Home Mangalorean News Kannada News ಮಂಗಳೂರು ವಿಧ್ಯಾವಂತ ಹಾಗೂ ಸುಶಿಕ್ಷಿತರ ಊರು. ಪೊಲೀಸ್ ಆಯುಕ್ತ ಟಿ. ಆರ್ ಸುರೇಶ್

ಮಂಗಳೂರು ವಿಧ್ಯಾವಂತ ಹಾಗೂ ಸುಶಿಕ್ಷಿತರ ಊರು. ಪೊಲೀಸ್ ಆಯುಕ್ತ ಟಿ. ಆರ್ ಸುರೇಶ್

Spread the love

ಮಂಗಳೂರು ವಿಧ್ಯಾವಂತ ಹಾಗೂ ಸುಶಿಕ್ಷಿತರ ಊರು. ಪೊಲೀಸ್ ಆಯುಕ್ತ ಟಿ. ಆರ್ ಸುರೇಶ್

ಮಂಗಳೂರು: ಮಂಗಳೂರು ವಿಧ್ಯಾವಂತ ಹಾಗೂ ಸುಶಿಕ್ಷಿತರ ಊರು. ಇಲ್ಲಿನ ಜನರು ಕಾನೂನನ್ನು ಗೌರವಿಸುವವರು. ಶಾಂತಿ ಪ್ರಿಯರು. ಕೆಲವು ಬೆರಳೆಣಿಕೆ ಜನರು ಮಾತ್ರ ರಾಜಕೀಯ ಶಕ್ತಿಗಳೊಂದಿಗೆ ಸೇರಿ ಕೊಮು ಗಲಭೆಗಳನ್ನು ಪ್ರಚೋದಿಸಿ ಸಮಾಜದಲ್ಲಿ ಭಯದ ವಾತಾವರಣವನ್ನು ಸೃಷ್ಠಿ ಮಾಡುತ್ತಿದಾರೆ. ಪೊಲೀಸ್ ಇಲಾಖೆ ಇಂದು ಜನ ಸ್ನೇಹಿಯಾಗಿದ್ದು ನಾಗರಿಕರು “ಪೊಲೀಸ್” ಎಂದರೆ ಹೆದರುವ ದಿನಗಳು ಈಗ ಇತಿಹಾಸವಾಗಿದೆ. ನಾಗರಿಕರು ಪೊಲೀಸ್ ಇಲಾಖೆಗೆ ಯಾವುದೇ ಘಟನೆಗಳ ಬಗ್ಗೆ ಅಥವಾ ಅನುಮಾನಾಸ್ಪದ ವಿದ್ಯಮಾನಗಳ ಬಗ್ಗೆ ಮುಕ್ತ ಮನಸ್ಸಿನಿಂದ ತಿಳಿಸಬಹುದು ಎಂದು ಮಂಗಳೂರು ಕಮಿಷನರೇಟ್‍ನ ಪೊಲೀಸ್ ಆಯುಕ್ತರಾದ  ಟಿ. ಆರ್ ಸುರೇಶ್ ಅವರು ಹೇಳಿದರು.

ಅವರು ನಗರದ ಅಲೋಶಿಯಸ್ ಲೋಯೆಲೊ ಸಭಾಂಗಣದಲ್ಲಿ ನಡೆದ ಮಂಗಳೂರು ಉತ್ತರ ಠಾಣೆಯ 63 ನ್ಯೂ ಬೀಟ್ ತಂಡಗಳ ನಾಗರಿಕ ಸದಸ್ಯರ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಹೇಳಿದರು.

ಬಂದರು ಠಾಣೆಯ ನಿರೀಕ್ಷಕರಾದ ಶಾಂತಾರಾಮ ಅವರು ಕಾರ್ಯಕ್ರಮವನ್ನು ನಿರೂಪಿಸುತ್ತ ಮಾತನಾಡಿ ಅಂತರ್ಜಾಲವನ್ನು ಬಳಸಿ, ಬ್ಯಾಂಕ್‍ಗಳ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್‍ಗಳ ಬಗ್ಗೆ ವಿವರಗಳನ್ನು ಪಡೆದು ವಂಚಿಸಲಾಗುತ್ತಿದ್ದು ಜನರು ಕಾರ್ಡ್‍ಗಳ ಸಂಖ್ಯೆ ಹಾಗೂ ಪಿನ್ ಸಂಖ್ಯೆಗಳನ್ನು ಗುಪ್ತವಾಗಿರಿಸ ಬೇಕಾಗಿ ಮನವಿ ಮಾಡಿದರು.

ಕಾಲೇಜಿನ ಉಪ ಪ್ರಾಂಶುಪಾಲರಾದ ಫಾ: ಜಾನ್ ಡಿಸಿಲ್ವಾ ಮಾತನಾಡಿ ಸಮಾಜದಲ್ಲಿ ಕೋಮು ಗಲಭೆಗಳನ್ನು ಸೃಷ್ಠಿಸಿ ಅಶಾಂತಿಗೆ ಕಾರಣವಾದವರನ್ನು ಪೊಲೀಸ್ ಇಲಾಖೆ ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೇ ಬಂಧಿಸಿ ಎಲ್ಲಾ ವರ್ಗದವರು ಶಾಂತಿಯುತವಾಗಿ ನೆಲೆಸುವತ್ತ ಶೃಮಿಸಬೇಕು. ಗಲಭೆಗಳನ್ನು ಸೃಷ್ಠಿಸಲು ಹಾಗೂ ರಾಜಕೀಯ ದುರುದ್ದೇಷಕ್ಕಾಗಿ ಅಮಾಯಕರನ್ನು ಬಲಿಪಶುಗಳನ್ನಾಗಿ ಬಳಸಲಾಗುತ್ತದೆ. ಇಂತಹ ಜನರ ಮನಸ್ಸನ್ನು ಬದಲಾಯಿಸುವತ್ತ ಪ್ರಯತ್ನ ನಡೆಯಬೇಕಿದೆ ಎಂದರು.

ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಉಪ ಆಯುಕ್ತರಾದ ಶಾಂತರಾಜು ಅವರು ಮಾತನಾಡಿ, ಕೊಲೆ, ಗಲಭೆ ಅಥವಾ ಪೊಲೀಸ್ ಇಲ್ಲಾಖೆಯ ಯಾವುದೇ ತನಿಖೆಯ ಕಾರ್ಯ ಸಾರ್ವಜನಿಕರ ಸಹಕಾರವಿದ್ದರೆ ಮಾತ್ರ ಸಾಧ್ಯ. ಅದಕ್ಕಗಿ ಪೊಲೀಸ್ ಜನಸ್ನೆಹಿಯಾಗಿ ಜನರೋಡನೆ ಆತ್ಮೀಯವಾಗಿ ಇರಲು ಬಯಸುತ್ತದೆ. ಹಾಗೆ ಪೋಲಿಸ್ ಇಲಾಖೆಗೆ ಸಂಭಂದಿಸಿದ ಯಾವುದೇ ವಿಚಾರವನ್ನು ಮುಕ್ತ ಮನಸ್ಸಿನಿಂದ ಯಾವುದೇ ಪೊಲೀಸ್ ಠಾಣೆಗೆ ಬಂದು, ಅಥವಾ ಅಧಿಕಾರಿಗಳೊಂದಿಗೆ ಹಂಚಿಕೊಳ್ಳಬಹುದು ಎಂದರು.

ಬಂದರು ಠಾಣೆಯ ಉಪ ನಿರೀಕ್ಷಕರಾದ ಎಮ್.ಸಿ. ಮದನ್ ಸ್ವಾಗತಿಸಿದರು. ಕೇಂದ್ರ ಉಪ ವಿಭಾಗದ ಉಪ ಆಯುಕ್ತರಾದ ಉದಯ್ ನಾಯಕ್ ಧನ್ಯವಾದ ಸಮರ್ಪಿಸಿ ವಂದಿಸಿದರು. ಉಪ ಆಯುಕ್ತರಾದ ಹಮುಮಂತರಾಯ, ಬಂದರು ಠಾಣೆಯ ಸಿಬ್ಬಂದಿವರ್ಗ, ಬೀಟ್ ಅಧಿಕಾರಿಗಳು, ಹಾಗೂ ಅಲೋಶಿಯಸ್ ಕಾಲೇಜಿನ ಪ್ರಾಂಶುಪಾಲರಾದ ಫಾ: ಮೆಲ್ವಿನ್ ಮೆಂಡೋನ್ಸಾ ಮುಂತಾದವರು ಉಪಸ್ಥಿತರಿದ್ದರು.


Spread the love

Exit mobile version