Home Mangalorean News Kannada News ಮಂಗಳೂರು : ಮಾರ್ಚ್ 2 ರಂದು ಹೆಚ್.ಪಿ.ಸಿ.ಎಲ್ ನಲ್ಲಿ ಅವಘಢಗಳ ತಡೆ ಅಣುಕು ಪ್ರದರ್ಶನ

ಮಂಗಳೂರು : ಮಾರ್ಚ್ 2 ರಂದು ಹೆಚ್.ಪಿ.ಸಿ.ಎಲ್ ನಲ್ಲಿ ಅವಘಢಗಳ ತಡೆ ಅಣುಕು ಪ್ರದರ್ಶನ

Spread the love

ಮಂಗಳೂರು: ರಾಸಾಯನಿಕ, ನೈಸರ್ಗಿಕ ಇನ್ನಿತರೆ  ಅವಘಢಗಳು ಸಂಭವಿಸಿದಾಗ ತೆಗೆದುಕೊಳ್ಳಬೇಕಾದ ತುರ್ತು ಕಾರ್ಯಗಳ ಬಗ್ಗೆ ಮಂಗಳೂರಿನ ಬಾಳ ಗ್ರಾಮದಲ್ಲಿರುವ ಹೆಚ್.ಪಿ.ಸಿ.ಎಲ್ ಸಂಸ್ಥೆಯ ಆವರಣದಲ್ಲಿ ಮಾ. 2 ರಂದು ಬೆಳಿಗ್ಗೆ 10.30ಕ್ಕೆ ಅಣುಕು ಪ್ರದರ್ಶನವನ್ನು ಏರ್ಪಡಿಸಲಾಗಿದೆ ಎಂದು ಕೆ.ಕೆ. ಪ್ರದೀಪ್, ತುರ್ತು ಸಮನ್ವಯಾಧಿಕಾರಿ  ರಾಷ್ಟ್ರೀಯ ಅವಘಡಗಳ ನಿರ್ವಹಣೆ ಪ್ರಾಧಿಕಾರ ರಾಜ್ಯ ಶಾಖೆ ಇವರು ಇಂದು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಈ ಕುರಿತು ನಡೆದ ಪೂರ್ವಭಾವಿ ಸಭೇಯಲ್ಲಿ ತಿಳಿಸಿದರು.

ಮಂಗಳೂರು ವಿಮಾನ ದುರಂತ, ಕೇರಳದ ಶಬರಿ ಮಲೆಯಲ್ಲಿ ನಡೆದ ಕಾಲ್ತುಳಿತ ಮತ್ತು ಬಳ್ಳಾರಿ ನಗರದಲ್ಲಿ ಸಂಬವಿಸಿದ್ದ ಬಹು ಮಹಡಿಗಳ ಕಟ್ಟಡ ದುರಂತದಲಿ ಅಲ್ಲಿಯ ಜಿಲ್ಲಾಡಳಿತ ತೆಗೆದುಕೊಂಡ ಕ್ರಮಗಳ ಬಗ್ಗೆ ಸಭೆಗೆ ಸಚಿತ್ರವಾಗಿ ವಿವರಿಸಿದರು.

ಪ್ರಾಣ ಉಳಿಸಿ ಹಾಗೂ ಆಸ್ತಿ ಉಳಿಸಿ ಇದೇ ನಮ್ಮ ಧ್ಯೇಯವಾಕ್ಯವಾಗಿದ್ದು ಯಾವುದೇ ರೀತಿಯ ಅವಘಡಗಳು ಸಂಬವಿಸಿದಾಗ ಜಿಲ್ಲಾ ಮ್ಯಾಜಿಸ್ಟ್ರೇಟರ ನೇತ್ರತ್ವದಲ್ಲಿ ಪೋಲೀಸ್, ಅಗ್ನಿ ಶಾಮಕ , ಆರೋಗ್ಯ, ಆಹಾರ ಸಾರಿಗೆ, ವಾರ್ತಾ ಇತರೆ ಇಲಾಖೆಗಳು ಸಮನ್ವಯದೊಂದಿಗೆ ಕಾರ್ಯನಿರ್ವಹಿಸಬೇಕಾದ ಅವಶ್ಯಕತೆ ಇದೆ ಎಂದು ಅವರು ಮನದಟ್ಟು ಮಾಡಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ  ಪಿ.ಐ. ಶ್ರೀವಿದ್ಯಾ ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್ ಎನ್.ಡಿ.ಆರ್.ಎಫ್. ನ 10ನೇ ಬೆಟಾಲಿಯನ್ ಕಮಾಂಡೆಂಟ್‍ರಾದ ಸೋಹನ್ ಸಿಂಗ್ ಮುಂತಾದವರು ಭಾಗವಹಿಸಿದರು.

ಮಂಗಳೂರು: ವೆನ್ಲಾಕ್ ಆಸ್ಪತ್ರೆ ಆಧುನೀಕರಣಕ್ಕೆ ಕೆ.ಎಂ.ಸಿ. ಉತ್ಸುಕತೆ

ಮಂಗಳೂರು : 167 ವರ್ಷಗಳ ಹಳೆಯದಾದ ಮಂಗಳೂರು ನಗರದಲ್ಲಿ ಕಾರ್ಯಾಚರಿಸುತ್ತಿರುವ ವೆನ್ಲಾಕ್ ಸರ್ಕಾರಿ ಜಿಲ್ಲಾಸ್ಪತ್ರೆಯನ್ನು ಆಧುನೀಕರಣಗೊಳಿಸಲು ಆಸ್ಪತ್ರೆಯ ನೆರವನ್ನು ಪಡೆಯುತ್ತಿರುವ ಕಾಸ್ತೂರು ಬಾ ವೈದ್ಯಕೀಯ ಕಾಲೇಜು ಉತ್ಸುಕವಾಗಿದೆ ಎಂದು ಕೆ.ಎಂ.ಸಿ.ಯ ಡಾ: ಆನಂದ್ ಅವರು ತಿಳಿಸಿದ್ದಾರೆ.

ಅವರು ಇಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅವರ ಅಧ್ಯಕ್ಷತೆಯಲ್ಲಿ ಈ ಸಂಬಂಧ ನಡೆದ ಸಭೆಯಲ್ಲಿ ಡಾ: ಆನಂದ್ ತಿಳಿಸಿದರು. ವೆನ್ಲಾಕ್ ಆಸ್ಪತ್ರೆಯ ಈಗಿರುವ ಆಪರೇಷನ್ ಥಿಯೇಟರ್, ವಾರ್ಡ್‍ಗಳು, ಪ್ಲಂಬಿಂಗ್ ಕಾರ್ಯ, ನೀರು ಸರಬರಾಜು ವ್ಯವಸ್ಥೆ ಸೇರಿದಂತೆ ಇನ್ನಿತರೆ ಕಾಮಗಾರಿಗಳನ್ನು ಕೈಗೊಂಡು ಆಸ್ಪತ್ರೆಗೆ ಹೈಟೆಕ್ಸ್ ಸ್ಫರ್ಶ ನೀಡುವುದಾಗಿ ಅವರು ತಿಳಿಸಿದರು.

ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ಸರ್ಕಾರ ಮಂಜೂರು ಮಾಡಿರುವುದು 31 ಹಿರಿಯ ವೈದ್ಯರು ಆದರೆ ಕಾರ್ಯ ನಿರ್ವಹಿಸುತ್ತಿರುವವರು 21 ವೈದ್ಯರು ಇವರಲ್ಲದೆ ಕೆ.ಎಂ.ಸಿ.ಎ 98 ಜನ ವೈದ್ಯರು ಕಾರ್ಯನಿರ್ವಹಿಸುತ್ತಿರುತ್ತಾರೆ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕರು ಮತ್ತು ಅಧಿಕ್ಷಕರು ಡಾ. ರಾಜೇಶ್ವರಿ ದೇವಿ ಅವರು ಸಭೆಯಲ್ಲಿ ತಿಳಿಸಿದರು. ಸಭೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.


Spread the love

Exit mobile version