ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯ ಎಸ್.ಡಿ.ಎಂ. ಕಾಲೇಜಿನ ವಿದ್ಯಾರ್ಥಿನಿ ಕು|| ಸೌಜನ್ಯ ಅತ್ಯಾಚಾರಕ್ಕೊಳಗಾಗಿ ಕೊಲೆಯಾಗಿ ಮೂರು ವರ್ಷವಾಗುತ್ತಿದ್ದು ಆಕೆಯನ್ನು ಸ್ಪರಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮೆಣದ ಬತ್ತಿ ಮೆರವಣಿಗೆ ನಡೆಸಿತು.
ಸೌಜನ್ಯ ಪ್ರಕರಣದಲ್ಲಿ ಸರ್ಕಾರ ಅನುಸರಿಸಿದ ಮೃದುಧೋರಣೆಯಿಂದಾಗಿಯೇ ನಂತರದ ದಿನಗಳಲ್ಲಿ ಇದೇ ರೀತಿಯ ಘಟನೆಗಳು ಸಂಭವಿಸಿ ಕು|| ರತ್ನಾ ಕೋಠಾರಿ, ಕು|| ನಂದಿತಾ ಪೂಜಾರಿ, ಕು|| ಅಕ್ಷತಾ ದೇವಾಡಿಗ ಹೀಗೆ ಸಾಲು ಸಾಲು ಮುಗ್ಧ ಹೆಣ್ಣು ಮಕ್ಕಳು ಕಾಮುಕರ ಅಟ್ಟಹಾಸಕ್ಕೆ ಬಲಿಯಾದರು. ಪ್ರಕರಣವನ್ನು ಸಿ.ಬಿ.ಐ. ಗೆ ವಹಿಸುವ ಸರ್ಕಾರವು, ತನಿಖೆ ಯಾವ ಹಂತದಲ್ಲಿದೆ ಎಂದು ಬಹಿರಂಗಪಡಿಸಬೇಕು ಹಾಗೂ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಲಾಯಿತು.
ತೇಜಸ್ವಿ, ಚೇತನ್ ಪಡೀಲ್, ಹಿತೇಶ್ ಬೆಕ್ಕಲ್, ಆದಿತ್ಯ ಶೆಟ್ಟಿ, ಸುನಿಲ್ ಎಲ್ಲ ಸದಸ್ಯರು ಉಪಸ್ಥಿತರಿದ್ದರು.