Home Mangalorean News Kannada News ಮಂಗಳೂರು: ವಿಶ್ವ ಪ್ರಜಾಪ್ರಭುತ್ವ ದಿನಾಚರಣೆ – ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗ ಬಳಸಲು ಸೂಚನೆ

ಮಂಗಳೂರು: ವಿಶ್ವ ಪ್ರಜಾಪ್ರಭುತ್ವ ದಿನಾಚರಣೆ – ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗ ಬಳಸಲು ಸೂಚನೆ

Spread the love

ಮಂಗಳೂರು: ವಿಶ್ವ ಪ್ರಜಾಪ್ರಭುತ್ವ ದಿನಾಚರಣೆ – ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗ ಬಳಸಲು ಸೂಚನೆ

ಮಂಗಳೂರು: ಸಪ್ಟೆಂಬರ್ 15 ರಂದು ವಿಶ್ವ ಪ್ರಜಾಪ್ರಭುತ್ವ ದಿನಾಚರಣೆಯ ಪ್ರಯುಕ್ತ ಕರ್ನಾಟಕ ರಾಜ್ಯ ಸರಕಾರದ ವತಿಯಿಂದ ಬೀದರ್ ಜಿಲ್ಲೆಯಿಂದ ಚಾಮರಾಜನಗರದವರೆಗೆ ಹಮ್ಮಿಕೊಂಡಿರುವ ಬೃಹತ್ ಮಾನವ ಸರಪಳಿ ಕಾರ್ಯಕ್ರಮದ ಅಂಗವಾಗಿ ಮಂಗಳೂರು ನಗರದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಉಡುಪಿ-ಹೆಜಮಾಡಿ ಗಡಿಯಿಂದ ನಂತೂರು ವೃತ್ತದ ಮೂಲಕ ರಾಷ್ಟ್ರೀಯ ಹೆದ್ದಾರಿ 73 ರ ಅರ್ಕುಳ- ಫರಂಗಿಪೇಟೆವರೆಗೆ ಶಾಲಾ ಮಕ್ಕಳು ಬೆಳಿಗ್ಗೆ ಸುಮಾರು 07.30 ಗಂಟೆಯಿಂದ 11.00 ರವರರೆಗೆ ಮಾನವ ಸರಪಳಿಯನ್ನು ನಿರ್ಮಿಸುವ ಸಮಯ ಹಾಗೂ ಶಾಲಾ ಮಕ್ಕಳ ಆಗಮನ ಮತ್ತು ನಿರ್ಗಮನದ ಸಮಯ ಮಕ್ಕಳ ಮತ್ತು ಸಾರ್ವಜನಿಕರ ಸುರಕ್ಷತೆ ಮತ್ತು ಹಿತದೃಷ್ಟಿಯಿಂದ ಹೆಜಮಾಡಿ ಬಪ್ಪನಾಡು – ಮುಲ್ಕಿ – ಕಾರ್ನಾಡು ಹಳೆಯಂಗಡಿ – ಪಾವಂಜೆ – ಮುಕ್ಕ – ಸುರತ್ಕಲ್ – ಹೊಸಬೆಟ್ಟು – ಹೊನ್ನಕಟ್ಟೆ – ಬೈಕಂಪಾಡಿ – ಪಣಂಬೂರು ಕೂಳೂರು ಕೊಟ್ಟರಚೌಕಿ ಕುಂಟಿಕಾನ ಕೆಪಿಟಿ ವೃತ್ತ ಪದವು ಜಂಕ್ಷನ್ ನಂತೂರು ವೃತ್ತ ಬಿಕರ್ನಕಟ್ಟೆ – ಕೈಕಂಬ – ಪಡಿಲ್ ಕಣ್ಣೂರು – ಅಡ್ಯಾರ್ – ಸಹ್ಯಾದ್ರಿ – ವಳಚ್ಚಿಲ್ ಅರ್ಕುಳ ವರೆಗಿನ ರಾಷ್ಟ್ರೀಯ ಹೆದ್ದಾರಿ 66 ಮತ್ತು 73 ರಲ್ಲಿ ಸಂಚರಿಸುವ ಎಲ್ಲಾ ವಿಧದ ವಾಹನಗಳ ಚಾಲಕರು / ಸವಾರರು ಪರ್ಯಾಯ ಮಾರ್ಗಗಳನ್ನು ಬಳಸಿಕೊಂಡು ಸದ್ರಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಲು ಕೋರಲಾಗಿದೆ.


Spread the love

Exit mobile version