ಮಂಗಳೂರು: ಸಿಪಿಐ ವತಿಯಿಂದ ಕೇಂದ್ರದ ಭೂಸ್ವಾಧಿನ ಮಸೂದೆಯ ವಿರುದ್ದು ಜೈಲ್ ಭರೊ

Spread the love

ಮಂಗಳೂರು: ಸಿಪಿಐ ಜಿಲ್ಲಾ ಸಮಿತಿಯ ವತಿಯಿಂದ ಗುರುವಾರ ಕೇಂದ್ರದ ಪ್ರಸ್ತಾವಿತ ಭೂಸ್ವಾದಿನ ಮಸೂದೆಯನ್ನು ವಿರೋಧಿಸಿ ಜೈಲ್ ಭರೋ ಆಂದೊಲನ ನಡೆಯಿತು.

ಪ್ರತಿಭಟನಾ ಸಭೆಯ ಮುನ್ನ ಪ್ರತಿಭಟನಾಕಾರರು ಟೌನ್ ಹಾಲ್ ನಿಂದ ಜಿಲ್ಲಾಧಿಕಾರಿಗಳ ಕಛೇರಿಯ ತನಕ ಮೆರವಣಿಗೆ ನಡೆಸಿದರು.

cpim_protest-013cpim_protest-014

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಿಪಿಐ ಕಾರ್ಯದರ್ಶಿ ವಿ ಕುಕ್ಕಿಯಾನ್ ಮಾತನಾಡಿ ಅಧಿಕಾರಕ್ಕೆ ಬರುವ ಮೊದಲು ನರೇಂದ್ರ ಮೋದಿಯವರು ಕಪ್ಪು ಹಣವನ್ನು ತಂದು ಪ್ರತಿಯೊಬ್ಬ ನಾಗರಿಕನ ಖಾತೆಗೆ 15 ಲಕ್ಷ ಹಾಕುವುದಾಗಿ ಹೇಳಿ ಒಂದು ವರ್ಶ ಕಳೆಯಿತು. ಮೋದಿ ತನ್ನ ಮಾತುಗಳನ್ನು ಉಳಿಸಿಕೊಳ್ಳುವುದರಲ್ಲಿ ವಿಫಲವಾಗಿದ್ದು, ಅವರು ಹೇಳಿದ ಅಚ್ಚೆ ದಿನ್ ಕೇವಲ ಕಾರ್ಪೋರೆಟ್ ಜಗತ್ತಿಗೆ ಮಾತ್ರ ಸೀಮಿತವಾಗಿದೆ.  ಚುನಾವಣೆಗೆ ಸ್ಪರ್ಧೀಸುವಾಗ ಅವರು ಕಾರ್ಪೋರೆಟ್ ಕಂಪೆನಿಗಳ ಸಹಾಯದಿಂದಲೇ 400 ಸಾರ್ವಜನಿಕ ಸಭೆಗಳನ್ನು ನಡೆಸಿದ್ದು ಈಗ ಅವುಗಳ ಋಣ ತೀರಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದರು.

ಪ್ರಸ್ತುತ ಕೇಂದ್ರದ ಮೋದಿ ಸರಕಾರ ತರಲು ಉದ್ದೇಶಿಸಿರುವ ಭೂಸ್ವಾಧಿನ ಮಸೂದೆ ಸಂಪೂರ್ಣ ರೈತ ವಿರೋಧಿಯಾಗಿದ್ದು, ಪ್ರತಿಯೊಬ್ಬರ ರೈತರು ರಾಷ್ಟ್ರವ್ಯಾಪಿ ಇದನ್ನು ವಿರೋಧಿಸಬೇಕಾಗಿದೆ.  ಮೋದಿ ಸರಕಾರ ತರಲು ಉದ್ದೇಶಿಸಿರುವ ಪ್ರಸ್ತಾವಿತ ಮಸೂದೆಯನ್ನು ಸರಕಾರ ಕೂಡಲೇ ಹಿಂಪಡೆಯಬೇಕು. 2013 ರಲ್ಲಿ ಇದ್ದ ಯುಪಿಎ ಸರಕಾರ ರೈತ ಪರವಾದ ಭೂಸ್ವಾಧೀನ ಮಸೂದೆಯನ್ನು ಜಾರಿಗೆ ತಂದಿದ್ದು ಅದನ್ನು ಮೋದಿ ಸರಕಾರ ತಿದ್ದುಪಡಿ ಮಾಡಿ ಮತ್ತೆ ಜಾರಿಗೆ ತರಲು ಉದ್ದೇಶಿಸಿರುವುದು ಸಂಪೂರ್ಣ ರೈತರ ಭೂಮಿಯನ್ನು ಕಾರ್ಪೋರೇಟ್ ಕಂಪೆನಿಗಳಿಗೆ ನೀಡುವ ಹುನ್ನಾರವಾಗಿದೆ ಎಂದರು.

ಬಳಿಕ ಪ್ರತಿಭಟನಾಕಾರರು ಸಾಮೂಹಿಕವಾಗಿ ಬಂಧನಕ್ಕೊಳಗಾದರು.

 

 


Spread the love