Home Mangalorean News Kannada News ಮಂಗಳೂರು: ಸೆಪ್ಟೆಂಬರ 2ರ ಕಾರ್ಮಿಕರ ಸಾರ್ವತ್ರಿಕ ಮುಷ್ಕರಕ್ಕೆ AITUC   ಬೆಂಬಲ

ಮಂಗಳೂರು: ಸೆಪ್ಟೆಂಬರ 2ರ ಕಾರ್ಮಿಕರ ಸಾರ್ವತ್ರಿಕ ಮುಷ್ಕರಕ್ಕೆ AITUC   ಬೆಂಬಲ

Spread the love

ಮಂಗಳೂರು: ನೂರಾರು ವರ್ಷಗಳ ಸತತ ಹೋರಾಟಗಳಿಂದ ಪಡೆದುಕೊಂಡ ಅನೇಕ ಕಾರ್ಮಿಕ ಸೌಲಭ್ಯಗಳನ್ನು ಕಾರ್ಮಿಕರಿಂದ ಕಸಿದುಕೊಳ್ಳಲಾಗುತ್ತಿದೆ. ಕಾರ್ಮಿಕರ ಹಿತರಕ್ಷಣೆಗಾಗಿ ರೂಪಿತವಾಗಿರುವ ಹಲವಾರು ಕಾನೂನುಗಳಿಗೆ ತಿದ್ದುಪಡಿ ತಂದು, ಕಾರ್ಮಿಕರನ್ನು ಗುಲಾಮಗಿರಿಗೆ ತಳ್ಳುವಂತಹ ಪ್ರವೃತ್ತಿ ಸರಕಾರ ತೋರುತ್ತಿದೆ. ಕಾರ್ಪರೇಟ್ ಸಂಸ್ಥೆಗಳ ಮತ್ತು ವಿದೇಶಿ ಬಂಡವಾಳಿಗರ ಕುಮ್ಮಕ್ಕಿನಂತೆ ಈ ಕೆಲಸಗಳು ನಡೆಯುತ್ತಿವೆ.

ಕಾರ್ಮಿಕರ ಮೇಲಾಗುತ್ತಿರುವ ಪ್ರಹಾರಗಳನ್ನು ಗಮನಿಸುತ್ತಿರುವ ದೇಶದ ಎಲ್ಲಾ ಕಾರ್ಮಿಕ ಸಂಘಟನೆಗಳು  AITUC ಎಂಬ ವೇದಿಕೆಯಲ್ಲಿ ಒಂದಾಗಿ ಸರಕಾರದ ಈ ಪ್ರವೃತ್ತಿಯ ವಿರುದ್ಧ ಹೋರಾಡಲು ಪಣತೊಟ್ಟಿವೆ. ಈ ವೇದಿಕೆ ಕಳೆದ ಕೆಲವು ವರ್ಷಗಳಿಂದ ಅನೇಕ ಹೋರಾಟಗಳನ್ನು ರೂಪಿಸಿ ತಮ್ಮ ವಿರೋಧವನ್ನು ವ್ಯಕ್ತ ಪಡಿಸಿದರೂ ಸರಕಾರ ಎಚ್ಚೆತ್ತಿಲ್ಲ. ಇತೀಚೆಗೆ ನಡೆದ ಭಾರತ ಕಾರ್ಮಿಕ ಸಮ್ಮೇಳನ (Indian Labour Conference) ನಲ್ಲಿ ಕಾರ್ಮಿಕ ಸಂಘಟನೆಗಳು ಅನೇಕ ಅವಹಾಲುಗಳನ್ನು ಸಲ್ಲಿಸಿದ್ದರೂ, ಸರಕಾರ ಸ್ಪಂದಿಸಿಲ್ಲ. ದೇಶದ ಅಭಿವೃದ್ದಿಗೆ ಕಾರ್ಮಿಕ ಕಾನೂನುಗಳ ತಿದ್ದುಪಡಿ ಅಗತ್ಯವಾಗಿದೆ ಎಂದು ಸರಕಾರ ಹೇಳುತ್ತಿದೆ.

ಇದೆಲ್ಲವನ್ನು ಪ್ರತಿಭಟಿಸಿ, ಕಾರ್ಮಿಕರ 12 ಅಂಶಗಳ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಲು 2015ರ ಸೆಪ್ಟಂಬರ್ 2ರಂದು ದೇಶವ್ಯಾಪಿ ಮುಷ್ಕರ ನಡೆಸಲು ಎಲ್ಲಾ ಕಾರ್ಮಿಕ ಸಂಘಟನೆಗಳು ಕರೆಕೊಟ್ಟಿವೆ. ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಕಾರ್ಮಿಕ ಸಂಘಟನೆಗಳು ಈ ಮುಷ್ಕರದಲ್ಲಿ ಸಂಪೂರ್ಣವಾಗಿ ಭಾಗವಹಿಸಲು ಇತೀಚೆಗೆ ನಡೆದ ಎಲ್ಲಾ ಕಾರ್ಮಿಕ ಸಂಘಟನೆಗಳ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಈ ಕರೆಯಂತೆ ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ (AITUC)ನ ದಕ್ಷಿಣ ಕನ್ನಡದ ಜಿಲ್ಲಾ ಸಮಿತಿ ಈ ಮುಷ್ಕರದಲ್ಲಿ ಪೂರ್ಣ ರೀತಿಯಲ್ಲಿ ಭಾಗವಹಿಸಲು ತೀರ್ಮಾನಿಸಿದೆ. ಅಂದು AITUC ಗೆ ಸೇರಿದ ಎಲ್ಲಾ ಕಾರ್ಮಿಕರು ಇಡೀ ದಿನದ ಮುಷ್ಕರ ಭಾಗಿಗಳಾಗಲಿದ್ದಾರೆ.


Spread the love

Exit mobile version