ಮಂಗಳೂರು: ಮೀನು ಲಾರಿಗಳು ತ್ಯಾಜ್ಯ ನೀರು ರಸ್ತೆಗೆ ಚೆಲ್ಲುವುದರ ಹಾಗೂ ಅತೀ ವೇಗವಾಗಿ ಸಂಚರಿಸುವುದರಿಂದ ಉಂಟಾಗುವ ಸಂಭವನೀಯ ಅಪಾಯವನ್ನು ತಪ್ಪಿಸಲು ಸಂಭಂಧಪ್ಪಟ್ಟ ಅಧಿಕಾರಿಗಳನ್ನು ಹಾಗೂ ಜನಪ್ರತಿನಿಧಿಗಳನ್ನು ಎಚ್ಚರಿಸಲು ಸಾರ್ವಜನಿಕರನ್ನು ಜಾಗೃತರಾಗುವಂತೆ ಮಾಡಲು ದಿನಾಂಕ 05-02-2016 ರಂದು ಶುಕ್ರವಾರ ಬೆಳಿಗ್ಗೆ 6:30 ರಿಂದ 9 ಘಂಟೆಯ ವರೆಗೆ ಮೋರ್ಗನ್ಸ್ ಗೇಟ್ ಜಂಕ್ಷನ್ ನಲ್ಲಿ ಬೃಹತ್ ಪ್ರತಿಭಟನೆ ಹಾಗೂ ಜನಜಾಗೃತಿಯನ್ನು ತು.ರ.ವೇ ಸ್ಥಾಪಕಾಧ್ಯಕ್ಷರಾದ ಶ್ರೀ ಯೋಗೀಶ್ ಶೆಟ್ಟಿ ಜಪ್ಪು ರವರ ನೇತ್ರತ್ವದಲ್ಲಿ ಪ್ರಾರಂಬಿಸುವುದರ ಮೂಲಕ ಆಂದೋಲನವು ಪ್ರಾರಂಭವಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶ್ರೀ ಯೋಗೀಶ್ ಶೆಟ್ಟಿ ಜಪ್ಪುರವರು ತುಳುನಾಡು ಶಾಂತಿ ಪ್ರಿಯರ ನಾಡು, ವಿಶ್ವ ದಾದ್ಯಂತ ತುಳುನಾಡಿಗೆ ಒಂದು ಪ್ರತ್ಯೇಕ ಸ್ಥಾನಮಾನವಿದೆ ಇಲ್ಲಿ ಪ್ರತಿನಿತ್ಯವೂ ದೂರ ಊರಿನಿಂದ ಹಲವಾರು ಪ್ರವಾಸಿಗರು, ವಿದ್ಯಾರ್ಥಿಗಳು ಆಗಮಿಸಿ ಇಲ್ಲಿನ ಸೌಂದರ್ಯ ಸವಿದು ತಮ್ಮ ಊರಿಗೆ ತೆರಳಿ ಇಲ್ಲಿನ ವೈವಿದ್ಯತೆಯನ್ನು ಕೊಂಡಾಡುವ ಕಾಲವೊಂದಿತ್ತು, ಆದರೆ ಇದೀಗ ಇಲ್ಲಿನ ರಾಷ್ರ್ಟೀಯ ಹೆದ್ದಾರಿಯಲ್ಲಿ ಸಂಚರಿಸುವಾಗ ಮೂಗಿಗೆ ಕೈ ಹಿಡಿದು ಸಂಚರಿಸುವ ಅನಿವಾರ್ಯತೆ ಬಂದೊದಗಿದೆ, ಇದಕ್ಕೆ ಕಾರಣ ಇಲ್ಲಿ ದಿನ ನಿತ್ಯ ಯಮದೂತರಂತೆ ಸಂಚರಿಸುವ ಮೀನು ಲಾರಿಗಳು.
ಮಂಗಳೂರಿನ ಬಂದರು ಹಾಗೂ ಇತರ ರಾಜ್ಯಗಳಿಂದ ಪಾಂಡೇಶ್ವರ, ಎಮ್ಮೆಕೆರೆ, ಮಂಕಿಸ್ಟ್ಯಾಂಡ್, ಮಂಗಳಾದೇವಿ ಮೊರ್ಗನ್ಸ್ ಗೇಟ್, ಜಪ್ಪಿನ ಮೊಗರು ಮಾರ್ಗವಾಗಿ ತೊಕ್ಕೊಟ್ಟು, ಉಳ್ಳಾಲ ಹಾಗೂ ಕೇರಳದ ಕಡೆಗೆ ಸಾಗುವ ಮೀನು ಸಾಗಾಟ ಲಾರಿಗಳು ರಸ್ತೆಯುದ್ದಕ್ಕೂ ಅದರ ನಿರುಪಯುಕ್ತ ನೀರನ್ನು ಚೆಲ್ಲುತ್ತಾ, ಅತೀ ವೇಗವಾಗಿ ಸಂಚರಿಸುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ, ಉಪ್ಪು ಮಿಶ್ರಿತ ಶೀತಲ ನೀರು ನಮ್ಮ ರಸ್ತೆಗಳನ್ನು ಹೇಗೆ ಹಾಳುಗೆಡವುತ್ತದೋ ಅದೇ ರೀತಿ ಜನರ ಸ್ವಾಸ್ತ್ಯವನ್ನೂ ಹಾಳು ಮಾಡುತ್ತಿದೆ, ಅತ್ಯಂತ ಕೆಟ್ಟ ರೀತಿಯಲ್ಲಿ ವಾಸನೆಯನ್ನು ಹೊಂದಿರುವ ಈ ನೀರು ಸುತ್ತಮುತ್ತಲು ವಾಸಿಸುವ ಜನರಿಗೆ, ವಾಹನ ಸವಾರರಿಗೆ, ಅಂಗಡಿ ಮಾಲೀಕರಿಗೆ ಹಾಗೂ ಕೆಲಸಗಾರರಿಗೆ ದಿನನಿತ್ಯ ಮಾನಸಿಕ ಕಿರುಕುಳ ಹಾಗೂ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುತ್ತಿದೆ, ಇದಲ್ಲದೆ ಮೂಕ ಪ್ರಾಣಿಗಳು ಇದರ ವಾಸನೆಯಿಂದ ಆಕರ್ಶಿತರಾಗಿ ರಸ್ತೆಯುದ್ದಕ್ಕೂ ಸಂಚರಿಸುವುದರಿಂದ ಹಲವಾರು ಮೂಕ ಪ್ರಾಣಿಗಳು ದಿನ ನಿತ್ಯ ವಾಹನಗಳ ಚಕ್ರಗಳಿಗೆ ಸಿಲುಕಿ ತಮ್ಮ ಪ್ರಾಣ ವನ್ನು ತ್ಯಜಿಸಿ ರಸ್ತೆ ಯಲ್ಲಿಯೇ ಅದರ ಅವಶೇಷಗಳು ಕಾಣಸಿಗುತ್ತಿದೆ ಇದರಿಂದಾಗಿ ಹಲವಾರು ಸಾಂಕ್ರಾಮಿಕ ರೋಗಗಳು ಹರಡುವ ಸಾದ್ಯತೆ ಇದೆ.
ಇದಲ್ಲದೆ ಮಿತಿಮೀರಿದ ವೇಗದಲ್ಲಿ ಸಂಚರಿಸುವ ಈ ವಾಹನಗಳು ಹಲವಾರು ಅಪಘಾತಗಳಿಗೆ ಕಾರಣವಾಗಿ ಹಲವಾರು ಮನುಷ್ಯ ಜೀವಗಳನ್ನು ಬಲಿ ಪಡೆದುಕೊಂಡಿದೆ, ಇದರ ನೀರಿನಿಂದಾಗಿ ಬೈಕ್ ಸವಾರರು ನೀರಿನಲ್ಲಿರುವ ತೈಲದ ಅಂಶದಿಂದಾಗಿ ಟೈರ್ ಸ್ಕಿಡ್ ಆಗಿ ಅಪಘಾತಗಳು ಹೆಚ್ಚಾಗಳು ಕಾರಣವಾಗಿದೆ. ಸರಕಾರಗಳೂ ಇಂತಹ ಲಾರಿಗಳಿಗೆ ಹಲವಾರು ನಿಯಮಗಳನ್ನು ಜಾರಿಗೆ ತಂದಿದ್ದ್ದು ಇದಾವುದನ್ನೂ ಈ ಲಾರಿ ಚಾಲಕರು ಹಾಗೂ ಮಾಲಕರು ಪಾಲಿಸುತ್ತಿಲ್ಲ, ಈ ಬಗ್ಗೆ ಸಂಭಂಧಪ್ಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕಂಡೂ ಕಾಣದಂತೆ ವರ್ತಿಸುತಿದ್ದಾರೆ. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲಾದ್ಯಂತ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ ಮೀನು ಲಾರಿ ಹಾಗೂ ಮೀನು ಎಣ್ಣೆ ತೆಗೆಯುವ ಕಾರ್ಖಾನೆಗಳ ವಿರುದ್ದ ಬೃಹತ್ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗುವುದು ಈ ಬಗ್ಗೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಲಿ, ಸಾರಿಗೆ ಇಲಾಖೆ , ಲೋಕಾಯುಕ್ತರು ಕೂಡಲೇ ಕ್ರಮ ಕೈಗೊಳ್ಳುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು. ಹಲವಾರು ಮೀನು ಲಾರಿಗಳಲ್ಲಿ ನಂಬರ್ ಪ್ಲೇಟ್ ಇಲ್ಲದಿದ್ದುದು ಕಂಡು ಬಂತು.
ಎಲ್ಲಾ ಮೀನು ಲಾರಿಗಳನ್ನು ತಡೆದು ನಿಲ್ಲಿಸಿ ಕರಪತ್ರ ನೀಡಿ ಪ್ರತಿಭಟನಾ ಕಾರರು ಎಚ್ಚರಿಕೆ ನೀಡಿದರು, ಸ್ಥಳಕ್ಕೆ ಆಗಮಿಸಿದ ಪೋಲೀಸ್ ಅಧಿಕಾರಿಗಳು ಮೀನು ಲಾರಿಗಳಿಗೆ ಕೇಸು ದಾಖಲಿಸಿದರು. ತುರವೇ ರಾಜ್ಯ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಸಿರಾಜ್ ಅಡ್ಕರೆ ಕಾರ್ಯಕ್ರಮ ನಿರೂಪಿಸಿದರು ಕೇಂದ್ರೀಯ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ರಾವ್ ಕಡಬ ಸ್ವಾಗತ ಮಾಡಿದರು, ಜಿಲ್ಲಾ ಕಾರ್ಯದರ್ಶಿ ಆನಂದ್ ಅಮೀನ್ ಅಡ್ಯಾರ್ ಧನ್ಯವಾದ ಸಮರ್ಪಿಸಿದರು, ಕಾರ್ಯಕ್ರಮದಲ್ಲಿ ರಾಜ್ಯ ಮಹಿಳಾ ಘಟಕದ ಆದ್ಯಕ್ಷೆಯಾದ ಜ್ಯೋತಿ ಜೈನ್, ಕೇಂದ್ರೀಯ ಪ್ರಚಾರ ಕಾರ್ಯದರ್ಶಿ ಎಂ.ಜಿ. ರಹೀಂ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಕೆ ಬಂಗೇರ ಕುಡುಪು, ಜಿಲ್ಲಾ ಕಾರ್ಯದರ್ಶಿ ಗಳಾದ ಹರೀಶ್ ಶೆಟ್ಟಿ ಶಕ್ತಿನಗರ, ನೇಮಿ ಕೊಟ್ಟಾರಿ ಗುಜಿರೆಕೆರೆ, ಉಡುಪಿ ಜಿಲ್ಲಾ ಉಪಾಧ್ಯಕ್ಷರಾದ ನಜೀರ್ ಕೋಟೇಶ್ವರ, ಯುವ ಘಟಕದ ಮುಖಂಡ ಹರೀಶ್ ಶೆಟ್ಟಿ ಆದಿಮಾಯೆ, ಆಟೋ ಚಾಲಕ ಮತ್ತು ಮಾಲಕರ ಘಟಕದ ಮುಖಂಡ ರಾಜೇಶ್ ದೇರಳಕಟ್ಟೆ ಕಟ್ಟಡ ಕಾರ್ಮಿಕರ ಘಟಕದ ಮುಖಂಡರುಗಳಾದ ರಾಜೇಂದ್ರ, ರಾಜಪ್ಪ ಸ್ವಾತಂತ್ರ್ಯೋತ್ಸವ ಸಮಿತಿಯ ದೇವದಾಸ್ ಶೆಟ್ಟಿ, ಚಂದ್ರಶೇಕರ್ ಸೇರಿದಂತ ತು.ರವೇ ಯ ಹಲವಾರು ಮುಖಂಡರು ಹಾಗೂ ಕಾರ್ಯಕರ್ತರು ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.