ಮಂಗಳೂರು: ವಕ್ಫ್ ಕಚೇರಿಗೆ ಮಕ್ಕಳ ರಕ್ಷಣಾ ಆಯೋಗ ಭೇಟಿ
ಮಂಗಳೂರು: ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ. ನಾಗಣ್ಣ ಗೌಡ ಅವರು ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಮಿತಿ ಕಚೇರಿಗೆ ಭೇಟಿ ನೀಡಿ ಚರ್ಚಿಸಿದರು.
ಜಿಲ್ಲೆಯಲ್ಲಿ ಮುಸ್ಲಿಂ ಮಕ್ಕಳು ಶಾಲಾ ವಿಧ್ಯಾಭ್ಯಾಸ ಅರ್ಧದಲ್ಲೇ ಬಿಡುವುದನ್ನು ತಪ್ಪಿಸುವುದು, ಮಕ್ಕಳ ಮದರಸ ಶಿಕ್ಷಣ ಮತ್ತು ಶಾಲಾ ಶಿಕ್ಷಣದ ಅವಧಿ ಹೊಂದಾಣಿಕೆ ಮತ್ತಿತರ ವಿಷಯಗಳನ್ನು ಅಧ್ಯಕ್ಷರು ವಕ್ಫ್ ಸಮಿತಿಯೊಂದಿಗೆ ಚರ್ಚಿಸಿದರು.
ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಅಬ್ದುಲ್ ನಾಸೀರ್ ಲಕ್ಕಿಸ್ಟಾರ್ ಮಾಹಿತಿ ನೀಡಿ, ಜಿಲ್ಲೆಯ ಮುಸ್ಲಿಮರಲ್ಲಿ ಮಕ್ಕಳು ಶಾಲಾ ಶಿಕ್ಷಣವನ್ನು ಅರ್ಧದಲ್ಲೇ ತ್ಯಜಿಸುವ ಪ್ರಕರಣಗಳು ಬಹಳ ವಿರಳ. ಅಲ್ಲದೇ, ಶಾಲಾ ಶಿಕ್ಷಣ ಅವಧಿಗೆ ಯಾವುದೇ ಸಮಸ್ಯೆಯಾಗದಂತೆ ಮದರಸ ಶಿಕ್ಷಣ ನೀಡಲಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಉಸ್ಮಾನ್, ಜಿಲ್ಲಾ ವಕ್ಫ್ ಅಧಿಕಾರಿ ಅಬೂಬಕ್ಕರ್, ವಕ್ಫ್ ಉಪಾಧ್ಯಕ್ಷರಾದ ಫಕೀರಬ್ಬ, ಜಮಾಲುದ್ದೀನ್, ಸದಸ್ಯರಾದ ಸೈದುದ್ದೀನ್, ಸಿರಾಜ್, ಹನೀಫ್, ಅದ್ದು, ಶಾಕಿರ್, ಖಾಲಿದ್, ಹಮೀದ್, ಸಿದ್ದೀಕ್ ಇದ್ದರು ಎಂದು ಪ್ರಕಟಣೆ ತಿಳಿಸಿದೆ.