ಮಂಗಳೂರು: ಯುವಕ ನಾಪತ್ತೆ – ದೂರು ದಾಖಲು
ಮಂಗಳೂರು: ಮಂಗಳೂರು ನಗರ ಬಜಾಲ್ ಗ್ರಾಮದ ಕುತ್ತಡ್ಕ ಎಂಬಲ್ಲಿನ ಕಲ್ಯಾಣಿ ಕಂಪೌಂಡ್ ನಿವಾಸಿ ಚರಣ್ ರಾಜ್ (22) ಎಂಬ ಯುವಕನು ಡಿಸೆಂಬರ್ 1ರಂದು ಮನೆಯಿಂದ ಹೋದವನು ಮನೆಗೆ ವಾಪಸ್ ಬಾರದೆ ನಾಪತ್ತೆಯಾಗಿದ್ದಾನೆ.
ನಾಪತ್ತೆಯಾಗಿರುವ ಯುವಕನ ಚಹರೆ: 5.3 ಅಡಿ ಎತ್ತರ, ಸಪೂರ ಶರೀರ, ಕೋಲು ಮುಖ, ಎಣ್ಣೆ ಕಪ್ಪು ಮೈ ಬಣ್ಣ, ಕೆಂಪು ಗೆರೆಗಳಿರುವ ಬಿಳಿ ಬಣ್ಣದ ಶರ್ಟ್ ಮತ್ತು ಬಿಳಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದರು, ಕನ್ನಡ, ತುಳು, ಹಿಂದಿ ಭಾಷೆ ಮಾತನಾಡುತ್ತಾರೆ.
ನಾಪತ್ತೆಯಾದ ಯುವಕನ ಬಗ್ಗೆ ಮಾಹಿತಿ ಪತ್ತೆಯಾದಲ್ಲಿ ಕಂಕನಾಡಿ ನಗರ ಠಾಣೆಯನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.