Home Mangalorean News Kannada News ಮಂಗಳೂರು: ಮಂಡ್ಯದ ನಾಗಮಂಗಲದ ಗಲಭೆ ಖಂಡಿಸಿ ಹಿಂದೂ ಸಂಘಟನೆಗಳ ಪ್ರತಿಭಟನೆ

ಮಂಗಳೂರು: ಮಂಡ್ಯದ ನಾಗಮಂಗಲದ ಗಲಭೆ ಖಂಡಿಸಿ ಹಿಂದೂ ಸಂಘಟನೆಗಳ ಪ್ರತಿಭಟನೆ

Spread the love

ಮಂಗಳೂರು: ಮಂಡ್ಯದ ನಾಗಮಂಗಲದ ಗಲಭೆ ಖಂಡಿಸಿ ಹಿಂದೂ ಸಂಘಟನೆಗಳ ಪ್ರತಿಭಟನೆ

ಮಂಗಳೂರು: ಮಂಡ್ಯದ ನಾಗಮಂಗಲದಲ್ಲಿ ಗಲಭೆ ಪ್ರಕರಣ ಖಂಡಿಸಿ ನಗರದಲ್ಲಿ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ವಿಹೆಚ್ ಪಿ ಮುಖಂಡ ಶರಣ್ ಪಂಪ್ ವೆಲ್ ಮುಸ್ಲಿಂರು ಕೂಡ ಮುಂದಿನ ಸೋಮವಾರ ಈದ್ ಮಿಲಾದ್ ಮೆರವಣಿಗೆ ನಡೆಸುತ್ತಿದ್ದು ಇದಕ್ಕೆ ಸರಕಾರ ಅವಕಾಶ ನೀಡಬಾರದು. ಒಂದು ವೇಳೆ ವೇಳೆ ಅವಕಾಶ ಕೊಟ್ಟರೆ ಮತ್ತೆ ಅವರು ಗಲಭೆಗಳನ್ನು ಮಾಡಲಿದ್ದು ಇದಕ್ಕೆ ಸರಕಾರವೇ ನೇರ ಹೊಣೆಯಾಗಲಿದೆ.

ನಾಗಮಂಗಲದಲ್ಲಿ ಗಣೇಶೋತ್ಸವ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆಸಿರುವುದು ಭಯೋತ್ಪಾದಕ ಕೃತ್ಯವಾಗಿದ್ದು ಇನ್ನು ಮುಂದೆ ಗಣೇಶೋತ್ಸವವನ್ನು ಹಿಂದುಗಳು ನಡೆಸಬಾರದು ಎಂಬ ಉದ್ದೇಶದಿಂದ ನಡೆಸಿದ ಪೂರ್ವಾನಿಯೋಜಿತ ಕೃತ್ಯವಾಗಿದೆ.

ಇದು ಕೋಮುಗಲಭೆ ಅಲ್ಲ ಬದಲಾಗಿ ಗಣೇಶೋತ್ಸವ ಸಮಿತಿಯ ಮೇಲೆ ನಡೆದ ದಾಳಿ. ಇಸ್ಲಾಮಿಕ್ ಭಯೋತ್ಪಾದಕರು, ಇಸ್ಲಾಮಿಕ್ ಧರ್ಮಾಂದರು ಹಿಂದುಗಳ ಮೇಲೆ ದಾಳಿಮಾಡಿದ್ದಾರೆ. ಆದರೆ ರಾಜ್ಯದ ಗೃಹ ಸಚಿವರು ಆಕಸ್ಮಿಕ ಘಟನೆ ಅಂತಾ ಹೇಳಿರುವುದು ಖಂಡನೀಯ. ಗೃಹ ಇಲಾಖೆಯ ಪೊಲೀಸರ ಮೇಲೆ ಹಲ್ಲೆ ಆಗಿ ಗಾಯಗೊಂಡಿದ್ದಾರೆ. ಇದು ನಿಮಗೆ ಸಣ್ಣ ಘಟನೆನಾ ಎಂದು ಪ್ರಶ್ನಿಸಿದರು.

ಡಿ.ಜೆ.ಹಳ್ಳಿ, ಕೆಜೆ ಹಳ್ಳಿ, ಮಂಗಳೂರಿನ ಡಿ.ಸಿ.ಕಚೇರಿ, ಶಿವಮೊಗ್ಗದ ರಾಗಿಗುಡ್ಡದಲ್ಲಿ ನಡೆದ ಘಟನೆಗಳ ನಂತರವೂ ಎಚ್ಚೆತ್ತುಕೊಂಡಿಲ್ಲ ಇನ್ನಾದರೂ ಸರಕಾರ ಸೂಕ್ತ ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿದರು.


Spread the love

Exit mobile version