Home Mangalorean News Kannada News ಮಂಗಳೂರು : ವಿದ್ಯಾರ್ಥಿ ಪರಿಷತ್ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ’

ಮಂಗಳೂರು : ವಿದ್ಯಾರ್ಥಿ ಪರಿಷತ್ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ’

Spread the love

ಮಂಗಳೂರು : ಶಿಕ್ಷಕನ ಯಶಸ್ಸು ಆತನು ಕಾಣುವ ಕನಸುಗಳನ್ನು ಕಾರ್ಯರೂಪಕ್ಕಿಳಿಸುವ ನಿರಂತರ ಪ್ರಯತ್ನ ಹಾಗೂ ಕಳಕಳಿಯನ್ನು ಅವಲಂಭಿಸಿದೆ. ಸಮತೋಲಿತ ಯಶಸ್ವೀ ಜೀವನವನ್ನು ರೂಪಿಸಲು ವಿದ್ಯಾರ್ಥಿಗಳಿಗೆ ಮಾರ್ಗದರ್ಶನವನ್ನು ನೀಡಬೇಕು. ಎಂದು ಕಾಲೇಜಿನ ಪ್ರಾಕ್ತನ ವಿದ್ಯಾರ್ಥಿ ಹಾಗೂ ಮಂಗಳೂರು ವಿಧಾನಸಭಾ ಸದಸ್ಯರಾದ  ಜೆ.ಆರ್. ಲೋಬೋ ಅವರು ತಿಳಿಸಿದರು.

IMG_0767_resize

ಅವರು ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ಪ್ರಸ್ತುತ ಸಾಲಿನ ವಿದ್ಯಾರ್ಥಿ ಪರಿಷತ್ ನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಕಳೆದ ಸಾಲಿನಲ್ಲಿ 70 ಮಂದಿ ವಿಶಿಷ್ಟ ದರ್ಜೆ ಹಾಗೂ 24 ಮಂದಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಶೇಕಡಾ 100 ಫಲಿತಾಂಶದ ಸಾಧನೆಯನ್ನು ನಡೆಸಿರುವ ಸಂಸ್ಥೆಯನ್ನು ಅಭಿನಂದಿಸಿದ ಅವರು ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿ ಶಿಕ್ಷಕರಾದ ರಶ್ಮೀ (845), ರೇಷ್ಮಾ(820), ಶೃತಿ ಎ(811) ಶೃತಿ ಎಚ್ (810) ಅರಿಫಾ (809) ಇವರನ್ನು ಪುರಸ್ಕರಿಸಿದರು. ಈ ವರ್ಷದ ವಿದ್ಯಾರ್ಥಿನಿ ಬಿ.ಎ. ರ್ಯಾಂಕ್ ಗಳಿಸಿರುವ ಕುಮಾರಿ ಪ್ರಜ್ಞಾ ಅವರನ್ನು ಇದೇ ಸಂದರ್ಭದಲ್ಲಿ ಸಂಮಾನಿಸಲಾಯಿತು.
ಮಂಗಳೂರು ವಿಶ್ವ ವಿದ್ಯಾನಿಲಯದ ಶಿಕ್ಷಣ ನಿಕಾಯದ ಡೀನ್ ಡಾ. ಕಿಶೋರ ಕುಮಾರ್ ಅತಿಥಿಗಳಾಗಿ ಆಗಮಿಸಿದ್ದರು. ಈ ವರ್ಷ ವಿದ್ಯಾರ್ಥಿ ಪರಿಷತ್ ನ ಸದಸ್ಯರಾಗಿ ಆಯ್ಕೆಯಾಗಿರುವ ಪ್ರತಿನಿಧಿಗಳಿಗೆ ಪ್ರವಾಚಕರಾದ ಮೋಸೆಸ್ ಜಯಶೇಖರ್ ಪ್ರತಿಜ್ಞಾ ವಿಧಿಯನ್ನು ನೆರವೇರಿಸಿದರು.


Spread the love

Exit mobile version