Spread the love
ಮಂಗಳೂರು: ಮಂಗಳೂರು ನಗರದ ಲೇಡಿಘೋಷನ್ ಸರ್ಕಾರಿ ಆಸ್ಪತ್ರೆಯ ನೂತನ ಕಟ್ಟಡದ ನಿರ್ಮಾಣ ಕಾಮಗಾರಿಗಳ ಪ್ರಗತಿಯನ್ನು ಪರಿಶೀಲಿಸಿದ ಜಿಲ್ಲಾಧಿಕಾರಿ ಎ.ಬಿ ಇಬ್ರಾಹಿಂ ರವರು ಮೇ ಅಥವಾ ಜೂನ್ ತಿಂಗಳ ಒಳಗೆ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರ ಉಪಯೋಗಕ್ಕೆ ಒದಗಿಸಲು ಅವರು ಸಂಬಂಧಿಸಿದವರಿಗೆ ಸೂಚಿಸಿದರು.
ಲೇಡಿಗೋಷನ್ ನೂತನ ಕಟ್ಟಡದ 3 ಅಂತಸ್ತುಗಳ ಪ್ಲಾಸ್ಟರಿಂಗ್ ಕಾಮಗಾರಿ ಪೂರ್ಣಗೊಂಡಿದೆ, ವಿದ್ಯುತ್ ಕಾಮಗಾರಿಗಳು, ಪ್ಲಂಬಿಂಗ್ ಕಾಮಗಾರಿ, ನೆಲಕ್ಕೆ ಗ್ರಾನೆಟ್ ಹಾಕುವ ಕಾಮಗಾಗಳು ಪ್ರಗತಿಯಲ್ಲಿವೆ ಎಂದು ಗುತ್ತಿಗೆದಾರ ಶರೀಫ್ ಅವರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪಿ.ಐ ಶ್ರೀ ವಿದ್ಯಾ ಮುಂತಾದವರು ಹಾಜರಿದ್ದರು.
Spread the love