ಮಂಗಳೂರು – ಸಿಂಗಾಪುರ ನೇರ ವಿಮಾನ ಕೆಲ ಕಾಲ ಮುಂದಕ್ಕೆ?

Spread the love

ಮಂಗಳೂರು – ಸಿಂಗಾಪುರ ನೇರ ವಿಮಾನ ಕೆಲ ಕಾಲ ಮುಂದಕ್ಕೆ?

ಮಂಗಳೂರು-ಸಿಂಗಾಪುರ ನಡುವಣ ನೇರ ವಿಮಾನ ಹಾರಾಟ ಕೆಲವು ದಿನಗಳ ಕಾಲ ವಿಳಂಬಗೊಳ್ಳುವ ಸೂಚನೆ ಕಂಡು ಬಂದಿದೆ.

ಇಂಡಿಯನ್ ಏರ್ಲೈನ್ಸ್ జ. 21రిం ವಾರದಲ್ಲಿ ಎರಡು ದಿನಗಳ ಕಾಲ ಈ ವಿಮಾನ ಕಾರ್ಯಾಚರಣೆ ನಡೆಸುವುದಾಗಿ ತಿಳಿಸಲಾಗಿತ್ತು. ಆದರೆ ನಿರ್ವಹಣ ಕಾರಣಗಳಿಗಾಗಿ ಇದನ್ನು ಕೆಲವು ದಿನಗಳ ಕಾಲ ಮುಂದೂಡಿದೆ.ಲಭ್ಯ ಮಾಹಿತಿಯ ಪ್ರಕಾರ ಜ. 21ರಿಂದ ಆರಂಭಗೊಳ್ಳಲಿದ್ದ ವಿಮಾನಯಾನಕ್ಕೆ ಬುಕಿಂಗ್ ತೆರೆಯಲಾಗಿತ್ತು, ಆದರೆ ನಿರೀಕ್ಷಿತ ಮಟ್ಟದಲ್ಲಿ ಬುಕಿಂಗ್ ಇಲ್ಲದ ಕಾರಣ ಪರ್ಯಾಯ ಮಾರ್ಗಗಳನ್ನು ಅನ್ವೇಷಿಸಲಾಗುತ್ತಿದೆ. ನೇರ ವಿಮಾನ ಹಾರಾಟದ ಬದಲಾಗಿ ಮಧುರೈ ಅಥವಾ ತಿರುಚ್ಚಿ ಮೂಲಕ ಸಿಂಗಾಪುರಕ್ಕೆ ತೆರಳುವುದಾದರೆ ಹೆಚ್ಚಿನ ಪ್ರಯಾಣಿಕರು ಸಿಗಬಹುದು ಎನ್ನುವ ಬಗ್ಗೆ ಏ‌ರ್ ಇಂಡಿಯಾ ಎಕ್ಸ್‌ಪ್ರೆಸ್ ಯೋಚಿಸುತ್ತಿರುವುದಾಗಿ ತಿಳಿದುಬಂದಿದೆ.

ಈಗಾಗಲೇ ಮಂಗಳೂರು-ಪುಣೆ ಮಧ್ಯೆ ಜ. 4ರಿಂದ ನೇರ ವಿಮಾನ ಹಾರಾಟ ಆರಂಭಗೊಂಡಿದೆ. ಫೆ. 1ರಿಂದ ಮಂಗಳೂರು-ದಿಲ್ಲಿ ಮಧ್ಯೆ ನೇರ ವಿಮಾನ ಹಾಗೂ ಫೆ. 15ರಿಂದ ಮಂಗಳೂರು-ಮುಂಬಯಿ ಮಧ್ಯೆ ಹೆಚ್ಚುವರಿ ವಿಮಾನ ಹಾರಾಟಗಳು ಆರಂಭಗೊಳ್ಳಲಿವೆ.


Spread the love