Home Mangalorean News Kannada News ಮಂಗಳೂರು: ಶಾಸಕ ಜೆ ಆರ್ ಲೋಬೊ ನೇತೃತ್ವದಲ್ಲಿ ಜನ ಸಂಪರ್ಕ ಸಭೆ – ಜನರ ಅಹವಾಲುಗಳಿಗೆ...

ಮಂಗಳೂರು: ಶಾಸಕ ಜೆ ಆರ್ ಲೋಬೊ ನೇತೃತ್ವದಲ್ಲಿ ಜನ ಸಂಪರ್ಕ ಸಭೆ – ಜನರ ಅಹವಾಲುಗಳಿಗೆ ಶೀಘ್ರ ಸ್ಪಂದನ

Spread the love

ಮಂಗಳೂರು: ಶಾಸಕ ಜೆ. ಆರ್. ಲೋಬೊರವರ ಅಧ್ಯಕ್ಷತೆಯಲ್ಲಿ ವಿವಿಧ ಸರಕಾರಿ ಇಲಾಖೆಯ ಅಧಿಕಾರಿಗಳೊಂದಿಗೆ ಮಂಗಳವಾರ ಮರೋಳಿಯ ಶ್ರೀ ಸೂರ್ಯನಾರಯಣ ದೇವಸ್ಥಾನದ ಸಭಾಂಗಣದಲ್ಲಿ ‘ಜನ ಸಂಪರ್ಕ ಸಭೆ’ ನಡೆಯಿತು.

ಪಾಲಿಕೆಯ ಮಹಪೌರರು, ಉಪ ಮಹಪೌರರು, ಕಾರ್ಪೋರೇಟರ್, ಪ್ರಮುಖ ಅಧಿಕಾರಿಗಳ ಸಮ್ಮುಖದಲ್ಲಿ ನಡೆದ ಈ ಸಭೆಯಲ್ಲಿ ಸುಮಾರು 100ರಷ್ಟು ಜನರ ಅಹವಾಲುಗಳನ್ನು ಸ್ವೀಕರಿಸಿ ಅವರ ಕೆಲವು ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸಿದರು.

jr_lobo

ಹಲವು ಅರ್ಜಿಗಳ ಪೈಕಿ ಕಲುಷಿತ ಕುಡಿಯುವ ನೀರು, ಅಸಮರ್ಪಕ ಒಳಚರಂಡಿ ವ್ಯವಸ್ಥೆ, ರಸ್ತೆ ಹಾಗೂ ವಿದ್ಯುತ್ ಕಡಿತದ ಮುತಾಂದ ಸಮಸ್ಯೆಗಳನ್ನು ಅರ್ಜಿಗಳ ಮೂಲಕ ಶಾಸಕರ ಮುಂದಿಟ್ಟರು. ಪ್ರತಿಯೊಂದು ಅರ್ಜಿಗಳನ್ನು ಕುಲಂಕೂಷವಾಗಿ ಪರೀಶಿಲಿಸಿ ಶಾಸಕರು ಸಂಬಧಪಟ್ಟ ಅಧಿಕಾರಿಗಳಿಗೆ ಸ್ಥಳದಲ್ಲೆ ಪರಿಹಾರವನ್ನು ಕಂಡುಕೊಳ್ಳುವಂತೆ ಸೂಚಿಸಿದರು.

ಬಳಿಕ ಮಾತನಾಡಿದ ಶಾಸಕರು ಈ ಪ್ರದೇಶವು ಉಬ್ಬುತಗ್ಗುಗಳಿಂದ ಕೂಡಿದ ಪ್ರದೇಶವಾಗಿದ್ದು ಇದರಿಂದಾಗಿ ಸ್ಥಳಿಯ ನಿವಾಸಿಗಳಿಗೆ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಕೊಡಿಸುವುದು ಕಷ್ಟಕರ. ಕಳೆದ ಎರಡು ವರ್ಷದಲ್ಲಿ ಶಾಸಕರ ನಿಧಿಯಿಂದ ಹಾಗು ವಿವಿಧ ಇಲಾಖೆಯ ನಿಧಿಯಿಂದ ಒಟ್ಟು 1 ಕೋಟಿಯಷ್ಟು ವಿವಿಧ ಅಭಿವೃದ್ಧಿ ಕಾಮಗಾರಿಗೆ ಅನುದಾನ ಈಗಾಗಲೇ ಮಂಜೂರಾಗಿದ್ದು ಕೆಲವೊಂದು ಕಾಮಗಾರಿ ಪ್ರಗತಿಯಲ್ಲಿದೆ. ತುಂಬೆ ಅಣೆಕಟ್ಟಿನಿಂದ ನೇರ ಈ ಪ್ರದೇಶಕ್ಕೆ ನೀರು ಸರಬರಾಜು ಅಗುವುದರಿಂದ ಕಲುಷಿತ ಪ್ರಮಾಣ ಜಾಸ್ತಿ ಇರುತ್ತದೆ. ಈಗಾಗಿ ಮುಂದಿನ ದಿನಗಳಲ್ಲಿ ಪರಿಶುದ್ದವಾದ ನೀರು ಪಡೀಲ್‍ನಲ್ಲಿರುವ ಜಿ.ಎಲ್.ಎಸ್.ಅರ್ ಟ್ಯಾಂಕ್‍ನಿಂದ ಈ ಪ್ರದೇಶಕ್ಕೆ ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಈ ಪ್ರದೇಶದಲ್ಲಿದ್ದ ಒಳಚರಂಡಿ ಸಮಸ್ಯೆಯನ್ನು ಎಡಿಬಿ-11 ಯೋಜನೆಯ ಅಡಿಯಲ್ಲಿ ಸೇರ್ಪಡಿಸಲಾಗುವುದು, ಎಂದು ಶಾಸಕರು ತಿಳಿಸಿದರು.

ಈ ಸಭೆಯಲ್ಲಿ 16 ಫಲನುಭವಿಗಳಿಗೆ ಪಿಂಚಣಿ ಸೌಲಭ್ಯದ ‘ಮಂಜೂರತಿ ಅದೇಶ ಪತ್ರ’ ವಿತರಿಸಿದರು.

ಕಾರ್ಯಕ್ರಮದಲ್ಲಿ ಪ್ರಭಾರ ತಹಶಿಲ್ದರ್ ಜೀನ್ ಮರಿಯ ತಾವ್ರೊ, ಮೇಯರ್ ಜೆಸಿಂತಾ ವಿಜಯ ಅಲ್ಫ್ರೇಡ್, ಉಪಮೇಯರ್ ಪುರುಷೋತ್ತಮ್ ಚಿತ್ರಾಪುರ್, ಕಾರ್ಪೋರೇಟರ್ ಕೇಶವ್ ಮರೋಳಿ, ಪ್ರಕಾಶ್, ಪ್ರವೀಣ್ ಚಂದ್ರ ಅಳ್ವ, ಆಶಾ ಡಿ’ಸಿಲ್ವಾ, ಮುಂಖಡರಾದ ವಿಶ್ವಾಸ್ ದಾಸ್, ಗೊಪಾಲ್ ಪೂಜಾರಿ, ಸ್ಟೀಫನ್ ಮರೋಳಿ, ಎಲೀಜಬೆತ್, ಬಾಲಕೃಷ್ಣ ಕೋಟ್ಟರಿ, ಕೆ.ಪಿ ಶೆಟ್ಟಿ, ಗಿರಿಧರ್ ಶೆಟ್ಟಿ, ಗಣೇಶ್ ಶೆಟ್ಟಿ, ಬುಜಂಗ ಶೆಟ್ಟಿ, ಶಶಿರಜ್ ಅಬ್ಬೆಟ್ಟು, ಒಜ್ವಲ್ಡ್, ಟಿ.ಕೆ ಸುಧೀರ್, ಅರುಣ್ ಕುವೆಲೊ ಮತ್ತಿತ್ತಾರು ಉಪಸ್ಥಿತರಿದ್ದರು. ಭಾಸ್ಕರ್ ಮರೋಳಿ ಕಾರ್ಯಕ್ರಮ ನಿರೂಪಿಸಿದರು.


Spread the love

Exit mobile version