ಮಂಗಳೂರು: ನಗರದ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಜೆ. ಆರ್. ಲೋಬೊ ಬಂದರ್ ಪ್ರದೇಶದಲ್ಲಿರುವ ಮೀನುಗಾರಿಕೆ ಇಲಾಖೆ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಮತ್ತು ಮೀನುಗಾರರ ಮುಖಂಡರೊಂದಿಗೆ ಶುಕ್ರವಾರ ಸಭೆ ನಡೆಸಿ ಅವರ ಕುಂದು ಕೊರತೆಗಳನ್ನು ಆಲಿಸಿದರು.
ಮೀನುಗಾರರ ಮನವಿಗೆ ಸ್ಪಂದಿಸಿ ಬೋಟ್ ದಾಖಲೆಯ ಸಕ್ರಮಿಕರಣಕ್ಕೆ ಇರುವ ಕೊನೆಯ ದಿನಾಂಕವನ್ನು ಜೂನ್ 10 ತಾರೀಕುವರೆಗೆ ವಿಸ್ತರಿಸಲು ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು.
ಬೆಂಗ್ರೆ ಮತ್ತು ಬಂದರ್ ಪ್ರದೇಶದಲ್ಲಿ ಮೂರನೆ ಹಂತದಲ್ಲಿ ಪ್ರಾರಂಭವಾಗಿರುವ ಹುಳೆತ್ತುವ ಕಾಮಗಾರಿಯು ಇನ್ನು ಅಗಿಲ್ಲ ಎಂದು ಮೀನುಗಾರರ ಮುಖಂಡರು ಸಭೆಯಲ್ಲಿ ತಿಳಿಸಿದರು. ಬೋಳಾರದ ಬೊಕ್ಕಪಟ್ನದಲ್ಲಿ ಬರಲಿರುವ ಜೆಟ್ಟಿಯ ಕಾಮಗಾರಿಯ ಟೆಂಡರ್ ಬರುವ ತಿಂಗಳಲ್ಲಿ ಕರೆಯಲಾಗುವುದು ಎಂದು ಶಾಸಕರಿಗೆ ಆಧಿಕಾರಿಗಳು ತೀಳಿಸಿದರು. ಬಂದರ್ ಪ್ರದೇಶದಲ್ಲಿ ಸರಿಯಾದ ರಸ್ತೆಗಳು ಇಲ್ಲದಿರುವುದು, ಆಧಿಕಾರಿಗಳಿಗೆ ಇದರ ವೆಚ್ಚದ ರೀಪೂರ್ಟ್ ಮಾಡಿ ಕೊಡಲು ಹೇಳಿದರು.
ಈ ಸಂದರ್ಭದಲ್ಲಿ ವಿಶೇಷ ಘಟಕ ಮತ್ತು ಸಾಮನ್ಯ ಯೋಜನೆಯಲ್ಲಿ ಐದು ಅರ್ಹ ಮೀನು ಗಾರರಿಗೆ ಬೇರೆ ಬೇರೆ ಸೌಲಭ್ಯಗಳನ್ನು ನಿಡಿದರು.