Home Mangalorean News Kannada News ಮಂಗಳೂರು ವ್ಯಾಪ್ತಿಯಲ್ಲಿ ದರೋಡೆ: ವೃದ್ಧರನ್ನು ಬೆದರಿಸಿ ಕಾರೊಂದಿಗೆ ಗ್ಯಾಂಗ್ ಪರಾರಿ

ಮಂಗಳೂರು ವ್ಯಾಪ್ತಿಯಲ್ಲಿ ದರೋಡೆ: ವೃದ್ಧರನ್ನು ಬೆದರಿಸಿ ಕಾರೊಂದಿಗೆ ಗ್ಯಾಂಗ್ ಪರಾರಿ

Spread the love

ಮಂಗಳೂರು ವ್ಯಾಪ್ತಿಯಲ್ಲಿ ದರೋಡೆ: ವೃದ್ಧರನ್ನು ಬೆದರಿಸಿ ಕಾರೊಂದಿಗೆ ಗ್ಯಾಂಗ್ ಪರಾರಿ

ಮಂಗಳೂರು: ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಮಂಗಳವಾರ ಮುಂಜಾನೆ ಮತ್ತೊಂದು ದರೋಡೆ ಪ್ರಕರಣ ನಡೆದಿದ್ದು, ಆರೋಪಿಗಳು ಪರಾರಿಯಾದ ಮನೆ ಮಾಲೀಕರು ಕಾರು ಮೂಲ್ಕಿಯಲ್ಲಿ ಪತ್ತೆಯಾಗಿದೆ.

ಮಂಗಳೂರು ನಗರದ ಕಾಪಿಕಾಡು ಬಳಿಯ ಕೋಟೆಕಣಿ ಎಂಬಲ್ಲಿ ವಿಕ್ಟರ್ ಮೆಂಡೋನ್ಸಾ(71), ಪ್ಯಾಟ್ರಿಷಾ ಮೆಂಡೋನ್ಸಾ(60) ಎಂಬವರ ಮನೆಗೆ ರಾತ್ರಿ 1.49 ಬೆಡ್ ರೂಂ ನ ಕಿಟಕಿಯ ರಾಡ್ ಕಟ್ ಮಾಡಿ ಮನೆಗೆ ನುಗ್ಗಿದ್ದ ನಾಲ್ವರು ಕಳ್ಳರ ತಂಡ ಮನೆಯ ಬೀರು, ಕಪಾಟು ತಡಕಾಡಿ ಕಳ್ಳತನ ಮಾಡಿ ವೃದ್ಧ ದಂಪತಿಗೆ ಹಲ್ಲೆ ಮಾಡಿ ಪರಾರಿಯಾಗಿದೆ ಎನ್ನಲಾಗಿದೆ.

ಹಲ್ಲೆಗೊಳಗಾದ ವಿಕ್ಟರ್ ಮೆಂಡೋನ್ಸಾ(71), ಪ್ಯಾಟ್ರಿಷಾ ಮೆಂಡೋನ್ಸಾ(60) ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸ್ಥಳಕ್ಕೆ ಡಿ.ಸಿ.ಪಿ ದಿನೇಶ್ ಕುಮಾರ್, ಉರ್ವಾ ಠಾಣೆ ಪೊಲೀಸ್ ಅಧಿಕಾರಿಗಳ ಭೇಟಿ ನೀಡಿದ್ದು ಬೆರಳಚ್ಚು, ವಿಧಿ ವಿಜ್ಞಾನ ತಜ್ಞರ ತಂಡದಿಂದ ಪರಿಶೀಲನೆ ನಡೆಸಿದ್ದಾರೆ.

ಮನೆಯಲ್ಲಿ ಹಿರಿಯ ನಾಗರಿಕರಿದ್ದು, ಅವರ ಮಕ್ಕಳು ವಿದೇಶದಲ್ಲಿದ್ದಾರೆ. ಮನೆಯವರಿಗೆ ಮಾರಕಾಯುಧ ತೋರಿಸಿ ಬೆದರಿಸಿ ದರೋಡೆ ಕೃತ್ಯ ನಡೆಸಿದ್ದಾರೆ. ಬಳಿಕ ಮನೆಯ ಕಾರಿನ ಕೀ ಪಡೆದು ಆ ಕಾರಿನಲ್ಲಿ ಉಡುಪಿಯತ್ತ ತೆರಳಿದ್ದಾರೆ. ಹೆಜಮಾಡಿ ಟೋಲ್ ಗೇಟ್ ಮುನ್ನ ಕಾರು ನಿಲ್ಲಿಸಿ ಅವರ ಕಾರಿನಲ್ಲಿ ಪರಾರಿಯಾಗಿರುವ ಶಂಕೆಯಿದೆ. ದರೋಡೆಗೈದ ಸೊತ್ತುಗಳ ಮೌಲ್ಯ ಇನ್ನೂ ತಿಳಿದು ಬಂದಿಲ್ಲ. ಕಾರಿನೊಳಗೆ ಮೊಬೈಲ್ ಒಂದು ಪತ್ತೆಯಾಗಿದ್ದು, ಇದು ಯಾರ ಮೊಬೈಲ್ ಎಂದು ತಿಳಿದು ಬಂದಿಲ್ಲ. ಪೊಲೀಸರ ಮಾಹಿತಿ ಪ್ರಕಾರ ಇದು ದರೋಡೆಕೋರರ ಮೊಬೈಲ್ ಅವಸರದಲ್ಲಿ ಕಾರಿನಲ್ಲೇ ಬಾಕಿಯಾಗಿರುವ ಸಾಧ್ಯತೆ ಇದೆ. ಕಾರಿನ ಬಾಗಿಲು ಇನ್ನೂ ತೆರೆದು ಪರಿಶೀಲನೆ ನಡೆಸಿಲ್ಲ. ಮುಲ್ಕಿ ಪೊಲೀಸರು ಕಾರನ್ನು ಪತ್ತೆಹಚ್ಚಿ, ವಶಕ್ಕೆ ಪಡೆದುಕೊಂಡಿದ್ದಾರೆ.


Spread the love

Exit mobile version