Home Mangalorean News Kannada News ಮಂಗಳೂರು:  ಸಂವಿಧಾನ ಜಾಥಾ ಸಂಚಾರ: ಬೈಕ್ ರ್ಯಾಲಿ

ಮಂಗಳೂರು:  ಸಂವಿಧಾನ ಜಾಥಾ ಸಂಚಾರ: ಬೈಕ್ ರ್ಯಾಲಿ

Spread the love

ಮಂಗಳೂರು:  ಸಂವಿಧಾನ ಜಾಥಾ ಸಂಚಾರ: ಬೈಕ್ ರ್ಯಾಲಿ

ಮಂಗಳೂರು:  ಸಂವಿಧಾನ ಜಾಥಾ ರಥವು ಮಂಗಳವಾರ ಭಾರತ ಸಂವಿಧಾನದ ಆಚರಣೆ ಮತ್ತು ಅದರ ಬಗ್ಗೆ ಜಾಗೃತಿ ಮೂಡಿಸಲು ಸಜಿಪನಡು ಗ್ರಾಮಪಂಚಾಯತ್, ಕುರ್ನಾಡು, ಬೋಳಿಯಾರ್ ಗ್ರಾಮ ಪಂಚಾಯತ್, ಬಂಟ್ವಾಳ, ಬಜ್ಪೆ ಪಟ್ಟಣ ಪಂಚಾಯತ್, ಪಡುಪೆರಾರ ಗ್ರಾಮ ಪಂಚಾಯತ್, ಪೆರ್ಮುದೆ ಹಾಗೂ ಎಕ್ಕಾರು ಗ್ರಾಮ ಪಂಚಾಯತ್‍ಗಳಲ್ಲಿ ಸಂಚರಿಸಿತು.

ಈ ಸಂದರ್ಭದಲ್ಲಿ ಸಂವಿಧಾನದ ಆಶಯ ಮತ್ತು ಮೌಲ್ಯಗಳನ್ನು ಒಳಗೊಂಡ ಸಂವಿಧಾನ ಜಾಗೃತಿ ಜಾಥಾ ಸ್ತಬ್ದ ಚಿತ್ರವನ್ನು ಪ್ರದರ್ಶಿಸಲಾಯಿತು. ಕರ್ನಾಟಕ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳ ಬಗ್ಗೆ ಮಾಹಿತಿಯನ್ನೊಳಗೊಂಡ ಬೀದಿ ನಾಟಕವನ್ನು ಪ್ರದರ್ಶಿಸಲಾಯಿತು.

ಸಂವಿಧಾನ ಜಾಥಾ ಆಗಮಿಸಿದ ಸಂದರ್ಭದಲ್ಲಿ ಬಜಪೆ ಮುಖ್ಯ ರಸ್ತೆಯಲ್ಲಿ ಬೈಕ್ ರ್ಯಾಲಿ ನಡೆಸಲಾಯಿತು. ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಮೆರವಣಿಗೆ ನಡೆಸಿ, ಸಂವಿಧಾನ ಪರ ಜಯಕಾರ ಕೂಗಿದರು.

ಸಾರ್ವಜನಿಕರಿಗೆ ಸಂವಿಧಾನದ ಅರಿವು ಮೂಡಿಸಿ, ಸರಕಾರದ ವಿವಿಧ ಯೋಜನೆಗಳ ಸೌಲಭ್ಯ ದೊರಕುತ್ತಿರುವ ಬಗ್ಗೆ ಖಚಿತಪಡಿಸಲಾಯಿತು.

ಸಮಾಜ ಕಲ್ಯಾಣ ಇಲಾಖೆ ಮಂಗಳೂರು ತಾ. ಸಹಾಯಕ ನಿರ್ದೇಶಕ ಸುರೇಶ್ ಅಡಿಗ ಅವರು ಉಪಸ್ಥಿತರಿದ್ದರು.


Spread the love

Exit mobile version