ಮಂಗಳೂರು: ಮೇ 03 ರಂದು ನಗರದ ಕಲಾಂಗಣದಲ್ಲಿ ನಡೆದ 161 ನೇ ತಿಂಗಳ ವೇದಿಕೆ ಕಾರ್ಯಕ್ರಮದಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಪ್ರಕಟಿಸಿದ ಮುಂಡ್ರೆಲ್ ಸಿರಿಲ್ (ಸಿರಿಲ್ ಫೆರ್ನಾಂಡಿಸ್) ಇವರು ಬರೆದ `ಲೊಸುಣ್ ಲೂಸಿ’ ಕಿರು ನಾಟಕಗಳ ಪುಸ್ತಕ ಲೋಕಾರ್ಪಣೆ ಕಾರ್ಯ ನಡೆಯಿತು.
ರಾಕ್ಣೊ ಪತ್ರಿಕೆಯ ಸಂಪಾದಕರಾದ ವಂ. ಫ್ರಾನ್ಸಿಸ್ ರೊಡ್ರಿಗಸ್ ಇವರು ಪುಸ್ತಕ ಬಿಡುಗಡೆಗೊಳಿಸಿದರು. ಕೊಂಕಣಿ ಅಕಾಡೆಮಿ ಅಧ್ಯಕ್ಷರಾದ ರೊಯ್ ಕ್ಯಾಸ್ತೆಲಿನೊ, ರಿಜಿಸ್ಟ್ರಾರ್ ಡಾ ಬಿ ದೇವದಾಸ ಪೈ, ಮಾಂಡ್ ಸೊಭಾಣ್ ಗುರಿಕಾರ ಎರಿಕ್ ಒಝಾರಿಯೊ ಉಪಸ್ಥಿತರಿದ್ದರು.
ಇದು ಸಿರಿಲ್ ಅವರ ಪ್ರಥಮ ಪುಸ್ತಕವಾಗಿದ್ದು ಅಕಾಡೆಮಿಯ 2014-17 ನೇ ಸಾಲಿನ 27 ನೇ ಪುಸ್ತಕವಾಗಿದೆ. ಈ ಪುಸ್ತಕದಲ್ಲಿ 9 ಕಿರು ನಾಟಕಗಳಿವೆ.