ಮಂಗಳೂರು: ಮೇ 10 ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಅತ್ಯಂತ ಶ್ರೇಷ್ಟವಾದ ದಿನ, ಒಂಬತ್ತು ತಿಂಗಳು ಹೊತ್ತು ಹೆತ್ತು ಈ ಜಗತ್ತಿಗೆ ಹೊರ ತಂದ ಮಹಾನ್ ದೇವತೆ ಪ್ರತಿಯೊಬ್ಬರ ತಾಯಿಯನ್ನು ನೆನೆಯುವ ವಿಶ್ವ ತಾಯಂದಿರ ದಿನ. ವರ್ಶದ ಪ್ರತಿ ಮೇ ಎರಡನೇ ವಾರದಲ್ಲಿ ವಿಶ್ವ ತಾಯಂದಿರ ದಿನವಾದ ಮೇ 10 ಅಂತರ್ಜಾಲ ಮಾಧ್ಯಮದಲ್ಲಿ ಹೊಸ ಕ್ರಾಂತಿಗೆ ನಾಂದಿ ಹಾಡಿದ ವಿಶೇಷ ದಿನವಾಗಿದೆ. ಕರ್ನಾಟಕ ಕರಾವಳಿಯಲ್ಲಿ 12 ವರ್ಶದ ಹಿಂದೆ ಅಂತರ್ಜಾಲ ಮಾಧ್ಯಮದಲ್ಲಿ ಹೊಸ ಹುಟ್ಟನ್ನು ಕಂಡಿದ್ದು ಮ್ಯಾಂಗಲೋರಿಯನ್ ಡಾಟ್ ಕಾಮ್. ಇಂದು ಮ್ಯಾಂಗಲೋರಿಯನ್ ವೆಬ್ ಮಾಧ್ಯಮ ತಾಜಾ, ನಿಖರ, ಮತ್ತು ನಿಷ್ಪಕ್ಷಪಾತ ಸುದ್ದಿಯನ್ನು ನೀಡಲು ಇತರರಿಗಿಂತ ಮುಂದಿದೆ ಎಂದರೆ ಅದರಲ್ಲಿ ಎರಡು ಮಾತಿಲ್ಲ. ಯಾವುದೇ ಧರ್ಮ, ಪಕ್ಷ, ವ್ಯಕ್ತಿಯ ಅಡಿಯಾಳಾಗದೆ ನೇರ ದಿಟ್ಟ ನಡೆಯೊಂದಿಗೆ ಮುನ್ನಡೆದು ಬಂದಿದೆ ಇದು ಮ್ಯಾಂಗಲೊರಿಯನ್ ಡಾಟ್ ಕಾಮ್ ಹೆಚ್ಚುಗಾರಿಕೆ.
ತನ್ನ 12 ನೇ ವರ್ಶದ ವಾರ್ಶಿಕೋತ್ಸವವನ್ನು ವಿಶಿಷ್ಟವಾಗಿ ಮೇ 10 ರಂದು ಮಂಗಳೂರಿನ ಹೋಟೆಲ್ ತಾಜ್ ನಲ್ಲಿ ಆಯೋಜಿಸಲಾಗಿತ್ತು. ವಿಶ್ವ ತಾಯಂದಿರ ದಿನ ಪ್ರಯುಕ್ತ ಮ್ಯಾಂಗಲೋರಿಯನ್ ಡಾಟ್ ಕಾಮ್ ವಿಶೇಷ ಸ್ಪರ್ಧೇಯನ್ನು ಆಯೋಜಿಸಿತ್ತು ಅದುವೆ ‘ತಾಯಿ ಮಗಳು ನೋಡಲು ಒಂದೇ ರೀತಿ’ (Mother-Daughter Look-Alike contest). ಇದಕ್ಕೆ ಒದುಗರಿಂದ ಬಂದ ಪ್ರತಿಕ್ರಿಯೆ ಅಪಾರ. ಕೊನೆಯಲ್ಲಿ ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾದ ಮೂರು ವಿಶೇಷ ತಾಯಿ ಮಗಳು ಸ್ಪರ್ಧಿಗಳನ್ನು ಆರಿಸಿ ಅವರಿಗೆ ಬಹುಮಾನವನ್ನು ವಿತರಿಸಲಾಯಿತು.
ಬಹುಮಾನ ವಿತರಣೆ ಸಮಾರಂಭವನ್ನು ಮುಖ್ಯ ಅತಿಥಿಗಳಾಗಿ ಆಗಮಿಸಿ ಕಾರ್ಯಕ್ರಮದ ಅಂದವನ್ನು ಹೆಚ್ಚಿಸಿದ್ದು ತುಳು ಸಿನಿಮಾದ ಉದಯೋನ್ಮುಖ ನಟಿಯರಾದ ಚಿರಾಶ್ರೀ ಅಂಚನ್ ಮತ್ತು ಸೋನಾಲ್ ಮೊಂತೆರೊ. ಇವರೊಂದಿಗೆ ತಾಜ್ ಗೇಟ್ ವೇ ಹೋಟೆಲ್ ಇದರ ವ್ಯವಸ್ಥಾಪಕರಾದ ಪೀಟರ್ ನಿರ್ಮಲ್ ಅತಿಥಿಗಳಾಗಿದ್ದರು. ಇವರೊಂದಿಗೆ ಮ್ಯಾಂಗಲೋರಿಯನ್ ಡಾಟ್ ಕಾಮ್ ಇದರ ಪ್ರಧಾನ ಸಂಪಾದಕರು ಹಾಗೂ ಮ್ಹಾಲಕರೂ ಆಗಿರುವ ವಾಯ್ಲೆಟ್ ಜೋಸೇಫ್ ಪಿರೇರಾ ಉಪಸ್ಥಿತರಿದ್ದರು.
‘ತಾಯಿ ಮಗಳು ನೋಡಲು ಒಂದೇ ರೀತಿ’ (Mother-Daughter Look-Alike contest). ಸ್ಪರ್ಧೆಯ ಮೂರು ವಿಜೇತರುಗಳಿಗೆ ಉಪಸ್ಥಿತರಿದ್ದ ಮುಖ್ಯ ಅತಿಥಿಗಳು ಗಿಫ್ಟ್ ವೋಚರ್ ಮತ್ತು ಟ್ರೋಫಿಗಳನ್ನು ನೀಡಿ ಗೌರವಿಸಿದರು.
ಸ್ಪರ್ಧೆಯ ವಿಜೇತರು. ಪ್ರಥಮ ಬಹುಮಾನ: ಅನಿತಾ (ತಾಯಿ) ಮತ್ತು ಅಮಂಡಾ (ಮಗಳು) ಫ್ರ್ಯಾಂಕ್, ದ್ವಿತೀಯ ಬಹುಮಾನ : ಡಯಾನ (ತಾಯಿ) ಮತ್ತು ರಿಯೋನಾ ರೀಶಾ (ಮಗಳು) , ತೃತೀಯ ಬಹುಮಾನ ವಿಜೇತಾ (ತಾಯಿ) ಮತ್ತು ತ್ರೀಶಾ (ಮಗಳು).
ಕಷ್ಟದಲ್ಲಿರುವವರಿಗೆ ತುಡಿಯವ ಸಂಸ್ಥೆ ಮ್ಯಾಂಗಲೋರಿಯನ್ ಡಾಟ್ ಕಾಮ್
ಮಾಧ್ಯಮ ಕ್ಷೇತ್ರದಲ್ಲಿ ತನ್ನ ಸಾರ್ಥಕ 13 ವರ್ಶಗಳನ್ನು ಪೊರೈಸಿದ ಮ್ಯಾಂಗಲೋರಿಯನ್ ಡಾಟ್ ಕಾಮ್ ಒಂದು ಕಡೆಯಾದರೆ ಅದರ ಸಂಪಾದಕರೂ ಹಾಗೂ ಮ್ಹಾಲಕರೂ ಆಗಿರುವ ವಾಯ್ಲೆಟ್ ಮತ್ತು ಜೋಸೇಫ್ ಪಿರೇರಾ ಅವರಿಗೆ ವೈವಾಹಿಕ ಜೀವನದ ರಜತ ಮಹೋತ್ಸವದ ಸಂಭ್ರಮ. ಇದನ್ನು ಸರಳವಾಗಿ ಆಚರಿಸುವುದರೊಂದಿಗೆ ಸಮಾಜದಲ್ಲಿ ಕಷ್ಟದಿಂದ ತುಡಿಯುವ ವ್ಯಕ್ತಿಗಳ ನೋವಿಗೆ ಸ್ಪಂದಿಸುವ ಮಹತ್ತರ ಕಾರ್ಯಕ್ರಮವನ್ನು ನಡೆಸಲಾಯಿತು.
12 ವರ್ಶದ ಸಂಭ್ರಮ ಹಾಗೂ ವೈವಾಹಿಕ ಜೀವನದ ರಜತೋತ್ಸವ ಸಂದರ್ಭದಲ್ಲಿ ವಾಯ್ಲೆಟ್ ಪಿರೇರಾ ವೈಟ್ ಡೌವ್ಸ್ ಸಂಸ್ಥೆ ಇದರ ನಿರ್ದೇಶಕಿ ಕೊರಿನ್ ರಸ್ಕಿನ್ಹಾ, ಎಚ್ಐವಿ ಸೋಂಕಿನಿಂದ ಬಳಲುತ್ತಿರುವ ವ್ಯಕ್ತಿಗಳ ಸೇವೆಯನ್ನು ಮಾಡುತ್ತಿರುವ ಜೀವಧನ ಸಂಸ್ಥೆ, ಹಾಗೂ ಮನೆಯನ್ನು ಕಳೆದು ಕೊಂಡು ಹೊಸ ಮನೆಯನ್ನು ಕಟ್ಟಲು ಹೆಣಗಾಣುತ್ತಿರುವ ದಯಾಕರ ಬಂಗೇರ ಅವರುಗಳಿಗೆ ಧನಸಹಾಯವನ್ನು ವಿತರಿಸಿದರು. ಅಷ್ಟೇ ಅಲ್ಲದೆ ವಾಯ್ಲೆಟ್ ಮತ್ತು ಜೋಸೇಫ್ ಪಿರೇರಾ ಅವರು ಕಳೆದ ಮೂರು ತಿಂಗಳಿಂದ ಯುನಿಟಿ ಆಸ್ಪತ್ರೆಯಲ್ಲಿ ಅಫಘಾತದಿಂದ ಚಿಕಿತ್ಸೆ ಪಡೆಯುತ್ತಿರುವ ಹತ್ತು ವರ್ಶದ ಶಕೀರ ಅವರಿಗೆ ವೈದ್ಯಕೀಯ ವೆಚ್ಚಕ್ಕಾಗಿ ಕೂಡ ವೈಯುಕ್ತಿಕವಾಗಿ ಬೇಟಿ ನೀಡಿ ಸಹಾಯ ಹಸ್ತವನ್ನು ಚಾಚಿದರು.