ಮಂಗಳಗಂಗೋತ್ರಿ: ಮಂಗಳೂರು ವಿಶ್ವವಿದ್ಯಾನಿಲಯ ಮಂಗಳಗಂಗೋತ್ರಿ ಕ್ಯಾಂಪಸ್‍ನಲ್ಲಿ ನಿತೀಶ್ ಪಿ ಬೈಂದೂರು ಇವರ ಏಕವ್ಯಕ್ತಿ ಛಾಯಾಚಿತ್ರ ಪ್ರದರ್ಶನವನ್ನು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಕೆ.ಭೈರಪ್ಪ ಅವರು ಉದ್ಘಾಟಿಸಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ತುಳು ಚಿತ್ರನಟ ದೇವಿದಾಸ್ ಕಾಪಿಕಾಡ್, ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಬಾರುಕೂರು ಉದಯ, ನಿತೀಶ್ ಪಿ ಬೈಂದೂರು ಉಪಸ್ಥಿತರಿದ್ದರು. ಛಾಯಾಚಿತ್ರ ಪ್ರದರ್ಶನವು ದಿನಾಂಕ 22ರವರೆಗೂ ನಡೆಯಲಿರುವುದು
ಪ್ರಶಸ್ತಿ:
*ಸೈಂಟ್ ಅಲೋಷಿಯಸ್ ಕಾಲೇಜು ಮಂಗಳೂರಿನಲ್ಲಿ ಏರ್ಪಡಿಸಿದ್ದ ರಾಷ್ಟ್ರಮಟ್ಟದ ‘ಸ್ಪಾಟ್ ಫೋಟೋಗ್ರಫಿ’ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ.
*ಮಂಗಳೂರು ವಿವಿ ಮಟ್ಟದಲ್ಲಿ ನಡೆದ ‘ಸ್ಪಾಟ್ ಫೋಟೋಗ್ರಾಫಿ’ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ.
*ಮಂಗಳೂರು ವಿವಿಯ ಎಂ.ಬಿ.ಎ ಟೂರಿಸಂ ಆಯೋಜಿಸಿರುವ ‘ಸ್ಪಾಟ್ ಫೋಟೋಗ್ರಾಫಿ’ ಸ್ಪರ್ಧೆಯಲ್ಲಿ ಎರಡು ವರ್ಷವೂ (2014 ಮತ್ತು 2015) ಪ್ರಥಮ ಸ್ಥಾನ.
* ಮಂಗಳೂರು ವಿವಿಯ ಕಂಪ್ಯೂಟರ್ ಸೈನ್ಸ್ ವಿಭಾಗ ಆಂಯೊಜಿಸಿದ್ದ ಸ್ಪಾಟ್ ಫೊಟೋಗ್ರಫಿ ಸ್ಫರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿರುತ್ತೇನೆ.
*ಬೆಂಗಳೂರಿನಲ್ಲಿ “ನಮ್ಮೂರ ಹಬ್ಬ-2015” ಪ್ರಯುಕ್ತ ನಡೆದ ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ.
*ಸೈಂಟ್ ಅಲೋಷೀಯಸ್ ಕಾಲೇಜು ಮಂಗಳೂರಿನಲ್ಲಿ ಏರ್ಪಡಿಸಿದ್ದ ರಾಷ್ಟ್ರಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ.
*ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡಬಿದಿರೆಯಲ್ಲಿ ನಡೆದ ರಾಜ್ಯಮಟ್ಟದ ‘ಸ್ಪಾಟ್ ಫೋಟೋಗ್ರಫಿ’ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ.
*ಮಂಗಳೂರು ವಿವಿ ಮಟ್ಟದಲ್ಲಿ ನಡೆದ ‘ಸ್ಪಾಟ್ ಫೋಟೋಗ್ರಫಿ’ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ.
*31ನೇ ದಕ್ಷಿಣ ವಲಯ ಅಂತರ್ ವಿವಿ ಯುವಜನೋತ್ಸವ 2016ರ ‘ಸ್ಪಾಟ್ ಫೋಟೋಗ್ರಫಿ’ ಸ್ಪರ್ಧೆಯಲ್ಲಿ ತೃತೀಯ ಸ್ಥಾನ.
*2014ರ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ “ಅತ್ಯುತ್ತಮ ಪತ್ರಿಕೋದ್ಯಮ ವಿದ್ಯಾರ್ಥಿ” ಎಂಬ ಪ್ರಶಸ್ತಿ ಪಡೆದಿರುತ್ತೇನೆ.
*2016 ರಲ್ಲಿ “ಚಾರು ಆರ್ಟ್ ಗ್ಯಾಲರಿ” ಮೈಸೂರು ಇವರು ಏರ್ಪಡಿಸಿದ್ದ ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆಯಲಿ ಪ್ರಥಮ ಸ್ಥಾನ.
*2016 ರಲ್ಲಿ ಪಿಕ್ಸ್‍ಲ್ ಫೋಟೋಗ್ರಫಿ ಕ್ಲಬ್, ಬೆಂಗಳೂರು ಏರ್ಪಡಿಸಿದ್ದ ರಾಷ್ಟ್ರಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ.
ಬಿರುದು:
ಛಾಯಾಚಿತ್ರ ಕ್ಷೇತ್ರದ ಸಾಧನೆಗಾಗಿ ಆರನೇ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ” ಕರ್ನಾಟಕ ಪ್ರತಿಭಾರತ್ನ” ಬಿರುದು ನೀಡಿ ಗೌರವಿಸಿರುತ್ತಾರೆ.