Home Mangalorean News Kannada News ಮಂಗಳೂರು: ಸರಕಾರಿ ನೌಕರರಿಗೆ ಸರ್ವೋತ್ತಮ ಪ್ರಶಸ್ತಿ ಪ್ರಕಟ: ಹಸನ್ ವಿಟ್ಲ ರಾಜ್ಯ ಪ್ರಶಸ್ತಿ

ಮಂಗಳೂರು: ಸರಕಾರಿ ನೌಕರರಿಗೆ ಸರ್ವೋತ್ತಮ ಪ್ರಶಸ್ತಿ ಪ್ರಕಟ: ಹಸನ್ ವಿಟ್ಲ ರಾಜ್ಯ ಪ್ರಶಸ್ತಿ

Spread the love

ಮಂಗಳೂರು:  ಗಮನಾರ್ಹ ಸೇವೆ ಸಲ್ಲಿಸಿದ ಸರಕಾರಿ ಅಧಿಕಾರಿಗಳಿಗೆ ಮತ್ತು ನೌಕರರಿಗೆ ಪ್ರತೀ ವರ್ಷ ನೀಡುವ ಜಿಲ್ಲಾ ಮಟ್ಟದ ಸರ್ವೋತ್ತಮ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ.

1. ಪಿ. ಶ್ರೀಧರ, ವಲಯ ಅರಣ್ಯಾಧಿಕಾರಿ, ಮಂಗಳೂರು, 2. ರವಿಚಂದ್ರ.ಎ, ಶಾಖಾಧಿಕ್ಷಕರು, ಪೋಲಿಸ್ ಅಧೀಕ್ಷಕರ ಕಚೇರಿ, ಮಂಗಳೂರು, 3. ಬಿ.ಹೈದರ್ ಅಲಿ, ಪ್ರಥಮ ದರ್ಜೆ ಸಹಾಯಕರು, ಕಂದಾಯ ಇಲಾಖೆ, ಮಂಗಳೂರು, 4. ಪ್ರಭಾಕರ, ಪ್ರಥಮ ದರ್ಜೆ ಸಹಾಯಕರು,, ಕಂದಾಯ ಇಲಾಖೆ, ಮಂಗಳೂರು, 5.  ಮಂಜುಳಾ,  ಮೇಲ್ವಚಾರಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ದ.ಕ.ಜಿಲ್ಲಾ ಪಂಚಾಯತ್, ಮಂಗಳೂರು, 6. ರಮೇಶ್, ಅಟೆಂಡರ್, ತೋಟಗಾರಿಕೆ ಇಲಾಖೆ, ಮಂಗಳೂರು. ಇವರು ದ.ಕ. ಜಿಲ್ಲಾ ಮಟ್ಟದ ಸವೋತ್ತಮ ಪ್ರಶಸ್ತಿಗೆ ಆಯ್ಕೆಯಾಗಿರುತ್ತಾರೆ. ಗಣರಾಜ್ಯೋತ್ಸವ ದಿನ ಕಾರ್ಯಕ್ರಮದಲ್ಲಿ ಇವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

ಹಸನ್ ವಿಟ್ಲಗೆ ರಾಜ್ಯ ಪ್ರಶಸ್ತಿ: ದ.ಕ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಧೀಕ್ಷಕರಾಗಿರುವ ಶೇಖ್ ಹಸನ್ ಸಾಹೇಬ್( ಹಸನ್ ವಿಟ್ಲ) ಇವರಿಗೆ ರಾಜ್ಯ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ ಘೋಷಣೆಯಾಗಿದೆ. ರಾಜ್ಯದ ಎಲ್ಲಾ ಇಲಾಖೆಗಳ 15 ಸರಕಾರಿ ಅಧಿಕಾರಿ,  ನೌಕರರನ್ನು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗಳ ನೇತೃತ್ವದ ಸಮಿತಿ ಪ್ರಶಸ್ತಿಗೆ ಆಯ್ಕೆ ಮಾಡಿದೆ.

ಕಂದಾಯ ಇಲಾಖೆಯ ವಿವಿಧ ವಿಭಾಗಗಳಲ್ಲಿ ಅತ್ಯುನ್ನತ ಸೇವೆ ಸಲ್ಲಿಸಿರುವ ಶೇಖ್ ಹಸನ್ ಅವರಿಗೆ ಗಣರಾಜ್ಯೋತ್ಸವ ದಿನದಂದು ಬೆಂಗಳೂರಿನಲ್ಲಿ ರಾಜ್ಯಪಾಲರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಗೆ ಇದೇ ಪ್ರಥಮ ಬಾರಿಗೆ ರಾಜ್ಯಮಟ್ಟದ ಸವೋತ್ತಮ ಪ್ರಶಸ್ತಿ ದೊರೆತಿದೆ.


Spread the love

Exit mobile version