ಮಂಗಳೂರು: ಮಂಗಳೂರಿನ ವೃಕ್ಷಾ ಬಿಸಿನೆಸ್ ಸೊಲ್ಯುಷನ್ ಇಂಡಿಯ ಲಿಮಿಟೆಡ್ ವಿರುದ್ದ ನ್ಯಾಯಲಯದಲ್ಲಿ ಮೋಸ ಹಾಗೂ ವಂಚನೆಯ ಸಂಬಂಧ 140 ಕ್ಕೂ ಅಧಿಕ ಕೇಸು ದಾಖಲಾಗಿದೆ
ಮಂಗಳೂರಿನ ಕೆ.ಎಸ್.ರಾವ್ ರಸ್ತೆಯಲ್ಲಿರುವ ಯುಟಿಲಿಟಿ ರಾಯಲ್ ಟವರ್ಸ್ 2ನೇ ಮಹಡಿಯಲ್ಲಿದ್ದ ವೃಕ್ಷಾ ಬಿಸಿನೆಸ್ ಸೊಲ್ಯುಷನ್ ಇಂಡಿಯಾ ಲಿಮಿಟೆಡ್ ಎಂಬ ಸಂಸ್ಥೆಯ ಸಂಚಾಲಕರು ಹಾಗೂ ನಿರ್ದೇಶಕರಾದ 1) ಜೀವರಾಜ್ ಪುರಾಣಿಕ್ 2) ರೋಶನ್ ಡಿ’ಸೋಜಾ 3) ಸುರೇಶ ಪೂಜಾರಿ 4) ಮುಲ್ಕಿ ರತ್ನಾಕರ ಚಾಡಯ್ಯ ಮತ್ತು ನೊಗಿಬೈಲ್ ಚಿನ್ನಪ್ಪ ಎಂಬವರು ಸದ್ರಿ ಸಂಸ್ಥೆಯಲ್ಲಿ ಹಣವನ್ನು ಡೆಪೋಸಿಟ್ ಇಡುವಂತೆ ಹಾಗೂ ಈ ಹಣಕ್ಕೆ ಒಳ್ಳೆಯ ಬಡ್ಡಿಯನ್ನು ನೀಡುವುದಾಗಿ ಮಾಧ್ಯಮಗಳಲ್ಲಿ ಪ್ರಚಾರ ಮಾಡಿ ಸುಮಾರು 30ಕೋಟಿ ರೂಪಾಯಿ ಬಡ ಹಾಗೂ ಮಾಧ್ಯಮ ವರ್ಗದ ಜನರ ಹಣವನ್ನು ದುರುಪಯೋಗಪಡಿಸಿ ಹಣವನ್ನು ಮರುಪಾವತಿಸದೆ ಠೇವಣಿದಾರರಿಗೆ ಮೋಸ ಮಾಡುವ ಉದ್ದೇಶದಿಂದ ವಂಚಿಸಿರುತ್ತಾರೆ.
ಈಗಾಗಲೇ ಮೇಲ್ತಿಳಿಸಿದ ಆರೋಪಿಗಳ ಮೇಲೆ ಮಾನ್ಯ 2ನೇ ಸಿ.ಜೆ.ಎಂ. ಕೋರ್ಟ್ ಮಂಗಳೂರಿನಲ್ಲಿ ಪ್ರಕರಣ ದಾಖಲಾಗಿದ್ದು ಎಲ್ಲರು ಸುಮಾರು 7 ತಿಂಗಳಿನಿಂದ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇವರಿಂದ ವಂಚನೆಗೊಳಗಾದ ಸುಮಾರು 140ಕ್ಕೂ ಮಿಕ್ಕಿ ಎಜೆಂಟುಗಳೂ ಈಗ ಇವರ ಮೇಲೆ ಕ್ರಮಿನಲ್ ಕೇಸು ದಾಖಲಿಸಿದ್ದು ಮಾನ್ಯ 2ನೇ ಹೆಚ್ಚುವರಿ ಸಿ.ಜೆ.ಎಂ. ನ್ಯಾಯಾಲಯ ಮಂಗಳೂರು ಎಲ್ಲಾ ಕೇಸುಗಳಲ್ಲಿ ಈIಖ ದರ್ಜು ಮಾಡಿದ್ದು ಪ್ರತಿಯೊಂದು ಕೇಸಿನಲ್ಲು ಆರೋಪಿಗಳ ಮೇಲೆ ಬಾಡಿ ವಾರಂಟ್ ಆದೇಶ ಹೊರಡಿಸಿರುತ್ತಾರೆ.
ಸದ್ರಿ ಕೇಸಿನಲ್ಲಿ ಪಿರ್ಯಾದಿದಾರರ ಪರವಾಗಿ ವಕೀಲರಾದ ರಾಘವೇಂದ್ರ ರಾವ್, ಕೆ. ಕಿರಣ್ ಕುಮಾರ್ ಹಾಗೂ ಯಶಸ್ವಿನಿ ಎಸ್.ಆರ್. ರವರು ವಾದಿಸಿರುತ್ತಾರೆ.