ಮಂಗಳೂರು ವಿಶ್ವವಿದ್ಯಾಲಯದಲ್ಲಿ ನಡೆದಿರುವ ಭ್ರಷ್ಟಚಾರ & ಅಕ್ರಮಗಳ ತನಿಖೆಗೆ ಆಗ್ರಹಿಸಿ ಎಬಿವಿಪಿಯಿಂದ ಬೃಹತ್ ಪ್ರತಿಭಟನೆ
ಮಂಗಳೂರು: ಒಂದೆರಡೂ ಅಧಿಕಾರಿಗಳು ತಮ್ಮದೇ ದುಷ್ಟಕೂಟವನ್ನು ರಚಿಸಿಕೊಂಡು ವಿಶ್ವವಿದ್ಯಾಲಯದ ಸಂಪನ್ಮೂಲಗಳನ್ನು ಬಾಚಿ ಬಾಚಿ ದೋಚಿ ಕೊಳ್ಳೆ ಹೊಡೆಯುವಂತಿರುವುದು ಪ್ರಜ್ಞಾವಂತ, ವಿದ್ಯಾವಂತ ಜಿಲ್ಲೆಗಳಿಗೆ ಮಾಡಿದ ಅವಮಾನ. ತಮ್ಮ ಸ್ವಾರ್ಥವನ್ನು ಈಡೇರಿಸುವುದಕ್ಕೋಸ್ಕರ ದುಷ್ಟಕೂಟವನ್ನು ರಚಿಸಿಕೊಂಡು ಜೊತೆಗೆ ಕೆಲವು ರಾಜಕಾರಿಣಿಗಳನ್ನು ಓಲೈಸಿಕೊಂಡು ತಮ್ಮ ಬೇಳೆಯನ್ನು ಬೇಯಿಸಿಕೊಳ್ಳುತ್ತಿರುವುದು ಇತ್ತಿಚಿಗೆ ಗಮನಕ್ಕೆ ಬಂದಿದೆ. ಲಕ್ಷಾಂತರ ಬಡ ವಿದ್ಯಾರ್ಥಿಗಳು ಮತ್ತು ಅವರನ್ನು ಹೆತ್ತವರು ಕಷ್ಟಪಟ್ಟು ಬೆವರು ಸುರಿಸಿ ಕಟ್ಟಿದ ಶುಲ್ಕವನ್ನು ನಾನಾ ಯೋಜನೆಗಳ ಹೆಸರಿನಲ್ಲಿ ಲೂಟಿ ಮಾಡುತ್ತಿರುವರು.
ಇಂದು ಮಂಗಳೂರುನಲ್ಲಿ ಜಿಲ್ಲಾಧಿಕಾರಿ ಕಛೇರಿ ಎದುರು ಅಭಾವಿಪ ವತಿಯಿಂದ ಬೃಹತ್ ಪ್ರತಿಭಟನೆ ಮಾಡಲಾಯಿತು ಸುಮಾರು 400 ರಿಂದ 450 ವಿದ್ಯಾರ್ಥಿಳು ಉಪಸ್ಥಿತರಿದ್ದರು ಈ ಪ್ರತಿಭಟನೆಯಲ್ಲಿ ಸಾತ್ವಿಕ, ಮಣಿಕಂಟ, ವಿಕಾಸ್,ಸಾಯಿಲ್ ರಾಹುಲ್, ಭರತ, ಅಭೀ, ಶ್ರೇಯಸ್, ರಕ್ಷಿತ್, ಶರುಲ್ (ಕಾರ್ಯದರ್ಶಿ),ಶಿತಲ್,ಕಿರಣ,ಬಸವೇಶ ವಿದ್ಯಾರ್ಥಿನಿಯರಾದ ಬಿಂದು, ರಿಶಾ, ಸುಮಿತ್ರಾ, ತೃಪ್ತಿ, ವಿನಯಲಕ್ಮಿ ಶ್ರೇಯ ಮುಂತಾದ ವಿದ್ಯಾರ್ಥಿಗಳು ಸೇರಿದ್ದರು.
ಮೃಣಾಲ್, ಕಾರ್ಯದರ್ಶಿ