ಮಂಗಳೂರು ಎಪ್ರಿಲ್ 22 (ಕನರ್ಾಟಕ ವಾತರ್ೆ):_ದ.ಕ.ಜಿಲ್ಲೆಯ ಕೇಂದ್ರಿಯ ಉಪನೊಂದಾಣಾಧಿಕಾರಿಗಳ ಕಚೇರಿ, ಮಂಗಳೂರು ನಗರ ಕಚೇರಿ ವ್ಯಾಪ್ತಿಗೆ ಒಳಪಡುವ ಸ್ಥಿರಾಸ್ತಿಗಳ ಮೌಲ್ಯದ ಪರಿಷ್ಕರಣಾ ಕಾರ್ಯವನ್ನು ಸಂಬಂದಪಟ್ಟ ಕಚೇರಿಯ ಸ್ಥಿರ ಸ್ವತ್ತುಗಳ ಮೌಲ್ಯಮಾಪನ ಉಪಸಮಿತಿಯ ವತಿಯಿಂದ ಮಾಡಲಾಗಿದೆ. ಈ ಪರಿಷ್ಕೃತ ಮೌಲ್ಯ ಪಟ್ಟಿಯನ್ನು ಈ ಕಚೇರಿಗಳಿಗೆ ಸಂಬಂದಿಸಿದ ಉಪಸಮಿತಿಯ ಸದಸ್ಯರ ಕಚೇರಿಗಳಾದ ತಾಲೂಕು ಕಚೇರಿ ಮಂಗಳೂರು. ತಾಲೂಕು ಕೇಂದ್ರೀಯ ಉಪನೋಂದಾಣಾಧಿಕಾರಿಗಳ ಕಚೇರಿ ಮಂಗಳೂರು ನಗರ, ಮಂಗಳೂರು ಮಹಾ ನಗರ ಪಾಲಿಕೆ , ಸಹಾಯಕ ಕೃಷಿ ನಿದರ್ೇಶಕರ ಕಚೇರಿ, ಮಂಗಳೂರು ಹಾಗೂ ಲೋಕೋಪಯೋಗಿ ಇಲಾಖೆ, ಉಪವಿಭಾಗ ಮಂಗಳೂರು ತಾಲೂಕು ಕಚೇರಿಗಳಲ್ಲಿ ಸಾರ್ವಜನಿಕರ ಅವಗಾಹನೆಗೆ ಏಪ್ರಿಲ್ 20 ರಿಂದ ಪ್ರಕಟಿಸಲಾಗಿದೆ.
ಸಾರ್ವಜನಿಕರಿಂದ ಈ ಬಗ್ಗೆ ಆಕ್ಷೇಪಣೆಗಳೇನಾದರೂ ಇದ್ದಲ್ಲಿ ಪ್ರಕಟಣೆಯಾದ ದಿನಾಂಕದಿಂದ ಹದಿನೈದು ದಿವಸದೊಳಗೆ ಸೂಕ್ತ ಕಾರಣಗಳನ್ನು ನಮೂದಿಸಿ ಲಿಖಿತವಾಗಿ ಅಧ್ಯಕ್ಷರು ಹಾಗೂ ತಹಸೀಲ್ದಾರರು ತಾಲೂಕು ಕಚೇರಿ, ಮಂಗಳೂರು ತಾಲೂಕು ಅಥವಾ ಸದಸ್ಯ ಕಾರ್ಯದಶರ್ಿ, ಉಪ ನೊಂದಣಾಧಿಕಾರಿ ಮಂಗಳೂರು ನಗರ ಇವರ ಕಚೇರಿ ವಿಳಾಸಕ್ಕೆ ಸಲ್ಲಿಸಬಹುದು.