ಮಂಗಳೂರು: ಮಾಟ, ಮಂತ್ರ ನೆಪದಲ್ಲಿ ಲೈಂಗಿಕ ಕಿರುಕುಳ: ಮುಸ್ಲಿಂ ಧರ್ಮಗುರು ಬಂಧನ

Spread the love

ಮಂಗಳೂರು: ಮಾಟ, ಮಂತ್ರ ನೆಪದಲ್ಲಿ ಲೈಂಗಿಕ ಕಿರುಕುಳ: ಮುಸ್ಲಿಂ ಧರ್ಮಗುರು ಬಂಧನ

ಮಂಗಳೂರು: ಮಾಟ, ಮಂತ್ರ ನಿವಾರಿಸುವ ನೆಪದಲ್ಲಿ ಮಹಿಳೆಗೆ ಲೈಂಕಿಕ ಕಿರುಕುಳ ನೀಡಿದ ಆರೋಪದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯ ನಿವಾಸಿ, ಮುಸ್ಲಿಂ ಧರ್ಮಗುರು ಜಿ.ಅಬ್ದುಲ್ ಕರೀಮ್ ಅಲಿಯಾಸ್ ಕೂಳೂರು ಉಸ್ತಾದ್ ಎಂಬಾತನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಮಹಿಳೆಯೊಬ್ಬರಿಗೆ ಯಾರೋ ಮಾಟ, ಮಂತ್ರ ಮಾಡಿಸಿದ್ದಾರೆಂದು ನಂಬಿಸಿದ್ದ ಆರೋಪಿ ಚಿಕಿತ್ಸೆಯ ನೆಪದಲ್ಲಿ ಲೈಂಗಿಕ ಕಿರುಕುಳ ನೀಡಿದ್ದ. ಚಿಕಿತ್ಸೆಯ ನೆಪದಲ್ಲಿ 1 ಲಕ್ಷ ರೂಪಾಯಿ‌ ಪಡೆದು ವಂಚಿಸಿದ್ದ ಎಂದು ಆರೋಪಿಸಲಾಗಿದೆ.

ಮಹಿಳೆ ಖಿನ್ನತೆಯ ಸಮಸ್ಯೆಯಿಂದ ಬಳಲುತ್ತಿದ್ದು, ಆಕೆಯ ಕುಟುಂಬದವರು ಹೆಜಮಾಡಿಯಲ್ಲಿದ್ದ ಕೂಳೂರು ಉಸ್ತಾದ್​ನನ್ನು ಭೇಟಿ ಮಾಡಿದ್ದರು. ಮಹಳೆಯನ್ನು‌ ನೋಡಿದ್ದ ಆತ, ಆಕೆಗೆ ಯಾರೋ ಮಾಟ ಮಾಡಿಸಿದ್ದಾರೆ ಎಂದು ನಂಬಿಸಿದ್ದ. ಚಿಕಿತ್ಸೆ ಕೊಡುತ್ತೇನೆ ಎಂದು ನಂಬಿಸಿ ಮಹಿಳೆಯನ್ನು ಆಗಾಗ ಬರಲು ಹೇಳುತ್ತಿದ್ದ. ಚಿಕಿತ್ಸೆ ಯ ನೆಪದಲ್ಲಿ ಲೈಂಗಿಕ ಕಿರುಕುಳ ನೀಡಿದ್ದ ಎಂದು ಆರೋಪಪಿಸಲಾಗಿದೆ.

ಈ ಬಗ್ಗೆ ಮಂಗಳೂರಿನ ಮಹಿಳಾ ಠಾಣೆಗೆ ಸಂತ್ರಸ್ತೆ ದೂರು‌ ನೀಡಿದ್ದರು. ಪ್ರಕರಣದ ಬಗ್ಗೆ ತನಿಖೆ‌ ನಡೆಸಿದ ಪೊಲೀಸರು, ಅಬ್ದುಲ್ ಕರೀಮ್​ನನ್ನು ಬಂಧಿಸಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments