ಮಂಗಳೂರು: ರಾಮಕೃಷ್ಣ ಮಿಷನ್ 18 ನೇ ವಾರದ ಸ್ವಚ್ಛ ಭಾರತಕ್ಕಾಗಿ ಸ್ವಚ್ಚ ಮಂಗಳೂರು ಅಭಿಯಾನ

Spread the love

ಮಂಗಳೂರು: ರಾಮಕೃಷ್ಣ ಮಿಷನ್‍ ಹಮ್ಮಿಕೊಂಡಿರುವ 40 ವಾರಗಳ “ಸ್ವಚ್ಛಮಂಗಳೂರು” ಅಭಿಯಾನದ 18ನೇ ವಾರದ ಸ್ವಚ್ಚತಾ ಕಾರ್ಯವನ್ನುದಿನಾಂಕ 31-05-2015 ರಂದು ನಗರದ ಪಿವಿಎಸ್ ವೃತ್ತ ಹಾಗೂ ಮಹಾತ್ಮಗಾಂಧಿ ರಸ್ತೆಯಲ್ಲಿ ಕೈಗೊಳ್ಳಲಾಯಿತು. ಮಠದಮುಖ್ಯಸ್ಥರಾದ ಸ್ವಾಮಿಜಿತಕಾಮಾನಂದಜಿಯವರ ಉಪಸ್ಥಿತಿಯಲ್ಲಿ ವಿಜಯವಾಣಿ ಸ್ಥಾನಿಕ ಸಂಪಾದಕರಾದ ಶ್ರೀ ಸುರೇಂದ್ರ ವಾಗ್ಳೆ ಅಭಿಯಾನಕ್ಕೆ ಚಾಲನೆ ನೀಡಿದರು.

ಸ್ವಯಂ ಸೇವಕರ ನಾಲ್ಕು ತಂಡಗಳನ್ನು ರಚಿಸಿ ಪಿವಿಎಸ್ ವೃತ್ತ, ಮಹಾತ್ಮಗಾಂಧಿ ರಸ್ತೆ, ಜೈಲ್‍ ರಸ್ತೆ ಹಾಗೂ ಮಾನಸ್‍ ಟವರ್ಸ್‍ ಎದುರುಗಡೆ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳಲಾಯಿತು.

sw1 sw2 sw3 sw4 sw5 sw6 sw7 sw8 sw9 sw10

ಮಂಗಳೂರಿನ ಪ್ರತಿಷ್ಟಿತ ಮಹಾತ್ಮಗಾಂಧಿ ರಸ್ತೆಯಲ್ಲಿರುವ ಮಾನಸ್‍ ಟವರ್ಸ್‍ಎದುರುಗಡೆಯಿರುವ ತೆರೆದ ಹೊಂಡ ಹಲವಾರು ವರುಷಗಳಿಂದ ದಾರಿಹೋಕರಿಗೆ ಅಪಾಯಕಾರಿಯಾಗಿತ್ತು. ಸ್ವಚ್ಛ ಮಂಗಳೂರು ಅಭಿಯಾನದ ಕಾರ್ಯಕರ್ತರು ಶ್ರೀ ರಾಘವೇಂದ್ರ ಅಮೀನ್ ನೇತೃತ್ವದಲ್ಲಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಈ ಬೃಹತ್‍ ಕಾರ್ಯಕ್ಕೆ ಕಳೆದ ಹದಿನೈದು ದಿನಗಳಿಂದ ತಯಾರಿ ನಡೆಸಿ ಇಂದು ಅದನ್ನು ಕಾರ್ಯಗತಗೊಳಿಸಿದರು.

ನಗರದಲ್ಲಿ ಕೆಲವು ಮಾರ್ಗದರ್ಶಿ ಫಲಕಗಳು ನವೀಕರಿಸಲು ಬಾರದ ಸ್ಥಿತಿಯಲ್ಲಿವೆ. ಅಂತಹವುಗಳ ಸ್ಥಳದಲ್ಲಿ ನೂತನ ಬೋರ್ಡಗಳನ್ನು ಅಳವಡಿಸಲು ಯೋಜಿಸಲಾಗಿದೆ. ಆ ಯೋಜನೆಯ ಪ್ರಥಮವಾಗಿ ಇಂದು  ಮಹಾತ್ಮಗಾಂಧಿ ರಸ್ತೆಯ 9ನೇ ಅಡ್ಡರಸ್ತೆಯಲ್ಲಿ ಅಳವಡಿಸಲಾಗಿದೆ.

ಪಿವಿಎಸ್ ವೃತ್ತದಲಿರುವ ರಸ್ತೆ ವಿಭಾಜಕದಲ್ಲಿ ಹುಲ್ಲುಹಾಸು ನಿರ್ವಹಣೆ ಇಲ್ಲದೆ ಕಳೆ ಕಸದಿಂದ ತುಂಬಿತ್ತು. ಅದನ್ನು ಶುಚಿಗೊಳಿಸಿ ಆಧುನಿಕ ಮಾದರಿಯ ಹುಲ್ಲುಹಾಸು (ಸಿಂಥೆಟಿಕ್ ಗ್ರಾಸ್) ಅಳವಡಿಸಿ ಚೆಂದಗೊಳಿಸಲಾಗಿದೆ.


Spread the love