Home Mangalorean News Kannada News ಮಂಗಳೂರು: ರಾಮಕೃಷ್ಣ ಮಿಷನ್ 37ನೇ ಭಾನುವಾರದಸ್ವಚ್ಚ ಮಂಗಳೂರು ಅಭಿಯಾನದ ವರದಿ

ಮಂಗಳೂರು: ರಾಮಕೃಷ್ಣ ಮಿಷನ್ 37ನೇ ಭಾನುವಾರದಸ್ವಚ್ಚ ಮಂಗಳೂರು ಅಭಿಯಾನದ ವರದಿ

Spread the love

ರಾಮಕೃಷ್ಣ ಮಿಷನ್ ನೇತೃತ್ವದ “ಸ್ವಚ್ಛ ಮಂಗಳೂರು” ಅಭಿಯಾನದÀ 37ನೇ ಭಾನುವಾರದÀ ಸ್ವಚ್ಚತಾ ಕಾರ್ಯಕ್ರಮವನ್ನು ಲೇಡಿಗೋಶನ್ ಆಸ್ಪತ್ರೆಯ ಆವರಣ ಹಾಗೂ ರಾವ್ ಆಂಡ್ ರಾವ್ ವೃತ್ತದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಮ್ಮಿಕೊಳ್ಳಲಾಯಿತು. ದಿನಾಂಕ 31-1-2016 ರಂದು ಬೆಳಿಗ್ಗೆ 7:30 ಕ್ಕೆ ವಿಧಾನ ಪರಿಷತ್ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್ ಘನ ಉಪಸ್ಥಿತಿಯಲ್ಲಿ ಪೂಜ್ಯ ಸ್ವಾಮಿ ಶಿವಪ್ರೇಮಾನಂದಜಿ ರಾಮಕೃಷ್ಣ ಮಠಕಾಂಕುರಗಾಚಿಕಲ್ಕತ್ತ ಹಾಗೂ ಲೇಡಿಗೋಶನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ. ಸವಿತಾ ಬಿ ಎಸ್ ಜಂಟಿಯಾಗಿ ಕಾರ್ಯಕ್ರಮಕ್ಕೆ ಹಸಿರು ಧ್ವಜ ತೋರಿ ಚಾಲನೆ ನೀಡಿದರು. ಶ್ರೀ ಎಂ ಆರ್ ವಾಸುದೇವ, ಕೋಡಂಗೆ ಬಾಲಕೃಷ್ಣ ನಾಯ್ಕ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಸ್ವಚ್ಛತೆ :ಪ್ರಪ್ರಥಮವಾಗಿ ಕೊಲ್ಕತ್ತದಿಂದ ಆಗಮಿಸಿದ್ದ ಸ್ವಾಮಿಜಿಯವರು ಹಾಗೂ ಗಣ್ಯರು ಪೆÇರಕೆಗಳನ್ನು ಹಿಡಿದು ಲೇಡಿಗೋಶನ್ ಆಸ್ಪತ್ರೆಯ ಆವರಣದಲ್ಲಿ ಕಸ ಗುಡಿಸಿದರು. ನಂತರ ಸ್ವಯಂ ಸೇವಕರು ತಂಡಗಳಾಗಿ ವಿಭಾಗಿಸಿಕೊಂಡು ಸ್ವಚ್ಛತಾ ಕಾರ್ಯಕ್ಕಿಳಿದರು. ಅಮ್ಮ – ಭಗವಾನ್ ಕಲ್ಕಿ ಅನುಯಾಯಿಗಳು ಶ್ರೀ ಜಗದೀಶ್ ಹಾಗೂ ಶ್ರೀ ಗಣೇಶ್ ಮುಂದಾಳುತನದಲ್ಲಿ ಲೇಡಿಗೋಶನ್ ಆಸ್ಪತ್ರೆಯ ಮುಂಭಾಗ ಹಾಗೂ ಆವರಣವನ್ನು ಶ್ರಮವಹಿಸಿ ಶುಚಿಗೊಳಿಸಿದರು. ಎರಡನೇ ತಂಡ ಹಿಂದೂ ವಾರಿಯರ್ಸ್ ವಾಟ್ಸಾಪ್ ಗ್ರೂಪ ಸದಸ್ಯರ ನೇತೃತ್ವದಲ್ಲಿ ರಾವ್ ಆಂಡ್ ರಾವ್ ಸರ್ಕಲ್‍ನ್ನು ನವೀಕರಿಸಲಾಯಿತು. ಮೂರನೇ ತಂಡ ಶ್ರೀ ಉಮಾನಾಥ ಕೋಟೆಕಾರ ಹಾಗೂ ಶ್ರೀ ಸುಜಿತ ಪ್ರತಾಪ ಮಾರ್ಗದರ್ಶನದಲ್ಲಿ ಲೇಡಿಗೋಶನ್‍ನ ಎದುರಿರುವ ಬಸ್ ತಂಗುದಾಣ ಹಾಗೂ ರಾವ್ ಆಂಡ ರಾವ ವೃತ್ತದ ವರೆಗಿನ ರಸ್ತೆಯ ಇಕ್ಕೆಲಗಳನ್ನು ಸ್ವಚ್ಛಗೊಳಿಸಿದರು. ಶ್ರೀ ಸುರೇಶ್ ಶೆಟ್ಟಿ ಈ ಅಭಿಯಾನದ ಉಸ್ತುವಾರಿ ನೋಡಿಕೊಂಡರು.
ಕಾರ್ಯಕ್ರಮಕ್ಕೆ ಚಾಲನೆ ದೊರೆತ ಬಳಿಕ ಶ್ರೀ ಶುಭೋದಯ ಆಳ್ವ ನೇತೃತ್ವದಲ್ಲಿ ಸುಮಾರು 50 ಜನ ಕಾರ್ಯಕರ್ತರು ಲೇಡಿಗೋಶನ್ ಆಸ್ಪತ್ರೆಯ ಆವರಣವನ್ನು ಶುಚಿಗೊಳಿಸಿದರು. ಕಾರ್ಯಕರ್ತರು ಆಸ್ಪತ್ರೆಯ ಆವರಣದ ಸಂದಿಗೊಂದಿಗಳನ್ನು ಹೊಕ್ಕು ಸ್ವಚ್ಛಗೊಳಿಸುತ್ತಿದ್ದುದ್ದು ವಿಶೇಷವಾಗಿತ್ತು. ಅಂತಿಮವಾಗಿ ಸುಮಾರು ಒಂದು ಟಿಪ್ಪರಿನಷ್ಟು ಕಸವನ್ನು ಹೊರತೆಗೆದು ಆವರಣವನ್ನು ಸ್ವಚ್ಛಗೊಳಿಸಲಾಯಿತು. ಆಸ್ಪತ್ರೆಯ ಮುಂಭಾಗದ ಗೇಟ್ ಹಾಗೂ ಆವರಣ ಗೋಡೆಗೆ ಅಂಟಿಸಿದ್ದ ಪೆÇೀಸ್ಟರ್‍ಗಳನ್ನು ತೆರವುಗೊಳಿಸಲಾಯಿತು. ತದನಂತರ ನೀರಿನಿಂದ ತೊಳೆದು ಮುಂಭಾಗದ ಆವರಣ ಗೋಡೆಗೆ ಸುಣ್ಣ ಬಣ್ಣವನ್ನು ಹಚ್ಚಿ ಸುಂದರಗೊಳಿಸಲಾಗಿದೆ.
ವೃತ್ತದ ನವೀಕರಣ:ನಿತ್ಯ ಸಾವಿರಾರು ಜನ ಸಂಚರಿಸುವ ಹಾಗೂ ದರ್ಶಿಸುವ ರಾವ್‍ಆಂಡ್‍ರಾವ ಸರ್ಕಲ್‍ನ ದುಸ್ಥಿತಿ ಹೇಳ ತೀರದಾಗಿತ್ತು. ಹಲವಾರು ವರುಷಗಳಿಂದ ನಿರ್ಲಕ್ಷಕ್ಕೊಳಗಾಗಿ ಆ ಪ್ರದೇಶದ ಅಂದವನ್ನು ಹಾಳುಗೆಡಿವಿತ್ತು. ಅಭಿಯಾನದ ಸಕ್ರಿಯ ಕಾರ್ಯಕರ್ತ ದಿಲರಾಜ್ ಆಳ್ವ ಹಾಗೂ ಶ್ರೀ ಆನಂದ ಅಡ್ಯಾರ ಇವರುಗಳ ವಿಶೇಷ ಆಸಕ್ತಿಯ ಫಲವಾಗಿ ಇಂದು ಆ ವೃತ್ತ ಶುಚಿಗೊಂಡು, ಸುಂದರವಾಗಿ ಬಣ್ಣ ಬಳಸಿಕೊಂಡು ಕಂಗೊಳಿಸುತ್ತಿದೆ. ಹಿಂದೂ ವಾರಿಯರ್ಸ ತಂಡದ ಶ್ರಮ ಇಲ್ಲಿ ಉಲ್ಲೇಖನಿಯ.
ಲೇಡಿಗೋಶನ್ ಆಸ್ಪತೆಯ ಮುಂಭಾಗದಲ್ಲಿರುವ ಎರಡು ಬಸ್ ನಿಲ್ದಾಣಗಳು ಕಸದ ತೊಟ್ಟಿಗಳಂತಿದ್ದವು. ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಕು. ಶ್ವೇತಾ ಹಾಗೂ ಕು. ಸ್ವರ್ಣಾ ಇವರ ಜೊತೆಗೂಡಿ ಸ್ವಚ್ಛಗೊಳಿಸಿದ್ದಾರೆ. ತಂಗುದಾಣದ ಹಿಂಭಾಗದಲ್ಲಿರುವ ಆವರಣಗೋಡೆಗೆ ಅಂಟಿಸಲಾಗಿದ್ದ ಅನಧಿಕೃತ ಭಿತ್ತಿಚಿತ್ರಗಳನ್ನು ಕಿತ್ತು ಶುಚಿಗೊಳಿಸಿದ್ದಾರೆ.
ನಗರ ಸಾರಿಗೆ ಬಸ್ಸುಗಳು ಸರ್ವೀಸ್ ಬಸ್ ನಿಲ್ದಾಣದ ಮುಖ್ಯರಸ್ತೆಯ ಬಳಿ ಕಲ್ಲು ಮಣ್ಣುಗಳ ರಾಶಿ ಸಾರ್ವಜನಿಕರಿಗೆ ಹಾಗೂ ಬಸ್ಸುಗಳು ಓಡಾಟಕ್ಕೆ ಅಡ್ಡಿಯಾಗುತ್ತಿತ್ತು. ಅಂತಹ ಎರಡು ರಾಶಿಗಳನ್ನು ತೆರವುಗೊಳಿಸಿ ಪ್ರಯಾಣಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಪ್ರಯತ್ನಿಸಲಾಗಿದೆ.
ಸ್ವಚ್ಛತೆಯೊಂದಿಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಸ್ವಚ್ಛ ಮಂಗಳೂರು ಅಭಿಯಾನದ ಮಹೋಭಿಲಾಶೆ! ಅದರಂತೆ ಸ್ವಯಂ ಸೇವಕರು ಇಂದು ಸ್ವಚ್ಚತೆಯ ಮಹತ್ವವನ್ನು ಸಾರುವ ಕರಪತ್ರಗಳನ್ನು ಹಿಡಿದುಕೊಂಡು ಸಾರ್ವಜನಿಕರಿಗೆ, ದಾರಿಹೋಕರಿಗೆ , ವ್ಯಾಪಾರಿಗಳಿಗೆ ಸ್ವಚ್ಚ ಪರಿಸರ ಕುರಿv Àಕರಪತ್ರ ನೀಡಿ ಜಾಗೃತಿ ಮೂಡಿಸಲು ಪ್ರಯತ್ನಿಸಿದರು.


Spread the love

Exit mobile version