ಮಂಗಳೂರು: ದಕ್ಷಿಣ ಭಾರತದ ಅತ್ಯಂತ ದೊಡ್ಡ ಆರೋಗ್ಯ ಶುಶ್ರೂಷೆ ಸರಣಿಯಾದ ಮಣಿಪಾಲ್ ಎಂಟರ್‍ಪ್ರೈಸಸ್‍ನ ಅಂಗವಾದ ಕೆಎಂಸಿ ಹಾಸ್ಪಿಟಲ್ಸ್ ಈಗ ಮತ್ತೊಂದು ವೈದ್ಯಕೀಯ ಮೈಲುಗಲ್ಲು ಸ್ಥಾಪಿಸಿದ್ದು, ದಿಢೀರ್ ಸಾವು ತಂದೊಡ್ಡುವಂಥ ಆ್ಯಂಡರ್‍ಸನ್ ಟಾವಿಲ್ ಸಿಂಡ್ರೋಮ್ ಎಂಬ ಅತ್ಯಂತ ವಿರಳವಾದ ಸ್ಥಿತಿಯಿಂದ ಬಳಲಿದ ್ದ ಕುಟುಂಬಕ್ಕೆ ಚಿಕಿತ್ಸೆ ನೀಡಿದೆ. ಕೆಎಂಸಿ ಆಸ್ಪತ್ರೆಯ ಅತ್ಯಂತ ಉನ್ನತ ಕಾರ್ಯಕ್ರಮತೆಯ ವೈದ್ಯರ ತಂಡ ಒಟ್ಟಾಗಿ ಈ ಅಪರೂಪದ ವಂಶವಾಹಿ ಸಂಬಂಧಿ ತೊಂದರೆಗೆ ಚಿಕಿತ್ಸೆ ನೀಡಿದ್ದು ಬಹುಶಃ ಇದು ಭಾರತದಲ್ಲಿ ವಂಶವಾಹಿ ಸಂಬಂಧದಲ್ಲಿ ನಿರೂಪಿತವಾದಂತಹ ಮೊಟ್ಟಮೊದಲ ಪ್ರಕರಣವಾಗಿರಬಹುದು. ಅನಿತಾ (27 ವರ್ಷ)ರನ್ನು ಕೆಎಂಸಿ ಆಸ್ಪತ್ರೆಯ ಕಾರ್ಡಿಯಾಕ್ ಎಲೆಕ್ಟ್ರೋ-ಫಿಜಿಯಾಲಾಜಿಸ್ಟ್ ಡಾ|| ಮನೀಶ್ ರೈ ಅವರು ರಕ್ತದೊತ್ತಡದ ಕುಸಿತದಿಂದ ಉಂಟಾಗುವ ತಾತ್ಕಾಲಿಕ ಪ್ರಜ್ನಾ ಶೂನ್ಯತೆ(ಸಿಂಕೋಪ್)ಗಾಗಿ ಪರೀಕ್ಷಿಸಿದರು. ಆಕೆಯ ಕುಟುಂಬದಲ್ಲಿ ದಿಢೀರ್ ಸಾವಿನ ಇತಿಹಾಸವಿತ್ತು. ಆಕೆಯ ತಾಯಿ ಮತ್ತು ತಮ್ಮ ಎಳೆಯ ವಯಸ್ಸಿನಲ್ಲಿಯೇ ದಿಢೀರಾಗಿ ಸಾವನ್ನಪ್ಪಿದ್ದರು. ಹೃದಯ ಮಿಡಿತದ ತಪ್ಪಿದ ತಾಳದಿಂದ ಉಂಟಾಗುವ ಜನ್ಮಜಾತ ತೊಂದರೆ ಕುಟುಂಬದಲ್ಲಿ ಇಂಥ ದಿಢೀರ್ ಸಾವುಗಳು ಉಂಟಾಗುತ್ತವೆಂದು ಈ ಇತಿಹಾಸ ಸೂಚಿಸಿತ್ತು. ಆ್ಯಂಡರ್‍ಸನ್ ಟಾವಿಲ್ ಸಿಂಡ್ರೋಮ್ ಎಂಬ ವಿರಳವಾದ ವಂಶವಾಹಿ ಸಂಬಂಧಿ ತೊಂದರೆಯ ಲಕ್ಷಣಗಳನ್ನು ಆಕೆಯ ಇಸಿಜಿ ಫಲಿತಾಂಶಗಳು ಹೋಲುತ್ತಿದ್ದವು. ಮಣಿಪಾಲ್‍ನ ಮೆಡಿಕಲ್ ಜೆನಿಟಿಕ್ಸ್ ವಿಭಾಗದ ಡಾ|| ಗಿರೀಶ್ ಕಟ್ಟಾ ಅವರು ನಡೆಸಿದ ವಂಶವಾಹಿ ವಿಶ್ಲೇಷಣೆಯಲ್ಲಿ ಈ ತೊಂದರೆ ದೃಢಪಟ್ಟಿತ್ತು. ಈ ತೊಂದರೆ ಉಂಟು ಮಾಡುವ ವರ್ಣತಂತುವಿನಲ್ಲಿ ರೂಪಾಂತರ ಕಂಡುಬಂದಿರುವುದು ತಿಳಿದುಬಂದಿತ್ತು. ಈ ವಂಶವಾಹಿ ಸಂಬಂಧಿ ಸ್ಥಿತಿ ಅತ್ಯಂತ ವಿರಳವಾಗಿದ್ದು ವಿಶ್ವವ್ಯಾಪಿಯಾಗಿ ನೂರಕ್ಕೂ ಕಡಿಮೆ ಕುಟುಂಬಗಳಲ್ಲಿ ಕಂಡುಬರುತ್ತದೆ. ಭಾರತದಲ್ಲಿ ವಂಶವಾಹಿಗಳಲ್ಲಿ ನಿರೂಪಿತವಾದ ಮೊಟ್ಟಮೊದಲ ಆಯಂಡರ್‍ಸನ್ ಟಾವಿಲ್ ಪ್ರಕರಣ ಇದಾಗಿರಬಹುದು. ರೋಗಿಗೆ ಟೊರಾಕೊಸ್ಕೋಪಿಕ್ ಲೆಫ್ಟ್ ಕಾರ್ಡಿಯಾಕ್ ಸಿಂಪಥೆಟಿಕ್ ಡಿನರ್ವೇಷನ್ ಎಂಬ ಅಪರೂಪದ ಶಸ್ತ್ರಕ್ರಿಯಾ ಕ್ರಮವನ್ನು ನಡೆಸಲಾಗಿದ್ದು ಆಕೆಯ ಹೃದಯದ ತಾಳವನ್ನು ನಿಯಂತ್ರಣಕ್ಕೆ ತರಲು ಯತ್ನಿಸಲಾಗಿತ್ತು. ಈ ಕ್ರಮದಲ್ಲಿ ಹೃದಯಕ್ಕೆ ರಕ್ತ ಪೂರೈಸುವ ನಾಳಗಳನ್ನು ಕತ್ತರಿಸಲಾಗುತ್ತದೆ. ಇದನ್ನು ಮಂಗಳೂರಿನಲ್ಲಿ ಮೊಟ್ಟಮೊದಲ ಬಾರಿಗೆ ಕೆಎಂಸಿ, ಮಂಗಳೂರಿನ ಶಸ್ತ್ರಕ್ರಿಯಾ ವಿಭಾಗದ ಪ್ರೊಫೆಸರ್ ಡಾ|| ಆಲ್ಫ್ರೆಡ್ ಅಗಸ್ಟೀನ್ ಅವರು ನಡೆಸಿದ್ದು ಅವರಿಗೆ ಅನುಭವಿ ಅರಿವಳಿಕೆ ತಜ್ಞರಾದ ಡಾ|| ಮಧುಸೂದನ್ ಮತ್ತು ಡಾ|| ರಾಮಮೂರ್ತಿ ಬೆಂಬಲ ನೀಡಿದರು. ಈ ಕ್ರಮದಿಂದ ಆಕೆಯ ಹೃದಯ ಮಿಡಿತದ ತಾಳ ನಿಯಂತ್ರಣಕ್ಕೆ ಬಂದರೂ ಆಕೆಗೆ ಜೀವ ಬೆದರಿಕೆಯ ಅರ್ರಿದಮಿಯಾಸ್ ತೊಂದರೆ ಕಾಣಿಸಿಕೊಳ್ಳುವ ಅಲ್ಪ ಪ್ರಮಾಣದ ಸಾಧ್ಯತೆ ಇತು ್ತ. ಆಕೆಗೆ ಡಿಫೈಬ್ರಿಲೇಟರ್ ಎಂಬ ಪುಟ್ಟ ದುಂಡಗಿನ ಉಪಕರಣವನ್ನು ಎದೆಯ ಭಾಗದ ತ್ವಚೆಯ ಕೆಳಗೆ ಅಳವಡಿಸಲಾಗುವುದು. ಅರ್ರಿದಮಿಯಾ ಪ್ರಕರಣದ ಸಂದರ್ಭದಲ್ಲಿ ಈ ಡಿಫೈಬ್ರಿಲೇಟರ್ ಶಾಕ್ ನೀಡಿ ಅವರ ಜೀವವನ್ನು ಉಳಿಸುತ್ತದೆ. ದುರದೃಷ್ಟವಾಶಾತ್ ಆಕೆಯ ಆರು ಒಡಹುಟ್ಟಿದವರ ಪೈಕಿ ನಾಲ್ವರಿಗೆ ಇದೇ ಸ್ಥಿತಿ ಕಾಡುತ್ತಿದೆ. ಪ್ರಸ್ತುತ ಅವರೆಲ್ಲರೂ ವೈದ್ಯಕೀಯ ತಪಾಸಣೆಯಲ್ಲಿದ್ದರೂ ಮುಂಬರುವ ದಿನಗಳಲ್ಲಿ ಇದೇ ರೀತಿಯ ಕ್ರಮಗಳನ್ನು ಅವರಿಗೆ ಕೈಗೊಳ್ಳಬೇಕಾಗಬಹುದು. “ಚಿಕಿತ್ಸೆ ಹೆಚ್ಚು ವೆಚ್ಚದ್ದಾಗಿದ್ದರೂ ಅದು ಏಕೈಕ ಭರವಸೆ ಆಗಿದೆ. ಸೂಕ್ತ ಚಿಕಿತ್ಸೆಯೊಂದಿಗೆ ಬಹುತೇಕ ಸಾಮಾನ್ಯ ಜೀವನಾವಧಿಯ ಅವಕಾಶವನ್ನು ನಾವು ನೀಡಬಹುದಾಗಿದೆ. ಈಗ ತೊಂದರೆಯ ಮಾದರಿಯ ಬಗ್ಗೆ ತಿ ದಿನ ದುರಂತಗಳನ್ನು ತಪ್ಪಿಸಬಹುದಾಗಿದೆ ಎಳಿದಿದ್ದು ಕುಟುಂಬ ಸದಸ್ಯರಿಗೆ ಶೀಘ್ರ ಪತ್ತೆ ಮಾಡಿ ಕುಟುಂಬದಲ್ಲಿ ಮುಂ ಂದು ಕೆಎಂಸಿ ಆಸ್ಪತ್ರೆಯ ಕಾರ್ಡಿಯಾ ಎಲೆಕ್ಟೊ ಫಿಜಿಯಾಲಾಜಿಸ್ಟ್ ಡಾ|| ಮನೀಶ್ ರೈ’’ ಅವರು ಹೇಳಿದರು.