ಮಂಗಳೂರು: ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಸೇವನೆ –ಇಬ್ಬರ ಬಂಧನ
ಮಂಗಳೂರು: ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಸೇವನೆಗೆ ಅನುವು ಮಾಡಿಕೊಟ್ಟ ಆರೋಪದ ಮೇಲೆ ಒರ್ವ ಆರೋಪಿತೆಯನ್ನು ಹಾಗೂ ಮದ್ಯ ಸೇವನೆಗೆ ಬಂದ ವ್ಯಕ್ತಿಯನ್ನು ಪುಂಜಾಲಕಟ್ಟೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಬಂಟ್ವಾಳ ತಾಲೂಕು ಕಜೆಕಾರು ನಿವಾಸಿ ಶೋಭಾ (42) ಹಾಗೂ ಸಂದೇಶ್ @ಮುನ್ನ (31) ಎಂದು ಗುರುತಿಸಲಾಗಿದೆ.
ಏಪ್ರಿಲ್ 23 ರಂದು ಬಂಟ್ವಾಳ ತಾಲ್ಲೂಕು ಬಡಗಕಜೆಕಾರು ಗ್ರಾಮದ ಮಾಡ ಎಂಬಲ್ಲಿ ಬಾಲಕೃಷ್ಣ ಪ್ರಭು ಎಂಬವರ ದಿನಸಿ ಅಂಗಡಿಯ ಬಳಿ ಸಾರ್ವಜನಿಕ ಸ್ಥಳದಲ್ಲಿ ಮಧ್ಯಪಾನ ಮಾಡಲು ಅನುವು ಮಾಡಿಕೊಡುತ್ತಿದ್ದ ಸ್ಥಳಕ್ಕೆ ಪುಂಜಾಲಕಟ್ಟೆ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರು ದಾಳಿ ನಡೆಸಿ ಮಧ್ಯ ಸೇವನೆ ಮಾಡಲು ಅನುವು ಮಾಡಿಕೊಟ್ಟ ಆರೋಪಿತೆ ಶೋಭಾ ಎಂಬವರನ್ನು ಮತ್ತು ಮಧ್ಯ ಸೇವನೆ ಮಾಡಲು ಬಂದಿದ್ದ ಆರೋಪಿ ಸಂದೇಶ@ಮುನ್ನ ಎಂಬವರನ್ನು ವಶಕ್ಕೆ ಪಡೆದು ಅವರಿಂದ 90 ML ಮೈಸೂರು ಲ್ಯಾನ್ಸರ್ ವಿಸ್ಕಿ ಮಧ್ಯ ತುಂಬಿದ ಸ್ಯಾಚೇಟ್ ಗಳು 04 .ಅರ್ಧ ಮಧ್ಯ ಉಳಿದ ಮೈಸೂರು ಲ್ಯಾನ್ಸರ್ ವಿಸ್ಕಿ 180 ML ನ ಬಾಟಲಿ 01. ಗಾಜಿನ ಗ್ಲಾಸು 01. ಹಾಗೂ ಪ್ಲಾಸ್ಟಿಕ್ ಚೀಲವನ್ನು ಸ್ವಾಧೀನಪಡಿಸಿಕೊಂಡಿದ್ದಾರೆ
ಈ ಕುರಿತು ಪುಂಜಾಲಕಟ್ಟೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಸಲಾಗಿದೆ.