ಮಂಗಳೂರು : ಕರಾವಳಿ ಉತ್ಸವದ ಅಂಗವಾಗಿ ಜ.27 ಮತ್ತು 28 ರಂದು ನಗರದ ಪುರಭವನದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪುರುಷರು ಮತ್ತು ಮಹಿಳೆಯರ ಭಾರ ಎತ್ತುವ ಸ್ಪರ್ಧೆಯಲ್ಲಿ ಪುರುಷರ ವಿಭಾಗದಲ್ಲಿ ಉಜಿರೆ ಎಸ್.ಡಿ.ಎಂ ಕಾಲೇಜಿನ ಮಂಜುನಾಥ ಮರಾಠಿ 69 ಕೆ.ಜಿ ವಿಭಾಗದಲ್ಲಿ ಒಟ್ಟು 243 ಕೆ.ಜಿ ಭಾರ ಎತ್ತುವ ಮೂಲಕ ಮಹಿಳೆಯರ ವಿಭಾಗದಲ್ಲಿ ಮೂಡಬಿದ್ರೆಯ ಆಳ್ವಾಸ್ ಕಾಲೇಜಿನ ಸುಷ್ಮಾ 48 ಕೆ.ಜಿ ವಿಭಾಗದಲ್ಲಿ ಸ್ನಾಚ್ ಮತ್ತು ಜರ್ಕ್‍ನಲ್ಲಿ ಒಟ್ಟು 117 ಕೆ.ಜಿ ಭಾರ ಎತ್ತುವ ಮೂಲಕ ಜಿಲ್ಲೆಯ ಶ್ರೇಷ್ಠ ಭಾರ ಎತ್ತುವ ಸ್ಪರ್ಧಿಗಳೆಂದು ತೀರ್ಮಾನಿಸಲಾಗಿದೆ.
ಪುರುಷರ ವಿಭಾಗದಲ್ಲಿ ತಂಡ ಚಾಂಪಿಯನ್ ಶಿಪ್‍ನ್ನು ಮೂಡಬಿದ್ರೆಯ ಆಳ್ವಾಸ್ ಕಾಲೇಜು 405 ಪಾಯಿಂಟ್ ಪಡೆದರೆ ಮೂಡಬಿದ್ರೆಯ ಶ್ರೀ ಧವಳ ಕಾಲೇಜು 208 ಪಾಯಿಂಟ್ ಪಡೆಯಿತು. ಪುತ್ತೂರು ಸೆಂಟ್ ಫಿಲೋಮಿನಾ ಕಾಲೇಜು 171 ಪಾಯಿಂಟ್ ಗಳಿಸುವ ಮೂಲಕ ಕ್ರಮವಾಗಿ ಪ್ರಥಮ ದ್ವಿತೀಯ ತೃತೀಯ ಸ್ಥಾನಗಳನ್ನು ಹಂಚಿಕೊಂಡರು .
ಇದೇ ರೀತಿ ಮಹಿಳೆಯರ ವಿಭಾಗದ ತಂಡ ಚಾಂಪಿಯನ್ ಶಿಫ್‍ನಲ್ಲಿ ಮೂಡಬಿದ್ರೆಯ ಆಳ್ವಾಸ್ ಕಾಲೇಜು 322 ಪಾಯಿಂಟ್ಸ್, ಕಾರ್ಕಳದ ಶ್ರೀ ವೆಂಕಟರಮಣ ಮಹಿಳಾ ಕಾಲೇಜ್ 191 ಪಾಯಿಂಟ್ಸ್ ಮತ್ತು ಉಜಿರೆ ಎಸ್.ಡಿ.ಎಂ ಕಾಲೇಜ್ 156 ಪಾಯಿಂಟ್ಸ್‍ಗಳನ್ನು ಗಳಿಸುವ ಮೂಲಕ ಕ್ರಮವಾಗಿ ಪ್ರಥಮ ದ್ವಿತೀಯ ತೃತೀಯ ಸ್ಥಾನಗಳನ್ನು ಗಳಿಸಿತು.
ಕರಾವಳಿ ಉತ್ಸವ ಪ್ರಯುಕ್ತ ಪುರಭವನದಲ್ಲಿ ನಡೆದ ಪುರುಷರ ಹಾಗೂ ಮಹಿಳೆಯರ ಭಾರ ಎತ್ತುವ ಸ್ಪರ್ಧೆಯ ಬಹುಮನ ವಿತರಣಾ ಸಮಾರಂಭದ ಅಧ್ಯಕ್ಷತೆಯನ್ನು ಮಹಪೌರರು ಮಂಗಳೂರು ಮಂಗಳೂರು ನಗರಪಾಲಿಕೆ ಜೆಸಿಂತಾ ವಿಜಯ ಅಲ್ಫ್ರೆಡ್ ವಹಿಸಿದ್ದರು. ಅತಿಥಿಗಳಾಗಿ ಮಹಾನಗರ ಪಾಲಿಕೆ ಆಯುಕ್ತ ಎಸ್. ಗೋಪಾಲಕೃಷ್ಣ, ಹಿರಿಯ ನ್ಯಾಯವಾದಿ ನಗರ್ ನಾರಾಯಣ ಶೆಣೈ ಮುಂತಾದವರು ಭಾಗವಹಿಸಿದ್ದರು.