ಮಂಗಳೂರು: ರಾಜ್ಯ ಮಟ್ಟದ ಪ್ರೊ ಕಬಡ್ಡಿ ಪಂದ್ಯಾಟ: ಆಳ್ವಾಸ್ ಪ್ರಥಮ, ಎಸ್ ಡಿ ಎಂ ಉಜಿರೆ ದ್ವಿತೀಯ
ಮಂಗಳೂರು: ಎ ಇಲೆವೆನ್ ಸ್ಪೋರ್ಟ್ಸ್ ಕ್ಲಬ್ ಸಸಿಹಿತ್ಲು, ದಕ್ಷಿಣ ಕನ್ನಡ ಜಿಲ್ಲಾ ಹಾಗೂ ತಾಲೂಕು ಅಮೆಚೂರ್ ಕಬಡ್ಡಿ ಸಹಭಾಗಿತ್ವದಲ್ಲಿ ರಾಜ್ಯ ಮಟ್ಟದ ಪ್ರೊ ಕಬಡ್ಡಿ ಪಂದ್ಯಾಟ ಡಿ.21ರಂದು ಮಂಗಳೂರಿನ ಸಸಿಹಿತ್ಲುವಿನಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಸಸಿಹಿತ್ಲು ಗ್ರಾಮದ ಆರ್ಥಿಕ ಅಸಕ್ತರಿಗೆ ಹಾಗೂ ಪ್ರತಿಭಾವಂತರಿಗೆ ವಿದ್ಯಾರ್ಥಿವೇತನ ನೀಡುವ ಕಾರ್ಯಕ್ರಮವು ನೆರವೇರಿತು. ಕಬಡ್ಡಿ ಫೈನಲ್ಸ್ ಪಂದ್ಯದಲ್ಲಿ ಆಳ್ವಾಸ್ ಕಾಲೇಜು ವಿಜಯಿಯಾದರೆ, ಎಸ್.ಡಿ.ಎಂ ಕಾಲೇಜು ಉಜಿರೆ ತಂಡ ದ್ವಿತೀಯ ಸ್ಥಾನ ಪಡೆಯಿತು.
ವಿಜೇತ ತಂಡಗಳಿಗೆ ಎ ಇಲೆವೆನ್ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷರಾದ ಸುಭಾಷ್ ಕೋಟ್ಯಾನ್, ಭರತೇಶ್ ಶೆಟ್ಟಿಗಾರ್, ಉಪಾಧ್ಯಕ್ಷರಾದ ಅನಿಲ್ ಸಾಲ್ಯಾನ್ ಮತ್ತು ಸಂಸ್ಥೆಯ ಸಲಹೆಗಾರ ರಿತೇಶ್ ಸಾಲಿಯಾನ್, ಪ್ರಶಾಂತ್ ಕೋಟ್ಯಾನ್, ನಿತೇಶ್ ಸಾಲಿಯಾನ್ ಪ್ರಶಸ್ತಿ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಎರಡು ತಂಡಗಳ ನಡುವಿನ ಅಂತಿಮ ಪಂದ್ಯಾಟ ಬಹಳಷ್ಟು ಪೈಪೋಟಿಯಿಂದ ನಡೆದಿದ್ದು ನೂರಾರು ಸಂಖ್ಯೆಯಲ್ಲಿ ಕ್ರೀಡಾಭಿಮಾನಿಗಳು ಪಂದ್ಯಾಟವನ್ನು ವೀಕ್ಷಿಸಿದರು.