Spread the love
ಮಂಗಳೂರು| ಯುನಿಸೆಕ್ಸ್ ಸೆಲೂನ್ ನಲ್ಲಿ ದಾಂಧಲೆ ಪ್ರಕರಣ: ಪ್ರಸಾದ್ ಅತ್ತಾವರ ಸಹಿತ 11 ಮಂದಿಗೆ ಜಾಮೀನು
ಮಂಗಳೂರು: ನಗರದ ಯುನಿಸೆಕ್ಸ್ ಸೆಲೂನ್‌ನಲ್ಲಿ ನಡೆದ ದಾಂಧಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮಸೇನೆಯ ಸ್ಥಾಪಕ ಅಧ್ಯಕ್ಷ ಪ್ರಸಾದ್ ಅತ್ತಾವರ ಸಹಿತ 11 ಮಂದಿ ಆರೋಪಿಗಳಿಗೆ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಷರತ್ತು ಬದ್ಧ ಜಾಮೀನು ನೀಡಿದೆ.
ಈ ಪ್ರಕರಣದಲ್ಲಿ 14 ಮಂದಿಯನ್ನು ಪೊಲೀಸರು ಬಂಧಿಸಿದ್ದು, ಆ ಪೈಕಿ ಮೂವರು ಜಾಮೀನಿಗೆ ಅರ್ಜಿ ಸಲ್ಲಿಸಿರಲಿಲ್ಲ. ಅರ್ಜಿ ಸಲ್ಲಿಸಿದ 11 ಮಂದಿಗೆ ನ್ಯಾಯಾಧೀಶರು ಷರತ್ತುಬದ್ಧ ಜಾಮೀನು ನೀಡಿದ್ದಾರೆ.
ಜ.23 ರಂದು ನಗರದ ಬಿಜೈನಲ್ಲಿರುವ ಕಲರ್ಸ್ ಯುನಿಸೆಕ್ಸ್ ಸೆಲೂನ್‌ಗೆ ನುಗ್ಗಿ ಆರೋಪಿಗಳು ದಾಂಧಲೆ ನಡೆಸಿದ್ದರು. ಬಳಿಕ ಆ ದೃಶ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು. ತಕ್ಷಣ ಎಚ್ಚೆತ್ತುಕೊಂಡ ಬರ್ಕೆ ಪೊಲೀಸರು ಪ್ರಸಾದ್ ಅತ್ತಾವರ ಸಹಿತ 14 ಮಂದಿಯನ್ನು ಬಂಧಿಸಿದ್ದರು. ಆರೋಪಿಗಳಿಗೆ ಮಂಗಳೂರಿನ 6ನೆ ಜೆಎಂಎಫ್‌ಸಿ ನ್ಯಾಯಾಲಯ ಫೆ.7ರವರೆಗೆ ನ್ಯಾಯಾಂಗ ಬಂಧನ ವಿಧಿಸಿತ್ತು.
Spread the love