ಮಂಗಳೂರು ವಿಮಾನ ನಿಲ್ದಾಣ: ಪ್ರಯಾಣಿಕರ ನಿರ್ವಹಣೆಯಲ್ಲಿ ದಾಖಲೆ

Spread the love

ಮಂಗಳೂರು ವಿಮಾನ ನಿಲ್ದಾಣ: ಪ್ರಯಾಣಿಕರ ನಿರ್ವಹಣೆಯಲ್ಲಿ ದಾಖಲೆ

ಮಂಗಳೂರು: ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣವು 2024-25ನೇ ಸಾಲಿನಲ್ಲಿ ಅತಿ ಹೆಚ್ಚು ಪ್ರಯಾಣಿಕರನ್ನು ಮತ್ತು ವಾಯು ಸಂಚಾರವನ್ನು (ಎಟಿಎಂ) ನಿರ್ವಹಿಸುವ ಮೂಲಕ ಹೊಸ ದಾಖಲೆ ಬರೆದಿದೆ.

ಮಂಗಳೂರು ಅಂತ‌ರ್ ರಾಷ್ಟ್ರೀಯ ವಿಮಾನ ನಿಲ್ದಾಣವು 2024ರ ಅಕ್ಟೋಬರ್‌ನಲ್ಲಿ ದಿನಕ್ಕೆ ಸರಾಸರಿ 6,500 ಪ್ರಯಾಣಿಕರು ಸೇರಿದಂತೆ 1,38,902 ದೇಶೀಯ ಮತ್ತು 63,990 ಅಂತರ್ ರಾಷ್ಟ್ರೀಯ ಪ್ರಯಾಣಿಕರು ಸೇರಿದಂತೆ ಒಟ್ಟು 202,892 ಪ್ರಯಾಣಿಕರನ್ನು ನಿರ್ವಹಿಸಿದೆ.

ಸೆಪ್ಟೆಂಬರ್ 2024ರಲ್ಲಿ 189,247 ಪ್ರಯಾಣಿಕರನ್ನು ಸುಧಾರಣೆಯಾಗಿದೆ. 2024-25ರ ಹಣಕಾಸು ವರ್ಷದಲ್ಲಿ ಈ ವಿಮಾನ ನಿಲ್ದಾಣವು ಆಗಸ್ಟ್ 2024 ರಲ್ಲಿ 199,818 ಪ್ರಯಾಣಿಕರನ್ನು ತಲುಪುವ ಮೂಲಕ ಗರಿಷ್ಠ ಸಂಖ್ಯೆಯನ್ನು ಸಾಧಿಸಿದೆ.

ಹೆಚ್ಚುವರಿಯಾಗಿ ವಿಮಾನ ನಿಲ್ದಾಣವು ಒಟ್ಟು 1,538 ವಾಯು ಸಂಚಾರ ಚಲನೆಗಳನ್ನು ದಾಖಲಿಸಿದೆ, ಇದರಲ್ಲಿ 1,091 ದೇಶೀಯ, 403 ಅಂತರ್ ರಾಷ್ಟ್ರೀಯ ಮತ್ತು 44 ಸಾಮಾನ್ಯ ವಾಯುಯಾನ ವಿಮಾನಗಳು ಸೇರಿವೆ. ಸೆಪ್ಟೆಂಬರ್ 2024 ರಲ್ಲಿ ವಿಮಾನ ನಿಲ್ದಾಣವು 1,433 ವಾಯು ಸಂಚಾರ ಚಲನೆಗಳನ್ನು ನಿರ್ವಹಿಸಿದೆ ಎಂದು ಮಂಗಳೂರು ವಿಮಾನ ನಿಲ್ದಾಣದ ವಕ್ತಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments