ಮಂಗಳೂರು : ದಿನಾಂಕ 8-11-2015 ಭಾನುವಾರದಂದು ನಗರದ ಅತ್ತಾವರ ಪರಿಸರದಲ್ಲಿ ರಾಮಕೃಷ್ಣ ಮಿಷನ್ ಆಯೋಜಿಸುತ್ತಿರುವ ಸ್ವಚ್ಛ ಭಾರತಕ್ಕಾಗಿ ಸ್ವಚ್ಛ ಮಂಗಳೂರು ಅಭಿಯಾನದ 26ನೇ ಕಾರ್ಯಕ್ರಮ ಜರುಗಿತು. ಪೆÇಳಲಿ ರಾಮಕೃಷ್ಣತಪೆÇೀವನದ ಅಧ್ಯಕ್ಷರಾದ ಸ್ವಾಮಿ ವಿವೇಕಚೈತನ್ಯಾನಂದಜಿ ಹಾಗೂ ಶ್ರೀ ಸುರೇಶ್ ಬಾಬು ಜಂಟಿಯಾಗಿ 26ನೇ ಅಭಿಯಾನಕ್ಕೆ ಚಾಲನೆ ನೀಡಿದರು. ಬೆಳಿಗ್ಗೆ 7:30 ರಿಂದ 10 ಗಂತೆಯವರೆಗೆ ಸ್ವಚ್ಛತಾ ಕೈಂಕರ್ಯ ನಡೆಯಿತು. ಸುಮಾರು 150 ಜನ ಸ್ವಯಂ ಸೇವಕರು ಅತ್ತಾವರಕಟ್ಟೆಯ ಸುತ್ತಮುತ್ತಲಿನ ಜಾಗೆಗಳಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡರು.
ಅಭಿಯಾನದ ಸಂಯೋಜಕ ದಿಲ್‍ರಾಜ್ ಆಳ್ವ ಮಾರ್ಗದರ್ಶನದಲ್ಲಿ ರಥಬೀದಿ ಸರಕಾರಿ ಪದವಿ ಕಾಲೇಜು ವಿದ್ಯಾರ್ಥಿಗಳು ಹಂಪಣಕಟ್ಟೆಯಲ್ಲಿರುವ ತಾಲೂಕ ಪಂಚಾಯತ್ ಆವರಣದಲ್ಲಿದ್ದ ಅಪಾರ ಪ್ರಮಾಣದ ತ್ಯಾಜ್ಯವನ್ನು ಸಂಪೂರ್ಣವಾಗಿ ತೆರವುಗೊಳಿಸಿ ಸ್ವಚ್ಛಗೊಳಿಸಿದರು. ಸುಮಾರು 3 ಟಿಪ್ಪರ್‍ಗಳಷ್ಟಿದ್ದ ತ್ಯಾಜ್ಯವನ್ನು ಸ್ವಚ್ಛ ಮಂಗಳೂರು ಕಾರ್ಯಕತರು ಜೆಸಿಬಿ ಬಳಸಿ ಸ್ವಚ್ಛಗೊಳಿಸಿದ್ದಾರೆ. ಹಾಗೂ ಪುರಭವನದ ಪಕ್ಕದಲ್ಲಿ ರೈಲ್ವೆ ನಿಲ್ದಾಣಕ್ಕೆ ಹೋಗುವ ರಸ್ತೆಗೆ ಹೊಸದಾಗಿ ಅಳವಡಿಸಿದ್ದ ನೂತನ ಇಂಟರ್‍ಲಾಕ್ ಸಿಮೆಂಟ್ ಗಾರೆ ಹಾಕಿ ಭದ್ರಗೊಳಿಸಲಾಯಿತು.
ಸಾರ್ವಜನಿಕರ ಹಾಗೂ ಹೊಸಬರಿಗೆ ಅನುಕೂಲವಾಗಲೆಂದು ಹಾಕಲಾಗಿದ್ದ ಅತ್ತಾವರ 1ನೇ ಆಡ್ದ ರಸ್ತೆ. 2ನೇ ಅಡ್ಡ ರಸ್ತೆ ಮತ್ತು ಎಸ್‍ಎಲ್ ಮಥಾಯಿಸ್ ರಸ್ತೆಯಲ್ಲಿದ್ದ ಫಲಕಗಳು ಮಾಸಿ ಹೋಗಿದ್ದವು. ಆ ಮೂರು ಫಲಕಗಳನ್ನು ಹೊಸದಾಗಿ ಸುಣ್ಣ ಬಣ್ಣ ಬಳಿದು ಸುಂದರವಾಗಿ ಬರೆಯಿಸಲಾಗಿದೆ.
ಸುರೇಶ್ ಶೆಟ್ಟಿ ಹಾಗೂ ಶುಭೋದಯ ಆಳ್ವ ಇವರುಗಳ ನೇತೃತ್ವದಲ್ಲಿ ಶ್ರೀ ಎಸ್ ಎಂ ಕುಶೆ ಶಾಲೆಯ ವಿದ್ಯಾರ್ಥಿಗಳು ಅತ್ತಾವರಕಟ್ಟೆಯ ಸುತ್ತಮುತ್ತ ಹರಡಿಕೊಂಡಿದ್ದ ತ್ಯಾಜ್ಯವನ್ನು ಶುಚಿಗೊಳಿಸಿದರು. ಇನ್ನೊಂದು ಕಡೆ ಅತ್ತಾವರ ಪರಿಸರದಲ್ಲಿ ಹಿರಿಯ ಸ್ವಯಂ ಸೇವಕರಾದ ಶ್ರೀ ವಿಠಲದಾಸ ಪ್ರಭು ಹಾಗೂ ನಕ್ರೆ ಸುರೇಂದ್ರ ಶೆಟ್ಟಿಯವರ ಮಾರ್ಗದರ್ಶನದಲ್ಲಿ ಸ್ವಯಂ ಸೇವಕರುಕಟ್ಟೆಯ ಎದುರುಗಡೆಯಿರುವ ಭಾಗವನ್ನು ಹಾಗೂ ಬಿಗ್‍ಜಜಾರ್ ಎದುರುಗಡೆಯ ರಸ್ತೆಯನ್ನು ಸ್ವಚ್ಛಗೊಳಿಸಿದರು. ಎಸ್ ಎಂ ಕುಶೆ ಶಾಲೆಯ ರಸ್ತೆಯಲ್ಲಿ ಸ್ವಯಂ ಅಧ್ಯಾಪಕರರೇ ಖುದ್ದು ಪೆÇರಕೆ ಹಿಡಿದು ವಿದ್ಯಾರ್ಥಿಗಳೊಂದಿಗೆ ಗುಡಿಸಿದ್ದು ವಿದ್ಯಾರ್ಥಿಗಳಿಗೆ ಸ್ಪೂರ್ತಿ ನೀಡುತ್ತಿತ್ತು. ಆಶ್ರಮದ ಕಾರ್ಯಕರ್ತರು ಕೊಳೆಕೊಚ್ಚುವ ಯಂತ್ರವನ್ನು ಬಳಸಿ ದಾರಿಯಲ್ಲಿದ್ದ ಹುಲ್ಲನ್ನುಕತ್ತರಿಸಿದರು. ಬಾಲಕರಿಂದ ಹಿಡಿದು ಹಿರಿಯ ನಾಗರಿಕರು ಭಾಗವಹಿಸಿ ಸ್ವಚ್ಛತೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು ವಿಶೇಷವಾಗಿತ್ತು. ಹಿರಿಯರಿಗೆ ಸಹಾಯಕರಾಗಿ ವಿದ್ಯಾರ್ಥಿಗಳು ತ್ಯಾಜ್ಯ ಸಂಗ್ರಹಿಸಿ ವಾಹನಕ್ಕೆ ತುಂಬಿಸಿ ಸಹಾಯ ಮಾಡುತ್ತಿದ್ದುದು ಸಾರ್ವಜನಿಕರ ಗಮನ ಸೆಳೆಯುತ್ತುತ್ತು.
ಸ್ವಚ್ಚತಾಕಾರ್ಯದೊಂದಿಗೆ ಅದರ ಬಗ್ಗೆ ಅರಿವನ್ನು ಮೂಡಿಸಬೇಕೆಂಬ ಉದ್ದೇಶದಿಂದ ಸ್ವಯಂ ಸೇವಕರಾಗಿ ಆಗಮಿಸಿದ್ದ ಕಾಲೇಜು ವಿದ್ಯಾರ್ಥಿಗಳು, ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಅತ್ತಾವರ ಮುಖ್ಯ ರಸ್ತೆಗಳಲ್ಲಿರುವÀ ಅಂಗಡಿಗಳಿಗೆ ಮತ್ತು ಮನೆಮನೆಗೆ ಹೋಗಿ ಸ್ವಚ್ಚತೆಯ ಜಾಗೃತಿ ಕರಪತ್ರ ವಿತರಿಸಿದರು.
ಎಮ್‍ಎಸ್ ಕುಶೆ ವಿದ್ಯಾ ಸಂಸ್ಥೆಯ ಪ್ರಾಚಾರ್ಯರಾದ ಪೆÇ್ರ. ಕೆ. ಕೆ ಉಪಾಧ್ಯಾಯ ಹಾಗೂ ಪ್ರತಿಮ ಕುಮಾರ ನೇತೃತ್ವದಲ್ಲಿ ಅವರ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಈ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಶ್ರೀನಿವಾಸ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಸ್ವಯಂ ಸ್ಪೂರ್ತಿಯಿಂದ ಅಭಿಯಾನಕ್ಕೆ ಆಗಮಿಸಿ ಸಹಕರಿಸಿದರು. ರಥಬೀದಿ ಸರಕಾರಿ ಪದವಿ ಕಾಲೇಜಿನ ಪೆÇ್ರ. ಶೇಷಪ್ಪ ಅಮೀನ್, ಸಹ ಪ್ರಾಧ್ಯಾಪಕ ಶ್ರೀ. ಮಹೇಶ್ ಕೆಬಿ, ಮನಿಕೃಷ್ಣ ಸ್ವಾಮಿ ಅಕೆಡಮಿಯ ಶ್ರೀ ನಿತ್ಯಾನಂದ ರಾವ್ ಮತ್ತಿತರು ಸ್ವಚ್ಛ ಮಂಗಳೂರು ಅಭಿಯಾನದಲ್ಲಿ ಭಾಗವಹಿಸಿದ್ದರು. ಮಹಾಪೆÇೀಷಕರಾಗಿ ಈ ಅಭಿಯಾನಕ್ಕೆ ಎಂಆರ್‍ಪಿಎಲ್ ಸಂಸ್ಥೆ ತನ್ನ ಸಹಕಾರ ನೀಡುತ್ತಿದೆ.