸಹಕರಿಸಿದ ಅಧಿಕಾರಿ/ಸಿಬ್ಬಂಧಿಗಳ ಕಾರ್ಯವೈಖರಿಗಳನ್ನು ಹಿರಿಯ ಅಧಿಕಾರಿಗಳು ಪ್ರಶಂಸಿರುತ್ತಾರೆ. ಅಲ್ಲದೇ ಪತ್ತೆ ಹಚ್ಚಿದ ತಂಡಕ್ಕೆ ಸೂಕ್ತ ನಗದು ಬಹುಮಾನ ಘೋಷಿಸಲಾಗಿದೆ