Home Mangalorean News Kannada News ಮಂಗಳೂರು : ರಾಮಕೃಷ್ಣ ಮಿಷನ್ ; “ಸ್ವಚ್ಛ ಮಂಗಳೂರು” ಅಭಿಯಾನದ 22ನೇ ಭಾನುವಾರದ ಸ್ವಚ್ಚತಾ ಕಾರ್ಯ

ಮಂಗಳೂರು : ರಾಮಕೃಷ್ಣ ಮಿಷನ್ ; “ಸ್ವಚ್ಛ ಮಂಗಳೂರು” ಅಭಿಯಾನದ 22ನೇ ಭಾನುವಾರದ ಸ್ವಚ್ಚತಾ ಕಾರ್ಯ

Spread the love

ಮಂಗಳೂರು : ರಾಮಕೃಷ್ಣ ಮಿಷನ್ ಆಯೋಜಿಸುತ್ತಿರುವ 40 ವಾರಗಳ “ಸ್ವಚ್ಛ ಮಂಗಳೂರು” ಅಭಿಯಾನದ 22ನೇ ಭಾನುವಾರದ ಸ್ವಚ್ಚತಾ ಕಾರ್ಯವನ್ನು ದಿನಾಂಕ 11-10-2015 ರಂದು ನಗರದ ಜ್ಯೋತಿ, ಬಲ್ಮಠ ಹಾಗೂ ಕಲೆಕ್ಟರ್ಸ್‍ಗೇಟ್ ಸುತ್ತಮುತ್ತಲಿನ ಪರಿಸರದಲ್ಲಿ ಕೈಗೊಳ್ಳಲಾಯಿತು. ಸ್ವಾಮಿಜಿತಕಾಮಾನಂದಜಿ ಹಾಗೂ ಅಭಿಯಾನದ ಮಾರ್ಗದರ್ಶಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಉಪಸ್ಥಿತಿಯಲ್ಲಿ ಸ್ಥಳಿಯ ಮನಪಾ ಸದಸ್ಯ ಶ್ರೀ ಎ ಸಿ ವಿನಯರಾಜ್ ಹಾಗೂ ಬಲ್ಮಠ ಮಹಿಳಾ ಕಾಲೇಜಿನ ಪ್ರಾಚಾರ್ಯರಾದ ಪೆÇ್ರೀ. ರಮಾನಾಥ ಬಿ ಜಂಟಿಯಾಗಿ ಅಭಿಯಾನಕ್ಕೆ ಚಾಲನೆ ನೀಡಿದರು.

  ಸುಮಾರು 450 ಕ್ಕೂ ಅಧಿಕ ಸ್ವಯಂ ಸೇವಕರು ಭಾಗವಹಿಸಿದ್ದರು. ಸುಮಾರು ಹತ್ತು ತಂಡಗಳಂತೆ ವಿಭಾಗಿಸಿ ಅತ್ಯಂತ ಶಿಸ್ತಿನಿಂದ ಸ್ವಚ್ಚತಾ ಅಭಿಯಾನ ಜರುಗಿತು. ಸ್ವಾಮಿಜಿತಕಾಮಾನಂದಜಿ ಹಾಗೂ ಮನಪಾ ಸದಸ್ಯ ಎ ಸಿ ವಿನಯರಾಜ್ ಬಲ್ಮಠ ರಸ್ತೆಯಲ್ಲಿಸ್ವಚ್ಚತಾ ಕೈಂಕರ್ಯದ ಮುಂಚುಣಿಯಲ್ಲಿದ್ದರು. ಬಲ್ಮಠ ಮಹಿಳಾ ಕಾಲೇಜು ಆವರಣ,  ಜ್ಯೋತಿ ವೃತ್ತ, ಕೆಎಂಸಿ ಆಸ್ಪತ್ರೆಯ ಆಸುಪಾಸು, ಬಲ್ಮಠರಸ್ತೆ, ಕಲೆಕ್ಟರ್ಸ್‍ಗೇಟ್ ಸುತ್ತಮುತ್ತ ಹಾಗೂ ಆರ್ಯ ಸಮಾಜ ರಸ್ತೆಗಳಲ್ಲಿ ಸ್ವಯಂ ಸೇವಕರು ಹಾರೆ ಪೆÇರಕೆ ಬುಟ್ಟಿ, ಬ್ರಷ್ ಬಣ್ಣಇತ್ಯಾದಿ ಸಲಕರಣೆಗಳನ್ನು ಹಿಡಿದುಕೆಲಸ ಮಾಡುತ್ತಿದ್ದುದು ದಾರಿಹೋಕರಿಗೆ ಅಪರೂಪದ ದೃಶ್ಯವಾಗಿತ್ತು

ಪ್ರಾಧ್ಯಾಪಕರಾದ ಶ್ರೀಮಹೇಶ್ ಕೆಬಿ , ಶ್ರೀಶೇಷಪ್ಪ ಅಮೀನ್ ಹಾಗೂ ಬಲ್ಮಠ ಮಹಿಳಾ ಕಾಲೇಜಿನ ಎನ್‍ಎಸ್‍ಎಸ್ ಘಟಕದ ಸಂಯೋಜನಾಧಿಕಾರಿ ಶ್ರೀಮತಿ ಶಶಿಕಲಾ ಕೆ ಅವರ ನೇತೃತ್ವದಲ್ಲಿ ಸುಮಾರು 450 ಜನ ವಿದ್ಯಾರ್ಥಿ ವಿದ್ಯಾರ್ಥಿನಿಯರು ಸ್ವಚ್ಚತಾ ಅಭಿಯಾನದಲ್ಲಿ ಭಾಗವಹಿಸಿದರು.

ಮನೋವೈದ್ಯ ಡಾ. ಸತೀಶ್‍ರಾವ್, ಶ್ರೀಸುರೇಶ್ ಶೆಟ್ಟಿ, ರಾಧಕೃಷ್ಣ ಕೆ,  ಶ್ರೀಶುಭೋದಯ ಆಳ್ವ, ಶ್ರೀಮತಿ ವಿನಿತಾರೈ, ಶ್ರೀ ಉಮಾನಾಥ ಕೋಟೆಕಾರ್ ಹಾಗೂ ಅಭಿಯಾನದ ಸಂಯೋಜಕ ಶ್ರೀ ದಿಲ್‍ರಾಜ ಆಳ್ವ  ಮತ್ತಿತರು ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.

22ನೇ ಭಾನುವಾರದ ಸ್ವಚ್ಛಅಭಿಯಾನದ ಕೆಲವು ಚಿತ್ರಗಳನ್ನು ಲಗತ್ತಿಸಿದ್ದೇವೆ. ದಯಮಾಡಿ ಈ ಮೇಲ್ಕಂಡ ಸುದ್ದಿಯನ್ನು ಪ್ರಕಟಿಸಿ ಪರೋಕ್ಷವಾಗಿ ನೀವೂ ಈ “ಸ್ವಚ್ಚ ಮಂಗಳೂರು ಅಭಿಯಾನ” ದಲ್ಲಿ ಕೈಜೋಡಿಸಿ ಪೆÇ್ರೀತ್ಸಾಹಿಸಬೇಕೆಂದು ಕೇಳಿಕೊಳ್ಳುವೆವು.


Spread the love

Exit mobile version