Home Mangalorean News Kannada News ಮಂಗಳೂರು: ರಾಕ್ಣೊ ಪ್ರಕಾಶನದ ಪುಸ್ತಕಗಳ ಬಿಡುಗಡೆ ಹಾಗೂ ಸಂಪಾದಕರ ಜವಾಬ್ದಾರಿ ಹಸ್ತಾಂತರ

ಮಂಗಳೂರು: ರಾಕ್ಣೊ ಪ್ರಕಾಶನದ ಪುಸ್ತಕಗಳ ಬಿಡುಗಡೆ ಹಾಗೂ ಸಂಪಾದಕರ ಜವಾಬ್ದಾರಿ ಹಸ್ತಾಂತರ

Spread the love

ಮಂಗಳೂರು: 77 ವರ್ಷಗಳಿಂದ ಮಂಗಳೂರಿನಿಂದ ನಿರಂತರವಾಗಿ ಪ್ರಕಟಣೆಗೊಳ್ಳುವ ಪ್ರತಿಷ್ಟಿತ ಕೊಂಕಣಿ `ರಾಕ್ಣೊ’ ವಾರಪತ್ರಿಕೆ ಹಾಗೂ 1999ರಿಂದ ನಿರಂತರವಾಗಿ ಪ್ರಕಟಗೊಳ್ಳುತ್ತಿರುವ `ಕಾಜುಲೊ’ ಮಕ್ಕಳ ಕೊಂಕಣಿ ಮಾಸಿಕ ಪತ್ರಿಕೆಯು ರಾಕ್ಣೊ ಪ್ರಕಾಶನದಿಂದ ಪ್ರಕಟಗೊಳ್ಳುವ 2 ಹೊಸ ಪುಸ್ತಕಗಳ ಬಿಡುಗಡೆ ಸಮಾರಂಭವನ್ನು ಜೂನ್ 4ರಂದು ಗುರುವಾರ ಸಂಜೆ 3.45 ಗಂಟೆಗೆ ಕೊಡಿಯಾಲ್‍ಬಯ್ಲ್ ಧರ್ಮಾಧ್ಯಕ್ಷರ ನಿವಾಸದ ಸಭಾಭವನದಲ್ಲಿ ಹಮ್ಮಿಕೊಂಡಿದೆ.

ಧಾರ್ಮಿಕ ವಿಶ್ಲೇಶಕ ಹಾಗೂ ಬೈಬಲ್ ತಜ್ಞ ಫಾ| ವಿಕ್ಟರ್ ಎ. ಪಿಂಟೊ, ಕಿರೆಂ ಇವರ ಧಾರ್ಮಿಕ-ಸಾಮಾಜಿಕ ವಿಶ್ಲೇಶಣಾತ್ಮಕ ಲೇಖನಗಳ ಸಂಗ್ರಹ `ಲಾಂಪ್ಯಾಂವ್’ (ಕಂದೀಲು) ಈ ಸಭೆಯಲ್ಲಿ ಬಿಡುಗಡೆ ಮಾಡಲಾಗುವುದು. ಹಲವಾರು ವರ್ಷಗಳಿಂದ ಆದುನಿಕ ವಿಷಯಗಳ ಮೇಲೆ ಮಕ್ಕಳ ಕಥೆಗಳನ್ನು ರಚಿಸುತ್ತಿದ್ದ ಚಾರ್ಲಿ ಕುಲ್ಶೇಕರ್ ಇವರ ಮಕ್ಕಳ ಕಥಾ ಸಂಗ್ರಹ `ಮಿರ್ಸಾಂಗ್ ಮಿಲ್ಲಿಬಾಯ್’ (ಮೆಣಸು ಮಿಲ್ಲಿಬಾಯ್) ಪುಸ್ತಕವನ್ನು ಈ ಸಂಧರ್ಭದಲ್ಲಿ ಬಿಡುಗಡೆಗೊಳಿಸಲಾಗುವುದು. ಇವು ರಾಕ್ಣೊ ಪ್ರಕಾಶನದ 115 ಹಾಗೂ 116ನೇ ಪುಸ್ತಕಗಳಾಗಿ ಪ್ರಕಾಶನಗೊಳ್ಳುತ್ತಿವೆ.

ಇದೇ ಸಂಧರ್ಭದಲ್ಲಿ ರಾಕ್ಣೊ ಹಾಗೂ ಕಾಜುಲೊ ಪತ್ರಿಕೆಗಳ ಸಂಪಾದಕರ ಜವಾಬ್ದಾರಿಯನ್ನು ಹೊಸ ಸಂಪಾದಕರಾಗಿ ನೇಮಕಗೊಂಡಿರುವ ಕೊಂಕಣಿ ಭಾಷಾ ತಜ್ಞ ಫಾ| ವಾಲೆರಿಯನ್ ಫೆರ್ನಾಂಡಿಸ್ ಇವರ ಕೈಯಲ್ಲಿ ಹಸ್ತಾಂತರ ಮಾಡುವ ಪ್ರಕ್ರಿಯೆಯೂ ನಡೆಯುವುದು. ಮಂಗಳೂರು ಧರ್ಮಪ್ರಾಂತ್ಯದ ಶ್ರೇಷ್ಟ ಗುರು ಪೂಜ್ಯನೀಯ ಮೊನ್ಸಿಂಜ್ಞೊರ್ ಡೆನಿಸ್ ಪ್ರಭು ಈ ಕಾರ್ಯಕ್ರಮದ ಅಧ್ಯಕ್ಷರಾಗಿ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ರೊಯ್ ಕ್ಯಾಸ್ತಲಿನೊ ಇವರು ಮುಖ್ಯ ಅತಿಥಿಗಳಾಗಿ ಹಾಗೂ `ಕೊಡಿಯಾಲ ಖಬರ’ ಕೊಂಕಣಿ ಪಾಕ್ಷಿಕ ಪತ್ರಿಕೆಯ ಸಂಪಾದಕರಾದ ಶ್ರೀ ವೆಂಕಟೇಶ್ ಬಾಳಿಗಾ ಇವರು ಗೌರವ ಅತಿಥಿಗಳಾಗಿ ಈ ಕಾರ್ಯಕ್ರಮದಲ್ಲಿ ಹಾಜರಿರುವರು.


Spread the love

Exit mobile version