ಮಂಗಳೂರು: ಲಕ್ಷಾಂತರ ಬೆಲೆಬಾಳುವ ಚಿನ್ನವನ್ನು ರಿಕ್ಷಾದಲ್ಲೇ ಬಿಟ್ಟ ಮಂದಿ ರೈಲನ್ನೇರಿದ್ದ ವ್ಯಕ್ತಿಯೊರ್ವರ ವಸ್ತುಗಳನ್ನು ರಿಕ್ಷಾ ಚಾಲಕರು ಠಾಣೆಗೆ ನೀಡಿ ಅದರ ವಾರಿಸುದಾರರಿಗೆ ಒಪ್ಪಿಸುವ ಮೂಲಕ ಮಾನವೀಯತೆ ಮೆರೆದ ಘಟನೆ ನಗರದ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ
ಪಾಂಡೇಶ್ವರ ಅಶ್ವಥಕಟ್ಟೆ ರಿಕ್ಷಾ ಸ್ಟಾಂಡಿನಲ್ಲಿ ನಿಲ್ಲುವ ರಿಕ್ಷಾ ಚಾಲಕ ಗಿರಿಧರ್ ಪಾಂಡೇಶ್ವರ ಮಾನವೀ ಯತೆ ಮೆರೆದವರಾಗಿದ್ದಾರೆ.
ಬಲ್ಮಠ ದಿಂದ ಪಾಂಡೇಶ್ವರ ಕಡೆಗೆ ಹೊರಟಿದ್ದ ರಿಕ್ಷಾವನ್ನು ಬಲ್ಮಠ ಸಮೀಪ ಮುಸ್ಲಿಂ ದಂಪತಿ ಏರಿದ್ದರು. ಅಲ್ಲಿಂದ ನೇರ ವಾಗಿ ರೈಲ್ವೇ ನಿಲ್ದಾಣಕ್ಕೆ ಹೋಗುವಂತೆ ತಿಳಿಸಿದ್ದರು. ರೈಲ್ವೇ ನಿಲ್ದಾಣದಲ್ಲಿ ಇಳಿದ ದಂಪತಿ ಬಾಡಿಗೆ ನೀಡಿ ನೇರವಾಗಿ ರೈಲನ್ನು ಏರಲು ಹೊರಟಿದ್ದಾರೆ. ರಿಕ್ಷಾ ಚಾಲಕ ಗಿರಿಧರ್ ಅವರಿಗೆ ಇನ್ನೊಂದು ಪಾಂಡೇಶ್ವರದ ಕಡೆಗೆ ಬಾಡಿಗೆ ಸಿಕ್ಕಿದ್ದು, ಅವರನ್ನು ಕೊಂಡೊ ಯ್ದಿದ್ದಾರೆ. ದಾರಿಮಧ್ಯೆ ರಿಕ್ಷಾದಲ್ಲಿ ಹಿಂದೆ ಕುಳಿತಿದ್ದವರು ಬ್ಯಾಗ್ ಇರುವ ಬಗ್ಗೆ ಗಮನ ಹರಿಸಿದ್ದರು. ಕೂಡಲೇ ಬ್ಯಾಗಿನ ವಾರೀಸುದಾರರು ರೈಲನ್ನೇ ರಿದ್ದು, ಅದನ್ನು ಹಿಂತಿರುಗಿಸಲು ಸದ್ಯ ಸಾಧ್ಯವಿಲ್ಲ ಅಂದುಕೊಂಡು ತನ್ನ ಪರಿಚಯಸ್ಥ ಸಂಜೀವ ಕೋಟ್ಯಾನ್ ಎಂಬವರನ್ನು ಗಿರಿಧರ್ ಸಂಪರ್ಕಿಸಿ ದ್ದರು. ಅವರು ಕೂಡಲೇ ಬ್ಯಾಗ್ ಸಮೇತ ಪಾಂಡೇಶ್ವರ ಠಾಣೆಗೆ ತೆರಳಿ ಠಾಣಾಧಿಕಾರಿ ದಿನಕರ್ ಶೆಟ್ಟಿ ಅವರಲ್ಲಿ ನಡೆದ ವಿಚಾರವನ್ನು ತಿಳಿಸಿ ಬ್ಯಾಗನ್ನು ನೀಡಿದ್ದಾರೆ. ಪಾಂಡೇಶ್ವರ ಪೊಲೀಸರು ರೈಲ್ವೇ ಪೊಲೀಸರನ್ನು ಸಂಪರ್ಕಿಸಿದಾಗ ಅಲ್ಲಿನ ಠಾಣೆಯಲ್ಲಿ ದಂಪತಿ ದೂರು ದಾಖಲಿಸಿರುವ ವಿಚಾರ ತಿಳಿದುಬಂತು. ಕೂಡಲೇ ಅವರನ್ನು ಸಂಪರ್ಕಿಸಿದ ರೈಲ್ವೇ ಪೊಲೀಸರು ಪಾಂಡೇಶ್ವರ ಠಾಣೆಗೆ ಬರುವಂತೆ ತಿಳಿಸಿದ್ದು, ಅಲ್ಲಿ ರಿಕ್ಷಾ ಚಾಲಕ ಬ್ಯಾಗ್ ಅನ್ನು ಹಿಂತಿರು ಗಿಸಿದ್ದಾರೆ. ಠಾಣೆಯಲ್ಲಿ ಬ್ಯಾಗ್ ತೆರೆದ ದಂಪತಿ ಅದರಲ್ಲಿ ತಾವು ಮುಂಬೈ ಸಮಾರಂಭಕ್ಕೆ ತೆಗೆದುಕೊಂಡು ಹೋಗುತ್ತಿದ್ದ ಸುಮಾರು ರೂ.15 ಲಕ್ಷ ಬೆಲೆಬಾಳುವ ಚಿನ್ನಾಭರಣ ಮತ್ತು ರೂ.6,000 ನಗದು ಹಾಗೇ ಇತ್ತು. ಘಟನೆಯಿಂದ ಗಾಬರಿಗೊಂಡಿದ್ದ ದಂಪತಿ ರಿಕ್ಷಾ ಚಾಲಕನ ಮಾನವೀ ಯತೆಯಿಂದ ಖುಷಿಪಟ್ಟು, ಧನ್ಯ ವಾದವಿತ್ತರು.