ಮಂಗಳೂರು: ಬೈಕ್ ಸ್ಕಿಡ್ ಆಗಿ ನೇತ್ರಾವತಿ ಸೇತುವೆಗೆ ಡಿಕ್ಕಿ – ಸಹಸವಾರ ಮೃತ್ಯು

Spread the love

ಮಂಗಳೂರು: ಬೈಕ್ ಸ್ಕಿಡ್ ಆಗಿ ನೇತ್ರಾವತಿ ಸೇತುವೆಗೆ ಡಿಕ್ಕಿ – ಸಹಸವಾರ ಮೃತ್ಯು

ಮಂಗಳೂರು: ಬೈಕೊಂದು ಸ್ಕಿಡ್ ಆಗಿ ನೇತ್ರಾವತಿ ಸೇತುವೆಗೆ ಅಳವಡಿಸಿದ ಕಬ್ಬಿಣದ ತಗಡು ಶೀಟ್ ಗೆ ಡಿಕ್ಕಿ ಹೊಡೆದ ಪರಿಣಾಮ ಸಹ ಸವಾರ ಮೃತಪಟ್ಟ ಘಟನೆ ತೊಕ್ಕೊಟ್ಟು ಬಳಿ ನಡೆದಿದೆ.

ಮೃತ ವ್ಯಕ್ತಿಯನ್ನು ಸಲ್ಮಾನ್ ಫಾರೀಶ್ ಎಂದು ಗುರುತಿಸಲಾಗಿದೆ.

ಮೊಹಮ್ಮದ್ ಶಾಕಿರ್ ಎಂಬಾತ ಮೋಟರ್ ಸೈಕಲ್ ನಲ್ಲಿ ಸಹ ಸವಾರ ಸಲ್ಮಾನ್ ಫಾರೀಶ್ ಜೊತೆ ತೊಕ್ಕೊಟ್ಟು ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದಾಗ ಮಹಾಕಾಳಿ ಪಡ್ಪು ಬಳಿ ಮೋಟಾರ್ ಸೈಕಲ್ ಸ್ಕಿಡ್ ಆಗಿ ನೇತ್ರಾವತಿ ಸೇತುವೆಗೆ ಅಳವಡಿಸಿದ ಕಬ್ಬಿಣದ ತಗಡು ಶೀಟ್ ಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಸವಾರರಿಬ್ಬರು ರಸ್ತೆಗೆ ಬಿದ್ದು ಸಹ ಸವಾರ ಸಲ್ಮಾನ್ ಗಂಭೀರ ಗಾಯಗೊಂಡು ಮೃತಪಟ್ಟಿದ್ದು ಸವಾರ ಮೊಹಮ್ಮದ್ ಶಕೀರ್ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.


Spread the love