Home Mangalorean News Kannada News ಮಂಗಳೂರು : ಮರಳು ದಿಬ್ಬ ತೆರವುಗೊಳಿಸಲು ಷರತ್ತುಬದ್ಧ ತಾತ್ಕಾಲಿಕ ಪರವಾನಿಗೆ

ಮಂಗಳೂರು : ಮರಳು ದಿಬ್ಬ ತೆರವುಗೊಳಿಸಲು ಷರತ್ತುಬದ್ಧ ತಾತ್ಕಾಲಿಕ ಪರವಾನಿಗೆ

Spread the love

ಮಂಗಳೂರು : ಮರಳು ದಿಬ್ಬ ತೆರವುಗೊಳಿಸಲು ಷರತ್ತುಬದ್ಧ ತಾತ್ಕಾಲಿಕ ಪರವಾನಿಗೆ

ಮಂಗಳೂರು : ಜಿಲ್ಲಾ 7 ಸದಸ್ಯರ ಸಮಿತಿ ಸಭೆಯು ಪ್ರಸ್ತುತ ಮರಳು ದಿಬ್ಬಗಳನ್ನು ತೆರವುಗೊಳಿಸಲು ಷರತ್ತು ಬದ್ಧ ತಾತ್ಕಾಲಿಕ ಪರವಾನಿಗೆ ನೀಡಲು ನಿರ್ಣಯಿಸಿದೆ.

ಮರಳು ದಿಬ್ಬ ತೆರವುಗೊಳಿಸಲು ತಾತ್ಕಾಲಿಕ ಪರವಾನಿಗಾಗಿ ಸ್ವೀಕೃತಗೊಂಡ 318 ಅರ್ಜಿಗಳಲ್ಲಿ ಕಳೆದ ಸಾಲಿನಲ್ಲಿ ತಾತ್ಕಾಲಿಕವಾಗಿ ಪರವಾನಿಗೆ ಹೊಂದಿದೆ. 105 ಅರ್ಜಿಗಳನ್ನು ಮೊದಲ ಹಂತದಲ್ಲಿ ಪರಿಶೀಲನಾ ಸಮಿತಿ ಪರಿಶೀಲನೆ ನಡೆಸಿ ಶಿಫಾರಸ್ಸಿನಂತೆ ಜಿಲ್ಲಾ 7 ಸದಸ್ಯರ ಸಮಿತಿಯು ಚರ್ಚಿಸಿ ಪೂರಕ ದಾಖಲೆಗಳು ಸರಿ ಇರುವ 79 ಅರ್ಜಿದಾರರಿಗೆ ಮರಳು ದಿಬ್ಬಗಳನ್ನು ತೆರವುಗೊಳಿಸಲು ಷರತ್ತುಬದ್ಧ ತಾತ್ಕಾಲಿಕ ಪರವಾನಿಗೆ ನೀಡಲು ತೀರ್ಮಾನಿಸಿದೆ.

ಮರಳು ದಿಬ್ಬಗಳನ್ನು ಹೊರತುಪಡಿಸಿ ಅನಧಿಕೃತವಾಗಿ ಮರಳು ತೆರವುಗೊಳಿಸುವುದನ್ನು ನಿಯಂತ್ರಿಸಲು ಮರಳು ದೋಣಿಗಳಿಗೆ ಹಾಗೂ ಮರಳು ಸಾಗಾಣಿಕೆ ವಾಹನಗಳಿಗೆ ಜಿ.ಪಿ.ಎಸ್. ಅಳವಡಿಸಲು ಸೂಕ್ತ ಸ್ಥಳಗಳಲ್ಲಿ ಸಿ.ಸಿ. ಕ್ಯಾಮರಗಳನ್ನು ಅಳವಡಿಸಲು ತೀರ್ಮಾನಿಸಿದೆ. ಮರಳು ದಿಬ್ಬಗಳು, ಮರಳು ಧಕ್ಕೆಗಳು ಮರಳು ಸಾಗಾಣಿಕೆ ವಾಹನಗಳ ಕಟ್ಟುನಿಟ್ಟು ನಿರ್ವಹಣೆಗೆ ಮತ್ತು ನಿಯಂತ್ರಕ್ಕೆ ಜಿಲ್ಲಾ ಸಮಿತಿ, ತಾಲೂಕು ಮರಳು ಸಮಿತಿ ಹಾಗೂ ಜಿಲ್ಲಾ 7 ಸದಸ್ಯರ ಸಮಿತಿ ಕ್ರಮವಹಿಸಲು ತೀರ್ಮಾನಿಸಿದೆ.

ಮರಳು ದೋಣಿಗಳು ಮತ್ತು ಮರಳು ಸಾಗಾಣಿಕಾ ವಾಹನಗಳ ಜಿ.ಪಿ.ಎಸ್. ಉಲ್ಲಂಘನೆ ಮಾಡುವುದು ಕಂಡುಬಂದಲ್ಲಿ 2020 ಸೆಪ್ಟೆಂಬರ್ 23 ರ ಸಭೆಯ ನಿರ್ಣಯದಂತೆ ಮೊದಲ ಬಾರಿಗೆ ರೂ 25,000 ದಂಡ, ಎರಡನೇ ಬಾರಿಗೆ ರೂ 50,000 ದಂಡ, ಮೂರನೇ ಬಾರಿಗೆ ತಾತ್ಕಾಲಿಕ ಪರವಾನಿಗೆಯನ್ನು ರದ್ದುಗೊಳಿಸಲಾಗುವುದು ಎಂದು ತೀರ್ಮಾನಿಸಲಾಯಿತು ಎಂದು ಜಿಲ್ಲಾ ಮರಳು ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

Exit mobile version