Home Mangalorean News Kannada News ಮಂಗಳೂರು ವಿವಿ ಫಲಿತಾಂಶ ಗೊಂದಲ : ಎಬಿವಿಪಿ ಪ್ರತಿಭಟನೆ

ಮಂಗಳೂರು ವಿವಿ ಫಲಿತಾಂಶ ಗೊಂದಲ : ಎಬಿವಿಪಿ ಪ್ರತಿಭಟನೆ

Spread the love

ಮಂಗಳೂರು ವಿವಿ ಫಲಿತಾಂಶ ಗೊಂದಲ : ಎಬಿವಿಪಿ ಪ್ರತಿಭಟನೆ
ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯವು ದೇಶಕ್ಕೆ ಗಣನೀಯ ಸಂಖ್ಯೆಯ ಬುದ್ಧಿವಂತರನ್ನು ನೀಡಿರುವ ವಿಶ್ವವಿದ್ಯಾಲಯ. ಇಂತಹ ವಿಶ್ವವಿದ್ಯಾಲಯ ನಡೆಸಿದ ಪಬ್ಲಿಕ್ ಪರೀಕ್ಷಾ ಫಲಿತಾಂಶಗಳಿಗೆ ಸಂಬಂಧಿಸಿದ ಅಂಕ ಪಟ್ಟಿಯ ತಯಾರಿಯ ಬಗ್ಗೆ ಕಳೆದ 1 ವರ್ಷದಿಂದ ಅನೇಕರು ಸಂಶಯ ಪಡುವ ಸನ್ನಿವೇಶ ನಿರ್ಮಾಣಗೊಂಡಿರುವುದು ದೌರ್ಭಾಗ್ಯದ ಸಂಗತಿಯಾಗಿದೆ. 2015-16 ಮತ್ತು 2016-17ರಲ್ಲಿ ಪರೀಕ್ಷೆಗೆ ಕುಳಿತ ಅನೇಕ ವಿದ್ಯಾರ್ಥಿಗಳಿಗೆ ಪರೀಕ್ಷಾ ಫಲಿತಾಂಶ ಪ್ರಕಟಣೆಯಲ್ಲಿ ಗೊಂದಲಗಳು ನಿರ್ಮಾಣವಾಗಿ ಸರಿಯಾದ ಫಲಿತಾಂಶ ಪ್ರಕಟವಾಗದಿರುವುದು, ಪರೀಕ್ಷೆಯಅಂಕಪಟ್ಟಿಒಂದು ವರ್ಷ ಕಳೆದರೂ ಸಿಗದಿರುವುದು ಮತ್ತುಅದರ ಪರಿಣಾಮವಾಗಿಉದ್ಯೋಗ ಗಳಿಸಿಕೊಳ್ಳುವ ಹಾಗೂ ಉನ್ನತ ಶಿಕ್ಷಣಕ್ಕೆ ಸೇರುವಲ್ಲಿ ವಂಚಿತರಾಗಿರುವ ಅನೇಕ ಉದಾಹರಣೆಗಳು ಕಳೆದ ಒಂದೂವರೆ ವರ್ಷದಲ್ಲಿ ನಡೆದಿರುವುದುಖೇದಕರವಾಗಿದೆ. ಈ ಎಲ್ಲಾ ಪ್ರಕರಣಗಳಿಗೆ ಮಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳು, ಕುಲಸಚಿವರು ಹಾಗೂ ಪರೀಕ್ಷಾಂಗ ಕುಲಸಚಿವರುಗಳೆ ನೇರವಾಗಿ ಹೊಣೆಗಾರರಾಗಿದ್ದಾರೆಂಬುವುದುಅತ್ಯಂತ ಸ್ಪಷ್ಟವಾಗಿದ್ದುಇಡೀ ಪ್ರಕರಣ ನಾಚಿಕೆಗೇಡಿನ ಸಂಗತಿಯಾಗಿದೆ.

ಈಗಾಗಲೇ ಪ್ರತಿಯೊಬ್ಬ ವಿದ್ಯಾರ್ಥಿಯ ಫಲಿತಾಂಶ ಪ್ರಕಟಿಸಲು ವಿಶ್ವವಿದ್ಯಾಲಯವು ಹೊರಗುತ್ತಿಗೆ ಸಂಸ್ಥೆಗೆ ರೂ.120/- ಹಣವನ್ನು ವಿನಿಯೋಗಿಸುತ್ತಿದೆ. ಈ ಹಿಂದೆ ರೂ.60/- ಹಣವನ್ನುಖರ್ಚುಮಾಡಿ ಒಳ್ಳೆಯ ಫಲಿತಾಂಶವನ್ನು ಸರಿಯಾದ ಸಮಯಕ್ಕೆ ನೀಡುತ್ತಿತ್ತು.

ಇದೀಗ ಅದರದುಪ್ಪಟ್ಟು ಹಣವನ್ನು ನೀಡಲಾಗುತ್ತಿದ್ದರೂ ಪರೀಕ್ಷಾ ಫಲಿತಾಂಶಗೊಂದಲದಗೂಡಾಗಿದೆ. ಹಾಗೆ ದುಪ್ಪಟ್ಟು ಹಣ ನೀಡಿ ಹೊರಗುತ್ತಿಗೆ ಸಂಸ್ಥೆಯನ್ನು ಬದಲಾಯಿಸಿದ್ದರ ಉದ್ದೇಶವೂ ಸಂಶಯಾಸ್ಪದವಾಗಿದೆ ಮತ್ತುಇದುಯಾರ ಲಾಭಕ್ಕಾಗಿ ಎಂಬ ಪ್ರಶ್ನೆ ಇದೀಗ ಉದ್ಭವಿಸಿದೆ? ಈಗಾಗಲೇ ಮಂಗಳೂರು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಸುಮಾರು 210 ಅಂಗೀಕೃತ ಕಾಲೇಜುಗಳಿದ್ದು ಇದರಲ್ಲಿ 85000 ವಿದ್ಯಾರ್ಥಿಗಳು ವ್ಯಾಸಾಂಗ ಮಾಡುತ್ತಿದ್ದಾರೆ. ಈ ವಿದ್ಯಾರ್ಥಿಗಳಿಗೋಸ್ಕರ ವಿಶ್ವವಿದ್ಯಾಲಯವು ಸುಮಾರು 1,02,0000 ಹಣವನ್ನು ಪ್ರತಿ ಸೆಮಿಸ್ಟರ್‍ನಲ್ಲಿ ಹೊರಗುತ್ತಿಗೆ ಸಂಸ್ಥೆಗೆ ನೀಡುತ್ತಿದೆ. ಆದರೂ ಪರೀಕ್ಷಾ ಫಲಿತಾಂಶದಲ್ಲಿ ಗೊಂದಲಗಳು ಉಂಟಾಗಿ ಕೆಲವರ ಫಲಿತಾಂಶ ಪ್ರಕಟವಾಗದೆಅಂಕಪಟ್ಟಿ ಸಿಗದಿರುವ ಉದಾಹರಣೆಗಳಿವೆ. ಇದನ್ನುಅಭಾವಿಪ ಮಂಗಳೂರು ಶಾಖೆ ಬಲವಾಗಿ ಖಂಡಿಸುತ್ತದೆ.

ಮಂಗಳೂರು ವಿಶ್ವವಿದ್ಯಾಲಯವು ಪ್ರತಿ ವಿದ್ಯಾರ್ಥಿಯಿಂದ ಪರೀಕ್ಷಾ ಶುಲ್ಕ, ಆನ್‍ಲೈನ್ ಶುಲ್ಕ, ಅಂಕಪಟ್ಟಿ ಶುಲ್ಕ, ಅರ್ಜಿ ಶುಲ್ಕ ಹೀಗೆ ಒಬ್ಬ ವಿದ್ಯಾರ್ಥಿಯ ಪರೀಕ್ಷೆ ನಡೆಸಲು ಸಾವಿರಾರುರೂ. ಶುಲ್ಕ ವಸೂಲು ಮಾಡುವಅವಶ್ಯಕತೆಇದೆಯಾ? ಇಂದು ವಿದ್ಯಾರ್ಥಿಗಳಿಂದ ಖಾಸಗಿ ಕಾಲೇಜುಗಳಿಗಿಂತಲೂ ಹೆಚ್ಚಿನ ಹಣವನ್ನು ವಿಶ್ವವಿದ್ಯಾಲಯವು ವಸೂಲು ಮಾಡುತ್ತಿದೆ. ಇದರಿಂದ ವಿಶ್ವವಿದ್ಯಾಲಯವು ವ್ಯಾಪಕ ಭ್ರಷ್ಟಾಚಾರತೊಡಗಿದೆ ಎಂಬ ಅನುಮಾನವುಯಾರಿಗಾದರೂ ಮೂಡುತ್ತದೆ. ಈಗಾಗಲೇ ರಾಜ್ಯಉನ್ನತ ಶಿಕ್ಷಣ ಸಚಿವರು “ರಾಜ್ಯದ ಬೇರೆ ಬೇರೆ ವಿಶ್ವವಿದ್ಯಾಲಯಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ” ಎಂದು ಹೇಳಿದ ಮಾತಿಗೆ ಮಂಗಳೂರು ವಿಶ್ವವಿದ್ಯಾಲಯವೂ ಪುಷ್ಠಿ ಕೊಟ್ಟಂತೆಕಾಣಿಸುತ್ತಿದೆ.
ವಿಶ್ವವಿದ್ಯಾಲಯ ಪರೀಕ್ಷಾ ಫಲಿತಾಂಶ ಪ್ರಕಟಣೆ ಹಾಗೂ ಅಂಕ ಪಟ್ಟಿಗಳ ತಯಾರಿಕೆಕುರಿತಂತೆಇಷ್ಟೊಂದು ದೋಷಗಳು ಕಾಣಬರುತ್ತಿದ್ದರೂ, ಈ ಕುರಿತು ಸ್ಪಷ್ಟ ಸಾಕ್ಷಾಧಾರಗಳಿದ್ದರೂ ವಿ.ವಿ.ಯ ಕುಲಪತಿಗಳು ಹಾಗೂ ಪರೀಕ್ಷಾಂಗ ಕುಲಸಚಿವರು ಹಾಗೂ ಸಿಬ್ಬಂದಿ ವರ್ಗ ವಿದ್ಯಾರ್ಥಿ ಸಂಘವೊಂದರಿಂದ “ಗೊಂದಲ ರಹಿತ ಫಲಿತಾಂಶ”ಕ್ಕಾಗಿಅಭಿನಂದನೆ ಸ್ವೀಕರಿಸ ಹೊರಟಿದ್ದು ನಾಚಿಕೆಗೇಡಿನ ಸಂಗತಿಯಾಗಿದೆ.
ಈ ಹಿನ್ನಲೆಯಲ್ಲಿ ಮಂಗಳೂರು ವಿ.ವಿಯ ಈ ಎರಡು ವರ್ಷಗಳಲ್ಲಿ ನಡೆಸಿದ ಪರೀಕ್ಷಾ ಪ್ರಕ್ರಿಯೆ, ಸಂಗ್ರಹಿಸಿದ ಮಿತಿಮೀರಿದ ಶುಲ್ಕ, ಹೊರಗುತ್ತಿಗೆ ಸಂಸ್ಥೆಯನ್ನು ಬದಲಿಸಿ ದುಪ್ಪಟ್ಟು ಶುಲ್ಕ ನೀಡಿದ್ದುದು, ಕಳೆದ ಸಾಲಿನಲ್ಲಿ ಸಾವಿರಗಟ್ಟಲೆಅಂಕಪಟ್ಟಿಯನ್ನು ದೋಷಪೂರಿತಗೊಳಿಸಿ ಮತ್ತು ಹಿಂಪಡೆದಿದ್ದು, ಈ ಬಾರಿ ಫಲಿತಾಂಶ ಪ್ರಕಟಿಸಿ ಅದನ್ನು 24 ಗಂಟೆಗಳಲ್ಲಿ ಹಿಂಪಡೆದಿದ್ದು, ಪುನ: ಈ ಬಾರಿಯೂ ನೂರಾರುದೋಷಪೂರಿತ ಫಲಿತಾಂಶ ಪ್ರಕಟಿಸಿದ್ದುದು, ಇಲ್ಲವೇತಪ್ಪುಅಂಕಪಟ್ಟಿ ನೀಡಿದ್ದುಎಲ್ಲಾ ಅಂಶಗಳ ಬಗ್ಗೆ ರಾಜ್ಯಪಾಲರು ಹಾಗೂ ರಾಜ್ಯ ಸರ್ಕಾರವುಉನ್ನತ ಮಟ್ಟದತನಿಖೆಯನ್ನು ಕಾಲಮಿತಿ ನಿಗದಿಸಿ ನಡೆಸಲುಅಭಾವಿಪವು ಆಗ್ರಹಿಸುತ್ತದೆ.
ಅಭಾವಿಪವು ಈ ಪ್ರತಿ ಸಂದರ್ಭದಲ್ಲಿಯೂ ವಿಶ್ವವಿದ್ಯಾಲಯಕ್ಕೆ ಸಲಹೆ ಸೂಚನೆಯನ್ನು ನೀಡುತ್ತಾ, ಎಚ್ಚರಿಸುತ್ತಾ, ಪ್ರತಿಭಟಿಸುತ್ತಾ ಸಮಸ್ಯೆಯನ್ನು ಬಗೆಹರಿಸುವಂತೆ ಆಗ್ರಹಿಸಿತು. ಆದರೆ ವಿಶ್ವವಿದ್ಯಾಲಯವು ದಿನಾಂಕ 18.02.2017 ರಂದು ಮತ್ತೆತಪ್ಪು ಫಲಿತಾಂಶವನ್ನು ಪ್ರಕಟಿಸಿ ವಿದ್ಯಾರ್ಥಿಗಳನ್ನು ಹಾಗೂ ಅವರ ಪೋಷಕರನ್ನು ಪೇಚಿಗೆ ಸಿಲುಕಿಸಿತು. ಆದ್ದರಿಂದ ಈ ಗೊಂದಲಗಳಿಗೆ ಇತಿಶ್ರೀ ನೀಡಲೇಬೇಕೆಂದುಇದಕ್ಕೆಕಾರಣಭೂತರಾದ ವಿಶ್ವವಿದ್ಯಾಲಯದ ಕುಲಪತಿ, ಕುಲಸಚಿವರು ಹಾಗೂ ಪರೀಕ್ಷಾಂಗ ಕುಲಸಚಿವರರಾಜೀನಾಮೆಗೆ ಆಗ್ರಹಿಸಿ ದಿನಾಂಕ 11.02.2017 ರಿಂದ ಮಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯದ.ಕ, ಉಡುಪಿ ಹಾಗೂ ಕೊಡಗು ಜಿಲ್ಲೆಯಾದ್ಯಂತವಿರುವ ಪದವಿ ಕಾಲೇಜುಗಳ ವಿದ್ಯಾರ್ಥಿಗಳಿಂದ ಬೃಹತ್ ಹೋರಾಟಗಳು ನಡೆಯಲಿವೆ. ನಂತರ ಸಹಿ ಸಂಗ್ರಹ ಅಭಿಯಾನ, ವಿಶ್ವವಿದ್ಯಾಲಯ ಚಲೋ ಹಾಗೂ ಸರ್ವಕಾಲೇಜ್ ಬಂದ್ ಚಳುವಳಿಯನ್ನು ನಡೆಸಲಾಗುತ್ತದೆ.


Spread the love

Exit mobile version